ಆಸ್ಟ್ರೇಲಿಯಾ ಪಾಲಾದ ಮೊದಲನೇ ಟೆಸ್ಟ್‌ ಸರಣಿ

ಅಡಿಲೇಡ್, ಡಿ. 19: ಏಕದಿನ ಹಾಗೂ ಟಿ-20 ಪಂದ್ಯಗಳ ನಂತರ ಟೆಸ್ಟ್‌ ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯಾ ಬೌಲರ್‍ಗಳ ಮಾರಕ ದಾಳಿಗೆ ಟೀಂ ಇಂಡಿಯಾ ತತ್ತರಿಸಿ ಹೋಗಿದೆ ಎಂದರೆ ತಪ್ಪಾಗಲಾರದು. ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ 21. 2 ಓವರ್‍ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 36 ರನ್‍ ಗಳಿಸಿದೆ.

ಮೊಹಮ್ಮದ್ ಶಮಿ ಅಂತಿಮವಾಗಿ ಬ್ಯಾಟಿಂಗ್‌ ಮೈದಾನಕ್ಕಿಳಿದು, ಗಾಯಗೊಂಡ ಪರಿಣಾಮ, ಇನ್ನಿಂಗ್ಸ್ ಮುಂದುವರೆಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಇನ್ನಿಂಗ್ಸ್‌ನ್ನು ಅರ್ಧಕ್ಕೆ ಕೈ ಬಿಡಬೇಕಾಯಿತು. ಆತಿಥೇಯ ಆಸೀಸ್ ತಂಡದ ಗೆಲುವಿಗೆ 90 ರನ್‍ಗಳ ಗೆಲುವಿನ ಗುರಿ ನೀಡಿದ್ದು, ಇದು ಕ್ರಿಕೆಟ್ ಇತಿಹಾಸದ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದಿಂದ ದಾಖಲಾದ ಅತಿ ಕಡಿಮೆ ರನ್‌ ಆಗಿದೆ. ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್‍ಗಳ ಮುನ್ನಡೆಯನ್ನು ಸಾಧಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 9/1 ಆಗಿತ್ತು.

ಮೂರನೇ ದಿನದ ಅಂತ್ಯಕ್ಕೆ ಭಾರತ ತಂಡವು ಶೀಘ್ರದಲ್ಲಿ ಆಸಿಸ್‌ಗೆ ಶರಣಾಯಿತು. ಏಕೆಂದರೆ ಟೀಂ ಇಂಡಿಯಾದ ಯಾವ ಬ್ಯಾಟ್ಸ್‌ಮ್ಯಾನ್‌ಗಳು ಕೂಡ ಮೈದಾನದಲ್ಲಿ ಪರಿಣಾಮಕಾರಿಯಾಗಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಲಿಲ್ಲ. ಆಸೀಸ್ ವೇಗಿಗಳಾದ ಪ್ರಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಜಲ್‍ವುಡ್ಸ್ ಎದುರಾಳಿ ಬ್ಯಾಟ್ಸ್‌ಮ್ಯಾನ್‌ಗಳಿಗೆ ಯಾವುದೇ ಅವಕಾಶ ನೀಡದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

Exit mobile version