‘Pay CM’ ಪೋಸ್ಟರ್‌ಗಳಲ್ಲಿ ತನ್ನ ಫೋಟೋ ಬಳಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ದ ಸಿಡಿದೆದ್ದ ನಟ ಅಖಿಲ್!

karnataka

Bengaluru : ಬೆಂಗಳೂರು(Bengaluru) ಮೂಲದ ನಟ ಅಖಿಲ್ ಅಯ್ಯರ್(Akhil Iyer) ಅವರು ಕರ್ನಾಟಕ(Karnataka) ಕಾಂಗ್ರೆಸ್‌(Congress) ರೂಪಿಸಿರುವಂತಹ ಪೇ ಸಿಎಂ ಪೋಸ್ಟರ್‌ಗಳಿಗೆ(Pay CM Poster) ತಮ್ಮ ಫೋಟೋವನ್ನು ತನ್ನ ಅರಿವಿಗೆ ಬಾರದೆ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್(Congress) ವಿರುದ್ಧ ಗುಡುಗಿದ್ದಾರೆ.

ತಮ್ಮ ಒಪ್ಪಿಗೆಯಿಲ್ಲದೆ ಅವರ ಫೋಟೋ ಬಳಸಲಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ(BJP) ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಚಿತ್ರವಿರುವ ಪೇ ಸಿಎಂ ಪೋಸ್ಟರ್‌ಗಳನ್ನು ಹಾಕಲಾಗಿದೆ.

https://youtu.be/YpcfmC0BaaM ವಿದ್ಯೆಯಿಂದ ವಂಚಿತರಾದ ಮಕ್ಕಳು!

ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಶೇಕಡಾ 40% ರಷ್ಟು ಕಮಿಷನ್ ದರವು ಹೇಗೆ ರೂಢಿಯಾಗಿದೆ ಎನ್ನುವುದನ್ನು ಪ್ರತ್ಯೇವಾಗಿ ಪ್ರದರ್ಶಿಸಲು “40% ಸರ್ಕಾರ” ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಪೋಸ್ಟರ್‌ನಲ್ಲಿ ಅಖಿಲ್ ಅಯ್ಯರ್ ಅವರ ಫೋಟೋವನ್ನು ಕಾಂಗ್ರೆಸ್ ಬಳಸಿಕೊಂಡಿದ್ದು,

“40% ಸರ್ಕಾರ 54,000 ಕ್ಕೂ ಹೆಚ್ಚು ಯುವಕರ ವೃತ್ತಿಜೀವನವನ್ನು ಕಸಿದುಕೊಂಡಿದೆ” ಎಂಬ ಪದಗಳನ್ನು ಬಳಸಿದೆ. ಟ್ವಿಟರ್‌ನಲ್ಲಿ ನಟ ಅಖಿಲ್ ಅಯ್ಯರ್ ಅವರು ತಮ್ಮ ಚಿತ್ರದ ಕುರಿತು ಟ್ವೀಟ್ ಮಾಡಿದ್ದು, ಅಕ್ರಮ ಬಳಕೆಯನ್ನು ವಿರೋಧಿಸಿದ್ದಾರೆ. “ನನ್ನ ಮುಖವನ್ನು ಕಾನೂನುಬಾಹಿರವಾಗಿ ಮತ್ತು ನನ್ನ ಒಪ್ಪಿಗೆಯಿಲ್ಲದೆ “40% ಸರ್ಕಾರ” ಎಂಬ ಕಾಂಗ್ರೆಸ್ ಪ್ರಚಾರಕ್ಕಾಗಿ ಬಳಸುತ್ತಿರುವ ಪೇ ಸಿಎಂ ಪೋಸ್ಟರ್ ನಲ್ಲಿ ನೋಡಿ ನನಗೆ ಅಶ್ಚರ್ಯವಾಯಿತು.

https://twitter.com/akhiliy/status/1573191131336421377?s=20&t=gh4D47NhtcVosVo-gTVt7w

ಇದರ ವಿರುದ್ಧ ಕಾನೂನು(Law) ಕ್ರಮಕೈಗೊಳ್ಳುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ(Rahul Gandhi) ಮತ್ತು ಸಿದ್ದರಾಮಯ್ಯ(Siddaramaiah) ಅವರನ್ನು ಟ್ಯಾಗ್ ಮಾಡಿದ ಅವರು ಈ ವಿಷಯವನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

Exit mobile version