ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದು

Guwahati: ಅಸ್ಸಾಂನಲ್ಲಿ (Assam) ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯಿದೆ 1935 ಅನ್ನು ರದ್ದುಗೊಳಿಸುವಿಕೆಗೆ ಅಸ್ಸಾಂ ಸರ್ಕಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರು ಕುರಿತು ಟ್ವೀಟರ್ನಲ್ಲಿ ಬರೆದುಕೊಂಡಿದ್ದು, ಈ ಕ್ರಮವು ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದಿದ್ದಾರೆ.

ಫೆಬ್ರವರಿ (February) 23 ರಂದು, ಅಸ್ಸಾಂ ಕ್ಯಾಬಿನೆಟ್ ಹಳೆಯ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯಿದೆಯನ್ನು #Muslim Marriage and Divorce Registration Act ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ಈ ಕಾಯಿದೆಯು ವಧು ಮತ್ತು ವರನ ಕಾನೂನುಬದ್ಧ ವಯಸ್ಸನ್ನು 18 ಮತ್ತು 21 ಅನ್ನು ತಲುಪದಿದ್ದರೂ ಸಹ ವಿವಾಹ ನೋಂದಣಿಯನ್ನು ಅನುಮತಿಸುವ ನಿಬಂಧನೆಗಳನ್ನು ಒಳಗೊಂಡಿತ್ತು. ಕಾನೂನಿನ ಪ್ರಕಾರ ಈ ಕ್ರಮವು ಅಸ್ಸಾಂನಲ್ಲಿ ಬಾಲ್ಯವಿವಾಹಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಶರ್ಮಾ ಅವರು ಹೇಳಿದ್ದಾರೆ.

ಇನ್ನು ಈ ಕಾಯ್ದೆಯ ನಿಬಂಧನೆಗಳ ಪ್ರಕಾರ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಪುರುಷರಿಗೆ) ಮತ್ತು 18 ವರ್ಷಗಳ (ಹೆಣ್ಣುಗಳಿಗೆ) ಉದ್ದೇಶಿತ ವ್ಯಕ್ತಿಗಳ ವಿವಾಹಗಳನ್ನು ನೋಂದಾಯಿಸಲು ಅವಕಾಶವಿದೆ ಮತ್ತು ಕಾಯಿದೆಯ ಅನುಷ್ಠಾನಕ್ಕೆ ಯಾವುದೇ ಮೇಲ್ವಿಚಾರಣೆ ಇಲ್ಲ. ಈ ಕ್ರಮವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವತ್ತ ಒಂದು ಹೆಜ್ಜೆಯಾಗಿದೆ ಎಂದು ಅಸ್ಸಾಂ ಸಚಿವ ಜಯಂತ ಮಲ್ಲ (Jayantha Malla) ಬರುವಾ ಅವರು ತಿಳಿಸಿದ್ದಾರೆ.

ಈ ಆದೇಶದ ಅನುಷ್ಠಾನದ ನಂತರ ಏನು ಬದಲಾಗುತ್ತದೆ?
ಈ ಕಾನೂನನ್ನು ರದ್ದುಗೊಳಿಸಿದ ನಂತರ, ಅಂತಹ ಜನರು ಮದುವೆ ಮತ್ತು ವಿಚ್ಛೇದನವನ್ನು ನೋಂದಾಯಿಸಲು ಸಾಧ್ಯವಾಗುವುದಿಲ್ಲ. ಆದರೆ ಅಂತಹ ಎಲ್ಲಾ ವಿವಾಹಗಳನ್ನು ವಿಶೇಷ ವಿವಾಹ ಕಾಯ್ದೆಯಡಿ (Marriage Act) ನೋಂದಾಯಿಸಬೇಕೆಂದು ಅಸ್ಸಾಂ ಸರ್ಕಾರ ಹೇಳಿದೆ.

ಸರ್ಕಾರದ ಯುಸಿಸಿ ಭರವಸೆ
ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾದಾಗಿನಿಂದ, ಯುಸಿಸಿಯನ್ನು (UCC) ತರುವುದು ಅಸ್ಸಾಂನ ಜನರಿಗೆ ಅವರ ಪ್ರಮುಖ ಭರವಸೆಯಾಗಿದೆ. ಈ ತಿಂಗಳ ಆರಂಭದಲ್ಲಿ, ರಾಜ್ಯದಲ್ಲಿ ಬಹುಪತ್ನಿತ್ವವನ್ನು ಸರ್ಕಾರ ನಿಷೇಧಿಸುತ್ತದೆ ಎಂದು ಹೇಳಿದ್ದಾರೆ. ಉತ್ತರಾಖಂಡ ಮತ್ತು ಗುಜರಾತ್ (Gujarat) ನಂತರ ಅಸ್ಸಾಂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮೂರನೇ ರಾಜ್ಯವಾಗಲಿದೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಉತ್ತರಾಖಂಡ ಸರ್ಕಾರವು ಈ ತಿಂಗಳ ಆರಂಭದಲ್ಲಿ ತನ್ನ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಿದೆ.

Exit mobile version