ಲಖಿಂಪುರ ಖೇರಿ ಪ್ರಕರಣ: ಆಶಿಶ್ ಮಿಶ್ರಾ ಜಾಮೀನನ್ನು 2ನೇ ಬಾರಿಗೆ ರದ್ದುಗೊಳಿಸಿ : SIT!

SIT

ಸುಪ್ರೀಂ ಕೋರ್ಟ್(Supremecourt) ನೇಮಿಸಿದ ಸಮಿತಿಯು ಲಖಿಂಪುರ ಖೇರಿ(Lankhipuri Kheri) ಪ್ರಕರಣದಲ್ಲಿ ಸದ್ಯ ಸ್ಥಿತಿ ವರದಿಯನ್ನು ಸಲ್ಲಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಪ್ರಧಾನ ಆರೋಪಿ ಆಶಿಶ್ ಮಿಶ್ರಾಗೆ(Ashish Mishra) ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಎರಡು ಬಾರಿ ಉತ್ತರ ಪ್ರದೇಶ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂಬುದನ್ನು ತಿಳಿಸಿದೆ. ಲಖಿಂಪುರ ಖೇರಿ ಪ್ರಕರಣದಲ್ಲಿ ಆಶಿಶ್ ಮಿಶ್ರಾಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸುವಂತೆ ಮಾಡಿದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಈಗ ಕಾಯ್ದಿರಿಸಿದೆ.

ಆಶಿಶ್ ಮಿಶ್ರಾ ಹಿಂಸಾಚಾರದ ಸ್ಥಳದಲ್ಲಿದ್ದರು: ಎಸ್‌ಸಿ ನೇಮಕ ಸಮಿತಿ
ಎಂಟು ಜನರ ಸಾವಿಗೆ ಕಾರಣವಾದ ಹಿಂಸಾಚಾರದ ಸ್ಥಳದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಇದ್ದರು ಮತ್ತು ಅಕ್ಟೋಬರ್‌ನಲ್ಲಿ ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ತೆಗೆದುಕೊಂಡ ಮಾರ್ಗವನ್ನು ಬದಲಾಯಿಸುವ ಬಗ್ಗೆ ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು ಎಂದು ಅದರ ವರದಿಯು ಪುರಾವೆಗಳನ್ನು ಸಾಬೀತುಪಡಿಸಿದೆ.

ಮೌರ್ಯ ಭೇಟಿಯನ್ನು ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಆಶಿಶ್ ಮಿಶ್ರಾ ಅವರ ಮೇಲೆ ಹರಿಹಾಯ್ದ ಆರೋಪ ಹೊರಿಸಲಾಗಿತ್ತು. ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು, ನಂತರ ಕೇಂದ್ರವು ಅದನ್ನು ರದ್ದುಗೊಳಿಸಿತು.

ವಿಶೇಷ ತನಿಖಾ ತಂಡದ ಶಿಫಾರಸಿನಂತೆ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರ ಜಾಮೀನು ರದ್ದುಗೊಳಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಾರ್ಚ್ 30 ರಂದು ಉತ್ತರ ಪ್ರದೇಶ ಆಡಳಿತವನ್ನು ಪ್ರಶ್ನಿಸಿತ್ತು. ಸದ್ಯ ಈ ಕುರಿತು ಈಗ ಎಸ್ಐಟಿ ಅಶಿಶ್ ಮಿಶ್ರಾ ಜಾಮೀನನ್ನು ಎರಡನೇ ಬಾರಿಗೆ ರದ್ದುಗೊಳಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

Exit mobile version