ಫೇಸ್‌ಬುಕ್‌ ಸೇರಿಸಿ 89 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಸೇನೆ ಆಗ್ರಹ

ದೆಹಲಿ: ಈಗಾಗಲೇ ಚೀನಾದ 40ಕ್ಕೂ ಅಧಿಕ ಅಪ್ಲಿಕೇಶನ್‌ಗಳ ಮೇಲೆ ನಿರ್ಭಂದ ಹೇರಿರುವ ಕೇಂದ್ರ ಸರಕಾರಕ್ಕೆ ಇದೀಗ ಭಾರತೀಯ ಸೇನೆ ಹೊಸ ಮನವಿ ಸಲ್ಲಿಸಿದ್ದು ಫೇಸ್‌ಬುಕ್‌, ಪಬ್‌ಜಿ ಸೇರಿದಂತೆ 89 ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆಗ್ರಹಿಸಿದೆ.

ಎಎನ್‌ಐ ವರದಿ ಪ್ರಕಾರ, ಮಾಹಿತಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಭಾರತೀಯ ಸೇನೆ ತಮ್ಮ ಸೈನಿಕರಿಗೆ ಫೇಸ್‌ಬುಕ್‌, ಟಿಕ್‌ಟಾಕ್‌, ಒಳಗೊಂಡು ಒಟ್ಟು ೮೯ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಮನವಿ ಸಲ್ಲಿಸಿದೆ .

ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುವ ರೀತಿ ಚಟುವಟಿಕೆಗಳು ನಡೆಸುತ್ತಿರುವ ಕಾರಣಗಳನ್ನು ನೀಡಿ ಇನ್‌ಸ್ಟಾಗ್ರಾಮ್‌, ಸ್ನ್ಯಾಪ್‌ಚ್ಯಾಟ್‌, ಫೇಸ್‌ಬುಕ್‌ ರೀತಿಯ ಚೀನಾ ಮೂಲ ಹೊರತಾದ ಅಪ್ಲಿಕೇಷನ್‌ಗಳನ್ನೂ ರಕ್ಷಣಾ ಕಾರಣಗಳಿಂದಾಗಿ ತೆಗೆಯುವಂತೆ ಹೇಳಿದೆ.

ಈಗಾಗಲೇ ಭಾರತ ಸರ್ಕಾರ ಟಿಕ್‌ಟಾಕ್‌, ಕ್ಯಾಮ್‌ಸ್ಕ್ಯಾನರ್‌, ಯುಸಿ ನ್ಯೂಸ್, ಶೇರ್‌ಇಟ್‌ ಸೇರಿದಂತೆ ಚೀನಾದ ಒಟ್ಟು 59 ಆ್ಯಪ್‌ಗಳನ್ನು ನಿಷೇಧಿಸಿದೆ.

Exit mobile version