ಬಿಜೆಪಿಗೆ ವರವಾಯಿತೇ ಓವೈಸಿಯ AIMIM? ಅಚ್ಚರಿ ಅಂಕಿ ಅಂಶಗಳು ಇಲ್ಲಿವೆ!

asaduddin

ಉತ್ತರಪ್ರದೇಶ ಚುನಾವಣೆಯಲ್ಲಿ(Uttarpradesh Elections) ಬಿಜೆಪಿ(BJP) ಭರ್ಜರಿ ಗೆಲುವು ದಾಖಲಿಸುವುದಕ್ಕೆ ಪರೋಕ್ಷವಾಗಿ ಅಸಾದುದ್ದೀನ್ ಓವೈಸಿ(Asaduddin Owaisi) ನೇತೃತ್ವದ ಎಐಎಂಐಎಂ(AIMIM) ಪಕ್ಷ ಕೊಡುಗೆ ನೀಡಿದೆ ಎನ್ನಲಾಗುತ್ತಿದೆ. ಅಲ್ಪಸಂಖ್ಯಾತ ಮತಗಳನ್ನು ಒಡೆಯುವುದರಲ್ಲಿ ಅಸಾದುದ್ದೀನ್ ಓವೈಸಿ ಯಶಸ್ವಿಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ(Samajwadi Party) ಮುಖಂಡರು ಆರೋಪಿಸಿದ್ದಾರೆ. ಚುನಾವಣೆಗೂ ಪೂರ್ವದಿಂದಲೂ ಎಐಎಂಐಎಂ ಪಕ್ಷ ಬಿಜೆಪಿಯ ಬಿ-ಟೀಮ್ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದ್ದವು. ಚುನಾಣೆಯ ಫಲಿತಾಂಶವನ್ನು ಗಮನಿಸಿದರೆ, ಅದು ಸತ್ಯ ಎನ್ನುವ ಅಂಕಿಅಂಶಗಳು ಹೊರಬಿದ್ದಿವೆ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳ ಧ್ರುವೀಕರಣದ ಹಿಂದೆ ಓವೈಸಿ ಪ್ಲ್ಯಾನ್ ಕೆಲಸ ಮಾಡಿದೆ. ಗೆಲ್ಲುವ ಶಕ್ತಿ ಎಐಎಂಐಎಂ ಪಕ್ಷಕ್ಕೆ ಇಲ್ಲದಿದ್ದರೂ, ಸೋಲಿಸುವ ಶಕ್ತಿ ಇದೆ ಎಂದು ಓವೈಸಿ ಸಾಬೀತು ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 200 ಮತಗಳ ಅಂತರದಿಂದ ಗೆದ್ದಿದೆ. 23 ಕ್ಷೇತ್ರಗಳಲ್ಲಿ 500 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. 49 ಕ್ಷೇತ್ರಗಳಲ್ಲಿ 1000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, 86 ಕ್ಷೇತ್ರಗಳಲ್ಲಿ 2000 ಮತಗಳ ಅಂತರದಿಂದ ಗೆದ್ದು ಅತಿದೊಡ್ಡ ಪಕ್ಷವಾಗಿ ಸರ್ಕಾರ ರಚಿಸಿದೆ.

ಇನ್ನು ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲಾಗಿರುವುದು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ. ಒಂದು ವೇಳೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸದೇ ಇದ್ದಿದ್ದರೆ, ಅದರ ಲಾಭ ನೇರವಾಗಿ ಸಮಾಜವಾದಿ ಪಕ್ಷಕ್ಕಾಗುತ್ತಿತ್ತು ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಫಲಿತಾಂಶದ ಅಂಕಿಅಂಶಗಳನ್ನು ಗಮನಿಸಿದರೆ, ಸಮಾಜವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟಿದ್ದು ಬಿಜೆಪಿಯಲ್ಲ, ಬದಲಾಗಿ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ.

ಬಿಜನೋರ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ 95,72ಒ ಮತಗಳು ಸಿಕ್ಕಿದ್ದರೆ, ಬಿಜೆಪಿ ಅಭ್ಯರ್ಥಿಗೆ 97,165 ಮತಗಳು ಲಭಿಸಿದ್ದರೆ, ಎಐಎಂಐಎಂ ಅಭ್ಯರ್ಥಿ 3591 ಮತಗಳನ್ನು ಗಳಿಸಿ ಸಮಾಜವಾದಿ ಪಕ್ಷದ ಗೆಲುವಿಗೆ ಅಡ್ಡಲಾಗಿದ್ದಾನೆ. ಅದೇ ರೀತಿ ಫಿರೋಜಾಬಾದ್‍ನಲ್ಲಿ 1,12,509 ಮತಗಳನ್ನು ಬಿಜೆಪಿ ಗಳಿಸಿದರೆ, ಸಮಾಜವಾದಿ ಪಕ್ಷದ ಅಭ್ಯರ್ಥಿ 79,554 ಮತಗಳು ಮತ್ತು ಎಐಎಂಐಎಂ ಅಭ್ಯರ್ಥಿ 18,898 ಮತಗಳನ್ನು ಪಡೆದಿದ್ದಾರೆ.

ಹಾಗೆ ಕುರ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ 1,18,094 ಮತಗಳಿಸಿದ್ದರೆ, ಬಿಜೆಪಿ 1,18,614 ಮತಗಳಿಸಿ ಗೆಲುವು ದಾಖಲಿಸಿದ್ದರೆ, ಎಐಎಂಐಎಂ 8,541 ಮತಗಳನ್ನು ಪಡೆದಿದೆ. ಒಟ್ಟಾರೆಯಾಗಿ ಉತ್ತರಪ್ರದೇಶ ಚುನಾವಣೆಯ ಅಂಕಿಅಂಶಗಳನ್ನು ಗಮನಿಸಿದರೆ, ಸಮಾಜವಾದಿ ಪಕ್ಷದ ಗೆಲುವಿಗೆ ಬಹುತೇಕ ಕಡೆ ಮತ ವಿಭಜನೆಯೇ ಕಾರಣವಾಗಿದೆ. ಅದರ ಲಾಭ ನೇರವಾಗಿ ಬಿಜೆಪಿಗೆ ವರವಾಗಿದೆ. ಸಮಾಜವಾದಿ ಪಕ್ಷದ ಕಾರ್ಯತಂತ್ರಕ್ಕೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಕಡಿವಾಣ ಹಾಕಿದೆ. ಅಲ್ಪಸಂಖ್ಯಾತ ಮತಗಳ ಧ್ರುವೀಕರಣದ ಹಿಂದೆ ಓವೈಸಿ ತಂತ್ರ ಕೆಲಸ ಮಾಡಿದ್ದಾರೆ.

Exit mobile version