ಆನಂದ್ ಸಿನಿಮಾಸ್‌ನಿಂದ “ಆತ್ಮ ನಿರ್ಭರ ಭಾರತ”

”ಆತ್ಮ ನಿರ್ಭರತ  ಭಾರತ” ವಿಶ್ವಕ್ಕೆ ಗುರುವಾಗಲಿ … ವಿಡಿಯೋ ಸಾಂಗ್ ಆನಂದ್‌ ಸಿನಿಮಾಸ್‌ನಿಂದ ಬಿಡುಗಡೆಯಾಗಲಿದೆ. ಸುಮಾರು ೮ ತಿಂಗಳಿನಿಂದ ಕೊರೋನ ಎಂಬ ಸಣ್ಣ ವೈರಾಣು ಕೊಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಇದರಿಂದಾಗಿ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿ, ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಇಂತಹ ಪರಿಸ್ಥಿತಿಯಲ್ಲಿ ಕೊರೋನ ವಿರುದ್ದ ಹೋರಾಡಲು ಹಾಗೂ ಕನ್ನಡಿಗರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ “ಆತ್ಮ ನಿರ್ಭರತ  ಭಾರತ” ವಿಶ್ವಕ್ಕೆ ಗುರುವಾಗಲಿ… ವಿಡಿಯೋ ಸಾಂಗ್ ನಿರ್ಮಿಸಲಾಗಿದೆ.

ಈ ವಿಡಿಯೋ ಸಾಂಗ್ ನಲ್ಲಿ ನಮ್ಮ ಪರಂಪರೆ, ನಮ್ಮ ಶಕ್ತಿ ಹಾಗೂ ನಮ್ಮ ಸಾಧನೆ ಏನು? ಎಂಬ ವಿಷಯ ತಿಳಿಸಿ, ಎಷ್ಟೋ ಕಷ್ಟಗಳನ್ನು ಎದುರಿಸಿರುವ ನಾವು ಕೊರೋನ ವಿರುದ್ಧ ಹೋರಡಲಾರೆವಾ? ಎಂದು ಎಲ್ಲರಿಗೂ ಧೈರ್ಯ ತುಂಬುವ ಗೀತೆಯಾಗಿ ಈ ಹಾಡು ಮೂಡಿಬಂದಿದೆ.

ಆನಂದ್ ಸಿನಿಮಾಸ್ ಮೂಲಕ‌‌ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮುಣೋತ್ ಈ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಈ ಹಿಂದೆ ”ನಮಗಾಗಿ ಜೀವ ಕೊಟ್ಟವರು” ಎಂಬ ವಿಡಿಯೋ ಸಾಂಗ್ ಸಹ ಬಿಡುಗಡೆ ಮಾಡಿದ್ದರು.

ಎಂ. ಗಜೇಂದ್ರ ”ಆತ್ಮನಿರ್ಭರತ ಭಾರತ” ವಿಶ್ವಕ್ಕೆ ಗುರುವಾಗಲಿ. ವಿಡಿಯೋ ಸಾಂಗ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿರುವ ಈ ಹಾಡನ್ನು  ರಾಜ್ಯ ಪ್ರಶಸ್ತಿ ವಿಜೇತ ಗಾಯಕ ತೇಜಸ್ವಿ ಹರಿದಾಸ್ ಹಾಡಿದ್ದಾರೆ. ಮೂರುರಾಯರಗಂಡ ಸಾಹಿತ್ಯ ಬರೆದಿರುವ ಈ ಹಾಡಿಗೆ ಲಕ್ಷ್ಮೀಕಾಂತ್ – ವೀರೇಶ್ ಛಾಯಾಗ್ರಹಣ‌ ಹಾಗೂ ಶ್ರೀ ಜವಳಿ ಅವರ ಸಂಕಲನವಿದೆ.

Exit mobile version