ಸಿದ್ದು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳ ಸುರಿಮಳೆಯಾಗಿದೆ.

ಮಹಾರಾಷ್ಟ್ರ ಪುಣೆಯಲ್ಲಿ ನಡೆದ ‘ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಚಿತ್ರಕಥೆಗೆ “ಬೆಸ್ಟ್ ಸ್ಕ್ರೀನ್ ಪ್ಲೇ” ಅವಾರ್ಡ್ ಬಂದಿದೆ. ಇದರ ಜೊತೆಗೆ ಸ್ಪೇನ್ ನಲ್ಲಿ ನಡೆಯುವ ಬಾರ್ಸಿಲೋನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ. ನವಡ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ 1600 ಸಿನಿಮಗಳ ಪೈಕಿ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿರುವುದು ಕನ್ನಡಕ್ಕೆ ಹೆಮ್ಮೆಯ ವಿಚಾರವಾಗಿದೆ.

ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಶ್ರೇಷ್ಠ ನಟ ಮತ್ತು ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯು ಇವರ ಪಾಲಿಗೆ ಸಂದಿದೆ. ರೇ(ಸತ್ಯಜಿತ್‌ ರೇ) ಸಿನಿಮೋತ್ಸವದಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಮತ್ತು ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದ ಕೀರ್ತಿ ಇವರದು. ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕರಿಗೆ ಬೆಸ್ಟ್ ರೈಟರ್ ಅವಾರ್ಡ್ ದೊರಕಿದೆ. ಮೊದಲನೇ ವರ್ಷದ ‘KASHI’ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಅತ್ಯತ್ತಮ “ಚಿತ್ರಕಥೆ ಮತ್ತು ಸಂಭಾಷಣೆ”ಗೆ ಚಿತ್ರವು ಅವಾರ್ಡ್ ತನ್ನದಾಗಿಸಿದೆ. ಬಂದಿದೆ. ಏಷ್ಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟನೆಗೆ ವರ್ಧನ್ ಕೂಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವರ್ಧನ್, ಬಲ ರಾಜ್ವಾಡಿ, ಶೀಬಾ ಮೂರ್ತಿ,ಸಿದ್ದು ಪೂರ್ಣಚಂದ್ರ ಮೊದಲಾದವರಿಗೆ ಪ್ರಶಸ್ತಿ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಪ್ರಶಸ್ತಿಯು ನೂರರ ಗಡಿ ದಾಟಲಿದೆ ಎಂದು ನಿರ್ದೇಶಕರು ಸಂಭ್ರಮದಿಂದ ಹೇಳಿಕೊಂಡಿದ್ದಾರೆ.

Exit mobile version