13 ವರ್ಷದ ಬಾಲಕಿಯ ಮೇಲೆ 80 ಜನರಿಂದ 8 ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ!

andrapradesh

ಆಂಧ್ರಪ್ರದೇಶ : ಎಂಟು ತಿಂಗಳಿನಿಂದ ವೇಶ್ಯಾವಾಟಿಕೆಗೆ 13 ವರ್ಷದ ಬಾಲಕಿಯನ್ನು ಬಲವಂತವಾಗಿ ನೂಕಿ 8 ತಿಂಗಳ ಕಾಲ 80 ಜನರಿಂದ ಅತ್ಯಾಚಾರ(Rape) ಎಸಗಿರುವ ಘಟನೆ ಆಂಧ್ರಪ್ರದೇಶದ(Andrapradesh) ಗುಂಟೂರಿನಲ್ಲಿ(Guntur) ನಡೆದಿದೆ.

ಪೊಲೀಸರು ಮಂಗಳವಾರ, ಏಪ್ರಿಲ್ 19 ರಂದು ಬಾಲಕಿಯನ್ನು ಹಾಳು ಕೊಂಪೆಯಿಂದೆ ರಕ್ಷಿಸಿದ್ದಾರೆ. ಎಂಟು ತಿಂಗಳ ಅವಧಿಯಲ್ಲಿ 80 ಕ್ಕೂ ಹೆಚ್ಚು ಪುರುಷರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮಂಗಳವಾರ, ಏಪ್ರಿಲ್ 19 ರಂದು ಬಿ.ಟೆಕ್ ವಿದ್ಯಾರ್ಥಿಗಳು ಸೇರಿದಂತೆ 10 ಜನರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಸ್ಥಳೀಯ ಸುದ್ದಿಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಪರಾಧದಲ್ಲಿ ಭಾಗಿಯಾಗಿರುವ 80 ಜನರನ್ನು ಬಂಧಿಸಲು ತನಿಖೆ ಆರಂಭಿಸಿದ್ದು, ಪರಾರಿಯಾಗಿರುವ ಹೆಚ್ಚಿನ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಜೂನ್ 2021 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಯಲ್ಲಿ ತನ್ನ ತಾಯಿಯೊಂದಿಗೆ ಸ್ನೇಹ ಬೆಳೆಸಿದ ಸವರ್ಣ ಕುಮಾರಿ ಎಂಬ ಅಪರಿಚಿತ ಮಹಿಳೆ ಬಾಲಕಿಯ ತಾಯಿ ಕೋವಿಡ್ ಖಾಯಿಲೆಯಿಂದ ಸಾವನ್ನಪ್ಪಿದ ಬಳಿಕ ಆಕೆಯನ್ನು ದತ್ತು ಪಡೆಯುವ ನೆಪದಲ್ಲಿ ಬಲವಂತವಾಗಿ ವೇಶ್ಯವಾಟಿಕೆಗೆ ನೂಕಿದ್ದಾಳೆ ಎನ್ನಲಾಗಿದೆ. ಬಾಲಕಿಯ ತಂದೆಯ ಅರಿವಿಗೆ ಬಾರದಂತೆ ಬಾಲಕಿಯನ್ನು ಕರೆದೊಯ್ದಿದ್ದಾಳೆ. ಆಗಸ್ಟ್ 2021 ರಲ್ಲಿ, ಹುಡುಗಿಯ ತಂದೆ ಪೊಲೀಸರನ್ನು ಸಂಪರ್ಕಿಸಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ದಾಖಲಿಸಿದ್ದಾರೆ.

ದೂರಿನ ಹಿಂದೆ ಬಿದ್ದ ಪೊಲೀಸರು ಪ್ರಮುಖ ಆರೋಪಿ ಮಹಿಳೆ ಸವರ್ಣ ಕುಮಾರಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣದಲ್ಲಿ ಮೊದಲ ಬಂಧನವನ್ನು ಜನವರಿಯಲ್ಲಿ ಮಾಡಲಾಗಿತ್ತು ಮತ್ತು ಮಂಗಳವಾರ, ಏಪ್ರಿಲ್ 19 ರಂದು ಗುಂಟೂರು ಪಶ್ಚಿಮ ವಲಯ ಪೊಲೀಸರು ಬಿ.ಟೆಕ್ ವಿದ್ಯಾರ್ಥಿ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆಯನ್ನು ಪ್ರಶ್ನಿಸಿದಾಗ, ಪೊಲೀಸರು ಸಂತ್ರಸ್ತೆಯ ಪರಿಸ್ಥಿತಿಯ ಭಯಾನಕ ಮತ್ತು ಆಘಾತಕಾರಿ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಕಳೆದ ಎಂಟು ತಿಂಗಳಿನಿಂದ, 13 ವರ್ಷದ ಬಾಲಕಿಯನ್ನು ವೇಶ್ಯವಾಟಿಕೆಗೆ ವ್ಯಾಪಾರದಲ್ಲಿ ಬಳಸಿಕೊಂಡಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ವೇಶ್ಯಾಗೃಹಗಳಿಗೆ ಕಳುಹಿಸಲಾಗಿತ್ತು. ಇದರ ಆಧಾರದ ಮೇಲೆ ಬಾಲಕಿಯನ್ನು ಕರೆದೊಯ್ದ ಮಹಿಳೆ ಸವರ್ನ ಕುಮಾರಿ, ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿದ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು 80 ಆರೋಪಿಗಳನ್ನು ಸದ್ಯ ಗುರುತಿಸಿದ್ದು, ಅವರನ್ನು ಬಂಧಿಸಲು ಬೆನ್ನತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಸುಪ್ರಜಾ ತಿಳಿಸಿದ್ದಾರೆ.

Exit mobile version