ಕನ್ಹಯ್ಯಾ ಹತ್ಯೆ ಆರೋಪಿಗಳ ಜೊತೆಗಿನ ಸಂಬಂಧದ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು : ಅಶೋಕ್ ಗೆಹ್ಲೋಟ್

ashok

ಜೈಪುರ : ಉದಯಪುರದಲ್ಲಿ(Udaipur) ನಡೆದ ಕನ್ಹಯ್ಯಾ ಲಾಲ್ ತೇಲಿ ಅವರ ಭೀಕರ ಹತ್ಯೆ(Murder) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೊಂದಿಗೆ ಭಾರತೀಯ ಜನತಾ ಪಕ್ಷದ ಸಂಪರ್ಕವಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ(Rajasthan CM) ಅಶೋಕ್ ಗೆಹ್ಲೋಟ್(Ashok Gehlot) ಸೋಮವಾರ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಬಿಜೆಪಿ(BJP) ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.

ನೂಪುರ್ ಶರ್ಮಾ(Nupur Sharma) ಅವರನ್ನು ಬೆಂಬಲಿಸಿದ್ದಕ್ಕಾಗಿ ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್, ಜೂನ್ 28 ರಂದು ಉದಯಪುರದಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಕನ್ಹಯ್ಯಾ ಲಾಲ್ ಅವರ ಶಿರಚ್ಛೇಧ ಮಾಡಿದರು. ಉದಯ್‌ಪುರದ ಹತ್ಯೆ ಪ್ರಕರಣದಲ್ಲಿ ಆರೋಪಿ ಬಿಜೆಪಿ ಜೊತೆಗಿನ ಸಂಬಂಧ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಆರೋಪಿಗಳು ಮತ್ತೋರ್ವ ಮುಸ್ಲಿಂ ವ್ಯಕ್ತಿಯ ಮಾಲೀಕತ್ವದ ಬಾಡಿಗೆ ಸ್ಥಳದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತನಾಗಿರುವುದರಿಂದ ಆರೋಪಿಯ ವಿರುದ್ಧದ ದೂರನ್ನು ಕೈಬಿಡುವಂತೆ ಪೊಲೀಸರಿಗೆ ಮನವಿ ಮಾಡುವ ಮೂಲಕ ಬಿಜೆಪಿಯು ಆರೋಪಿಗೆ ಸಹಾಯ ಮಾಡಿದೆ ಎಂಬ ಆರೋಪದ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಗೆಹ್ಲೋಟ್ ಕೇಳಿದ್ದಾರೆ. ಕನ್ಹಯ್ಯಾ ಅವರ ಶಿರಚ್ಛೇಧ ಮಾಡಿದ ಆರೋಪಿಗಳು ಬಾಡಿಗೆ ನೀಡುತ್ತಿಲ್ಲ ಎಂದು ಮನೆಯ ಮಾಲೀಕರು ಆರೋಪಿಸಿದ್ದರು, ಅದಕ್ಕಾಗಿ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದ್ರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುವ ಮುನ್ನವೇ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಎಂದು ಹೇಳಿ ಮನೆ ಮಾಲೀಕರಿಗೆ ಕರೆ ಮಾಡಲು ಆರಂಭಿಸಿದರು.

ಮತ್ತು ಪಕ್ಷದ ಕಾರ್ಯಕರ್ತರಿಗೆ ತೊಂದರೆಯಾಗದಂತೆ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ. ಆರೋಪಿಗಳಿಗೆ ಪಕ್ಷದೊಂದಿಗೆ ಇರುವ ಸಂಪರ್ಕದ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಜೆಪಿ ನಾಯಕರಿಗೆ ಸೂಚಿಸಿದ್ದು, ಉದಯಪುರ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಳನೇ ಆರೋಪಿಯನ್ನು ಬಂಧಿಸುತ್ತಿದ್ದಂತೆ, ಪ್ರಮುಖ ಆರೋಪಿ ರಿಯಾಜ್ ಅಖ್ತರಿ, ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಸೇರಿದಂತೆ ಕೆಲವು ಬಿಜೆಪಿ ನಾಯಕರೊಂದಿಗಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ್ದು,

ಕಾಂಗ್ರೆಸ್‌ಗೆ ಪ್ರೇರಣೆ ನೀಡಿತು. ಅಖ್ತರಿ ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸಿದರು. ಆದರೆ, ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ. ವೃತ್ತಿಯಲ್ಲಿ ಟೈಲರ್ ಆಗಿದ್ದ ಕನ್ಹಯ್ಯ ಲಾಲ್ ತೇಲಿ ಅವರನ್ನು ಜೂನ್ 28 ರಂದು ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಾಕಿದ್ದಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಲಾಯಿತು.

Exit mobile version