ಶಿಕ್ಷಣ ವ್ಯವಸ್ಥೆ ಎನ್‌ಇಪಿಇಯಿಂದ ಬದಲಾವಣೆ ಆಗುತ್ತದೆ – ಆಶ್ವಥ್‌ ನಾರಯಣ್

ಬೆಂಗಳೂರು ಅ 26 : ಶಿಕ್ಷಣ ವ್ಯವಸ್ಥೆ ಬದಲಾಗಬೇಕೆಂದು ಆಗ್ರಹಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಆಶ್ವಥ್‌ ನಾರಯಣ್ ಸಮಾಜದಲ್ಲಿ ಎಲ್ಲರಿಗೂ ಅವರಿಗೆ ಇಷ್ಟವಾದ ಕೆಲಸವನ್ನು ಮಾಡಲು ಬಿಡಬೇಕು ಅವರಿಗೆ ಅವರ ಇಷ್ಟದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಯಾವುದಕ್ಕೂ ಒತ್ತಡ ಇರಬಾರದು ಮತ್ತು ಅವರು ಈ ಕೆಲಸ ಮಾಡಬೇಕು ಆ ಕೆಲಸ ಮಾಡಬೇಕು ಎಂಬ ತಾರತಮ್ಯ ಹೋಗಬೇಕು ಎಂದು ಪತ್ರದಲ್ಲಿ ಬರೆದಿದ್ದ, ಈಗ ಸಮಾಜದಲ್ಲಿ ಸುಧಾರಣೆ ಆಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎನ್ಇಪಿನಲ್ಲಿ ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕೆಲಸ ಮಾಡಲು ಶಾಲೆಯ ಅವಧಿಯಲ್ಲಿ ಆಯ್ಕೆ ಮಾಡಿಕೊಂಡು ಮುಂದೆ ಸಾಗುವ ಅವಕಾಶವಿದೆ. 10 ವರ್ಷದಲ್ಲಿ ಇದರ ಸುಧಾರಣೆಯನ್ನು ನಾವು ಕಾಣುತ್ತೇವೆ ಎಂದು ತಿಳಿಸಿದ ಸಚಿವರು, ವಿದ್ಯಾರ್ಥಿಯ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದರೆ ದುಡುಕಿಬಿಟ್ಟ. ತನ್ನ ಅಭಿಪ್ರಾಯ ಹೇಳಿಕೊಳ್ಳಬಹುದಿತ್ತು. ಪ್ರಾಣ ಕಳೆದುಕೊಳ್ಳಬಾರದಿತ್ತು. ಅವರ ಕುಟುಂಬದ ನೋವು ಭರಿಸುವ ಶಕ್ತಿ ದೇವರು ಕರುಣಿಸಲಿ ಅಂತ ಹೇಳಿದರು.

ಅವನ ಆಸೆಯಂತೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಲಿ. ಎಲ್ಲರನ್ನೂ ಒಂದೇ ರೀತಿ ನೋಡಬೇಡಿ. ಪ್ರತಿಭೆ ಇದ್ದವರಿಗೆ ಅವಕಾಶ ಕೊಡಿ. ಆತನಲ್ಲಿ ಏನೊ‌ ಜಿಗುಪ್ಸೆ ಆಗಿದೆ. ಅದನ್ನ ನಮ್ಮೊಟ್ಟಿಗೆ ಹೇಳಬಹುದಿತ್ತು. ಸಾವು ಎಂದೂ ನ್ಯಾಯ ಕೊಡಲ್ಲ. ಇದ್ದು ಹೋರಾಟ ಮಾಡಬೇಕು. ಯಾರು ಇಂತಹ ತೀರ್ಮಾನ ತೆಗೆದುಕೊಳ್ಳಬೇಡಿ. ಶಿಕ್ಷಣ ಪಡೆದವರು ಮಾತ್ರ ಸಮಾಜದಲ್ಲಿ ಬದುಕುತ್ತಿಲ್ಲ. ಅನಕ್ಷರಸ್ಥರು ಜೀವನ ನಡೆಸುತ್ತಿದ್ದಾರೆ. ಉದ್ಯೋಗ ಇಲ್ಲದವರೂ ಬದುಕಿದ್ದಾರೆ. ಮಗನ ಆತ್ಮಹತ್ಯೆ ನಿರ್ಧಾರ ಸರಿಯಿಲ್ಲ ಅಂತ ಹೇಮಂತ್ ತಂದೆ ತೋಪೇಗೌಡ ಹೇಳಿದರು.

Exit mobile version