ಅತ್ತ ಬಂದ್ ಬಿಸಿ, ಇತ್ತ ಫೋಟೋ ಶೂಟ್ ಖುಷಿ

ಮೈಸೂರು, ಡಿ. 05: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧ ವ್ಯಕ್ತಪಡಿಸಿ ಒಂದೆಡೆ ಬಂದ್ ಕರೆ ನೀಡಿರುವ ಸಂಘಟನೆಗಳ ಪ್ರತಿಭಟನೆಯ ಕಾವು ಏರಿದ್ದರೆ, ಮತ್ತೊಂದೆಡೆ ಇದ್ಯಾವುದರ ಪರಿವೇ ಇಲ್ಲದೇ ನವಜೋಡಿಯೊಂದು ಪ್ರೀ ವೆಡ್ಡಿಂಗ್‌ ಫೋಟ್‌ ಶೂಟ್‌ಗೆ ಪೋಸ್‌ಕೊಟ್ಟು ಬಿಂದಾಸ್‌ ಆಗಿದ್ದ ದೃಶ್ಯ ನಗರದಲ್ಲಿ ಕಂಡುಬಂತು.

ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಬೆಳಗ್ಗೆ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇದರ ಮಧ್ಯೆಯೇ ಜೋಡಿಯೊಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗವಿರುವ ಜಯ ಚಾಮರಾಜ ಒಡೆಯರ್ ವೃತ್ತದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ನಲ್ಲಿ ಮಗ್ನರಾಗಿದ್ದರು. ಕಲರ್‌ಫುಲ್‌ ಘೋಟೊಗಳನ್ನು ತೆಗೆಸಿಕೊಂಡು ಖುಷಿಪಟ್ಟರು.

Exit mobile version