ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ

ಬೆಂಗಳೂರು ಡಿ 4 : ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದಿಕೊಂಡು ಸುಮಾರು 1 ತಿಂಗಳು ಕಳೆದುಹೋಗಿದೆ. ಇದೀಗ ಅವರ ಅಭಿಮಾನಿಗಳಿಗೆ ಅವರ ಪತ್ನಿ ಸಿಹಿ ಸುದ್ದಿ ನೀಡಿದ್ದು, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ನವೆಂಬರ್ 1ರಂದು ಬಿಡುಗಡೆಯಾಗಬೇಕಿದ್ದ ಕರ್ನಾಟಕದ ಕುರಿತಾದ ಡಾಕ್ಯುಮೆಂಟರಿ ರಿಲೀಸ್ ಆಗಲಿಲ್ಲ. ಇದೀಗ ಇದೇ ಡಾಕ್ಯುಮೆಂಟರಿ ಕುರಿತಾಗಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪ್ರಮುಖ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ. ಅಪ್ಪು ಅವರ ಕನಸಿನ ಪ್ರಾಜೆಕ್ಟ್‌ನ ಟೈಟಲ್ ಟೀಸರ್ ಡಿಸೆಂಬರ್ 6ರಂದು ಪಿಆರ್‌ಕೆ ಆಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ಅಶ್ವಿನಿ ಅವರು ಟ್ವೀಟ್​ ಮಾಡಿದ್ದಾರೆ.

ಕರ್ನಾಟಕದ ವನ್ಯ ಸಂಪತ್ತಿಮ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ಜೊತೆ ಸೇರಿ ಪುನೀತ್​ ರಾಜ್​ಕುಮಾರ್ ಸಿದ್ಧಪಡಿಸಿದ್ದರು. ಈ ಡಾಕ್ಯುಮೆಂಟರಿಗೆ ‘ಗಂಧದ ಗುಡಿ’ ಎಂದು ಹೆಸರಿಡಲು ಪುನೀತ್ ರಾಜ್‌ಕುಮಾರ್ ನಿರ್ಧರಿಸಿದ್ದರು. 90 ನಿಮಿಷದ ಈ ಸಾಕ್ಷ್ಯ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್ ಕಾಣಿಸಿಕೊಂಡಿದ್ದಾರೆ.

Exit mobile version