ಅಫ್ಘಾನಿಸ್ತಾನದಲ್ಲಿ ಗುಂಡಿನ ಮಳೆ ಹಿನ್ನಲೆ ವಿಮಾನ ಹಾರಟ ರದ್ದು.

ಕಾಬೂಲ್ ಆ 16 : ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶವಡಿಸಿಕೊಂಡ ಹಿನ್ನಲೆಯಲ್ಲಿ ತಾಲಿಬಾನ್ ಉಗ್ರರು ಕಂಡ ಕಂಡಲ್ಲಿ ಗುಂಡಿನ ದಾಳಿ ನಡೆಸಿ ಅಫ್ಘಾನಿಸ್ತಾನವನ್ನು ಅಕ್ಷರಶಃ ರಣರಂಗವನ್ನಾಗಿ ಮಾಡಿತ್ತಿದ್ದಾರೆ.

ಅಫ್ಘಾನ್ ಅಧ್ಯಕ್ಷ ಪಲಾಯುನ ಮಾಡಿದ ಹಿನ್ನಲೆಯಲ್ಲಿ ಅಫ್ಘಾನ್ ಸರ್ಕಾರ ಪತನಗೊಂಡಿದ್ದು, ಈ ಹಿನ್ನಲೆಯಲ್ಲಿ ಅಫ್ಘಾನ್ ನಲ್ಲಿ ತಾಲಿಬಾನಿಗಳ ಆಡಳಿತಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೀವ ಭಯದಿಂದ ಇಗಾಗಲೇ ಸಾಕಷ್ಟು ಮಂದಿ ತಮ್ಮ ಸ್ವದೇಶಗಳತ್ತ ಮರಳುತ್ತಿದ್ದು, ಆದರೆ ಇದೀಗ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದು ಇದರಿಂದಾಗಿ ವಿಮಾನ ಹಾರಟ ಸದ್ಯಕ್ಕೆ ನಿಲ್ಲಿಸಲಾಗಿದೆ.

ಈ ಹಿನ್ನಲೆಯಲ್ಲಿ ಅಫ್ಘಾನಿಸ್ತಾನದಲ್ಲಿರುವ ತಮ್ಮ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಿಕೊಡಬೇಕೆಂದು ಸುಮಾರು 60ಕ್ಕೂ ಹೆಚ್ಚು ದೇಶಗಳು ಮನವಿಮಾಡಿವೆ. ಭಾರತವು ಕೂಡ ಅಫ್ಘಾನ್ ನಲ್ಲಿರುವವರನ್ನು  ನವದೆಹಲಿಗೆ ಕರೆತರಲು 2 ವಿಮಾನಗಳನ್ನು ಕೂಡ ಏರ್ ಇಂಡಿಯಾ ಸಜ್ಜುಗೊಳಿಸಿದೆ.  ಇಸ್ಲಾಮಿಕ್ ರಿಪಬ್ಲಿಕ ಆಫ್ ಪಾಕಿಸ್ತಾನವನ್ನು ಮಾಡಲು ಹೊರಟಿರುವ ತಾಲಿಬಾನ್ ಗಳು ಉಗ್ರ ಸ್ವರೂಪದಲ್ಲೇ ತಮ್ಮ ಸರ್ಕಾರವನ್ನು ರಚಿಸಲು ಹೊರಟಿರುವುದು ಸರ್ವಾಧಿಕಾರಿ ಧೋರಣೆಯ ಪ್ರತಿಬಿಂಬವಾಗಿದೆ.

Exit mobile version