ಮಾಗಡಿ ಗೆಲ್ಲಲು ಅಶ್ವಥ್ ನಾರಾಯಣ್ ಪಣ, ಆಪರೇಷನ್ ಕಮಲಕ್ಕೆ ಪ್ಲ್ಯಾನ್?

BJP

ಬೆಂಗಳೂರು : ಮಾಗಡಿ(Magadi) ವಿಧಾನಸಭಾ ಕ್ಷೇತ್ರವನ್ನು(Vidhansabha Election) ನಾನು ಗೆಲ್ಲಿಸಿಕೊಂಡು ಬರುತ್ತೇನೆ. ನನಗೆ ಪಕ್ಷ ಸಹಕಾರ ನೀಡಿದರೆ ಸಾಕು, ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಸಚಿವ ಅಶ್ವಥ್‌‌ ನಾರಾಯಣ್‌(Ashwath Narayan) ದೆಹಲಿ ವರಿಷ್ಠರಿಗೆ ಆಶ್ವಾಸನೆ ನೀಡಿದ್ದಾರೆ. ಹೀಗಾಗಿ ಮಾಗಡಿ ಗೆಲ್ಲಲು, ಆಪರೇಷನ್‌ ಕಮಲಕ್ಕೆ(Operation Kamala) ಅಶ್ವಥ್‌ ನಾರಾಯಣ್‌ ಮುಂದಾಗಿದ್ದಾರೆ ಎನ್ನಲಾಗಿದೆ.


ಮಾಗಡಿ ಗೆಲ್ಲುವ ಟಾಸ್ಕ್ ತೆಗೆದುಕೊಂಡ ಬೆನ್ನಲ್ಲೇ ಆಪರೇಷನ್ ಕಮಲ ಕಾರ್ಯಾಚರಣೆ ಶುರು ಮಾಡಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಗೆದ್ದು ಜೆಡಿಎಸ್‌(JDS) ಸೇರಿ, ಸದ್ಯ ಕಾಂಗ್ರೆಸ್ನಲ್ಲಿ(Congress) ಇರುವ ಮಾಜಿ ಶಾಸಕ ಬಾಲಕೃಷ್ಣ ಅವರನ್ನು ಬಿಜೆಪಿಗೆ ಕರೆತರಲು ಅಶ್ವಥ್‌ ನಾರಾಯಣ್‌ ತಂತ್ರ ಹೆಣೆದಿದ್ದಾರೆ. ಬಾಲಕೃಷ್ಣಗೆ ಮಾಗಡಿ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತವಿದೆ. ಸ್ವಂತ ಬಲದಿಂದ ಗೆಲ್ಲುವ ಶಕ್ತಿಯಿದೆ. ಪ್ರಬಲ ಒಕ್ಕಲಿಗೆ ಸಮುದಾಯಕ್ಕೆ ಸೇರಿರುವ ಬಾಲಕೃಷ್ಣರನ್ನು ಬಿಜೆಪಿಗೆ ಕರೆತಂದರೆ ಮಾಗಡಿಯನ್ನು ಸುಲಭವಾಗಿ ಗೆಲ್ಲಬಹುದು ಎಂಬುದು ಅಶ್ವಥ್‌ ನಾರಾಯಣ್‌ ಲೆಕ್ಕಾಚಾರ.

ಆದರೆ ಬಾಲಕೃಷ್ಣ ಬಿಜೆಪಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಬಾಲಕೃಷ್ಣ ನಡೆ ನಿಗೂಢವಾಗಿದ್ದು, ಕಾಂಗ್ರೆಸ್ನಲ್ಲೇ ಉಳಿದುಕೊಳ್ತಾರಾ? ಆಪರೇಷನ್ ಕಮಲಕ್ಕೆ ಒಳಗಾಗ್ತಾರಾ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಸಿದ್ದರಾಮಯ್ಯ(Siddaramaiah) ಅವರ ಆಪ್ತನಾಗಿದ್ದ ಹೆಚ್.ಎಂ.ರೇವಣ್ಣ ಮಾಗಡಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಂಡಿರುವುದು ಬಾಲಕೃಷ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ(KPCC President) ಡಿ.ಕೆ.ಶಿವಕುಮಾರ್‌ಗೆ(DK Shivkumar) ಬಾಲಕೃಷ್ಣ ಪತ್ರ ಬರೆದಿದ್ದರು. ಹೆಚ್.ಎಂ.ರೇವಣ್ಣ ಅವರಿಗೆ ಮಾಗಡಿ ಕ್ಷೇತ್ರದಿಂದ ಟಿಕೆಟ್ ಕೊಟ್ಟುಬಿಡಿ ಎಂದು ಅಸಮಾಧಾನ ತೋಡಿಕೊಂಡಿದ್ದರು.

ಹೀಗಾಗಿ ಮಾಗಡಿ ಕ್ಷೇತ್ರಕ್ಕಾಗಿ ತೆರೆಮರೆಯಲ್ಲಿ ಬಾಲಕೃಷ್ಣ ಮತ್ತು ಹೆಚ್.ಎಂ.ರೇವಣ್ಣ ನಡುವೆ ಗುದ್ದಾಟ ಶುರುವಾಗಿದೆ. ಇನ್ನು ಇದನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾಗಿರುವ ಅಶ್ವಥ್‌ ನಾರಾಯಣ್‌, ಬಿಜೆಪಿ ಸೇರುವಂತೆ ಬಾಲಕೃಷ್ಣ ಅವರಿಗೆ ಆಹ್ವಾನ ನೀಡಲು ತಯಾರಿ ನಡೆಸಿದ್ದಾರೆ.

Exit mobile version