`ಅವಸ್ಥಾಂತರ’ಕ್ಕೆ ಮುಹೂರ್ತ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವಸ್ಥಾಂತರ’ ಚಿತ್ರದಲ್ಲಿ ನಾಯಕರಾಗಿದ್ದಾರೆ.ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎನ್ನುವ ಅಡಿಬರಹದಲ್ಲಿರುವ ಚಿತ್ರದ ಮುಹೂರ್ತ ಸಮಾರಂಭವು ಎನ್.ಆರ್.ಕಾಲನಿಯಲ್ಲಿರುವ ರಾಯರ ಮಠದಲ್ಲಿ ಸರಳವಾಗಿ ನೆರವೇರಿತು. ಮಠ ಗುರುಪ್ರಸಾದ್ ಗರಡಿಯಲ್ಲಿ ಪಳಗಿರುವ ತುಮಕೂರಿನ ಜಿ.ದೀಪಕ್‌ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಒಂದಷ್ಟು ಸಾಕ್ಷ್ಯಚಿತ್ರ, ಜಾಹಿರಾತುಗಳಿಗೆ ಆಕ್ಷನ್ ಕಟ್ ಅನುಭವ ಹೊಂದಿರುವ ಇವರು ಅವಸ್ಥಾಂತರ ಚಿತ್ರದ ನಿರ್ದೇಶನದ ಜೊತೆಗೆ ಕತೆ,ಚಿತ್ರಕತೆ,ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.

ಹದಿಹರೆಯದ ಯುವಕನೊಬ್ಬ ತನಗೆ ಅರಿವಿಲ್ಲದೆ ಬಯಕೆಗಳು, ಕಾಮನೆಗಳು ಹುಟ್ಟಿಕೊಂಡು, ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ. ಹಾಗೆಯೇ ಅದರಿಂದ ಏನೆಲ್ಲಾ ಕಷ್ಟಗಳು, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎನ್ನುವುದನ್ನು ತಿಳಿ ಹಾಸ್ಯದ ಮೂಲಕ ತೋರಿಸುವ ಚಿತ್ರ ಇದು. ಚಿತ್ರದಲ್ಲಿ ಸಂಚಾರಿ ವಿಜಯ್ ಅವರಿಗೆ ಜೋಡಿಯಾಗಿ ಪುಟ್ಟಗೌರಿ',ಕನ್ನಡತಿ’ ಧಾರಾವಾಹಿಗಳ ನಟಿ ರಂಜನಿರಾಘವನ್‌ ನಟಿಸಿದ್ದಾರೆ. ಸಂಪ್ರದಾಯಸ್ಥ ಪ್ರೀತಿ ಹೆಸರಿನಲ್ಲಿ ಲವ್‌ಗೆ ಬಿದ್ದಾಗ ಆಗುವ ಅವಸ್ಥೆಗಳು, ಅವಾಂತರಗಳನ್ನು ಆಕೆ ಹೇಗೆ ನಿಭಾಯಿಸುತ್ತಾಳೆ ಎನ್ನುವುದೇ ನಾಯಕಿಯ ಪಾತ್ರವಂತೆ. ಭಗವಾನ್ ನಿರ್ದೇಶನದ `ಆಡುವ ಗೊಂಬೆ’ ಚಿತ್ರದಲ್ಲಿ ಸಂಚಾರಿ ವಿಜಯ್ ಜೊತೆಗೆ ನಟಿಸಿದ್ದ ದಿಶಾಕೃಷ್ಣಯ್ಯ ಅವರು ಈ ಚಿತ್ರದಲ್ಲಿಯೂ ಮತ್ತೊಮ್ಮೆ ಜೋಡಿಯಾಗಿರುವುದು ವಿಶೇಷ. ಉಳಿದಂತೆ ತಾರಾಗಣದಲ್ಲಿ ಪ್ರದೀಪ್, ರೋಹಿಣಿ, ಲಕ್ಷಿಭಾಗವತರ್ ಮೊದಲಾದವರು ನಟಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಎರಡು ಹಾಡುಗಳಿಗೆ ಬಿ. ಜೆ ಭರತ್ ಸಂಗೀತ ಸಂಯೋಜನೆ ಇದೆ. ಅಂದಹಾಗೆ ಚಿತ್ರದ ಛಾಯಾಗ್ರಾಹಕರು ನಂದಕಿಶೋರ್.

Exit mobile version