ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ (Karnataka Cooperative Apex Bank) ಸಹಾಯಕ ಹುದ್ದೆಗಳಿಗೆ (Apex Bank Recruitment 2024) ಅರ್ಜಿ ಆಹ್ವಾನಿಸಲಾಗಿದ್ದು, ಈ ಬಗ್ಗೆ ಅಧಿಕೃತ
ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ (Apex Bank Recruitment 2024) ಇರುವವರು ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಉದ್ಯೋಗ ಬ್ಯಾಂಕ್ : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ
ಹುದ್ದೆ ಹೆಸರು : ಸಹಾಯಕರು
ಹುದ್ದೆಗಳ ಸಂಖ್ಯೆ : 93
ವೇತನ : 28,425-87,125.
ಅರ್ಹತೆಗಳು :
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಪದವಿ ಪಡೆದಿರಬೇಕು.
GM, OBC ಅಭ್ಯರ್ಥಿಗಳು ಶೇ.55 ಅಂಕಗಳೊಂದಿಗೆ ಪದವಿ ಪಾಸ್ ಆಗಿರಬೇಕು.
SC / ST / PWD ಅಭ್ಯರ್ಥಿಗಳು ಶೇ.50 ಅಂಕಗಳೊಂದಿಗೆ ಪದವಿ ಪಾಸ್ ಆಗಿರಬೇಕು.
ಕನ್ನಡವನ್ನು ಬರೆಯಲು ಹಾಗೂ ಮಾತನಾಡಲು ಬರಬೇಕು.
ಕಂಪ್ಯೂಟರ್ ಕುರಿತು ಉತ್ತಮ ಜ್ಞಾನವನ್ನು ಹೊಂದಿರಬೇಕು.
ಸಹಕಾರ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವವರಿಗೆ ಆದ್ಯತೆ.
ಕನಿಷ್ಠ 21 ವರ್ಷ ವಯಸ್ಸು ಆಗಿರಬೇಕು.
GM 35 ವರ್ಷ, OBC ವರ್ಗದವರಿಗೆ 38 ವರ್ಷ, SC /ST ವರ್ಗದವರಿಗೆ 40 ವರ್ಷ ವಯಸ್ಸು ಗರಿಷ್ಠ ಮೀರಿರಬಾರದು.
ಅರ್ಜಿ ಶುಲ್ಕ ವಿವರ :
GM, OBC ಅಭ್ಯರ್ಥಿಗಳಿಗೆ ರೂ.1000.
SC/ ST / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.500.
ಆಯ್ಕೆ ವಿಧಾನ : ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ 1:5 ಅಭ್ಯರ್ಥಿಗಳಿಗೆ 15 ಅಂಕಗಳಿಗೆ ಮೌಖಿಕ ಪರೀಕ್ಷೆ ನಡೆಸಲಾಗುವುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ : 07-03-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 06-04-2024
ಅಧಿಕೃತ ವೆಬ್ಸೈಟ್ : https://www.emsecure.in/ApexBankApplication/Content/pdf/Apex_Notification.pdf
https://www.emsecure.in/ApexBankApplication/index.html
ಇದನ್ನು ಓದಿ: BBMP Property Tax: ಬೆಂಗಳೂರಿಗರ ಟೆನ್ಶನ್ ದೂರ ಮಾಡಿದ ಡಿ.ಕೆ ಶಿವಕುಮಾರ್