ಬೆಂಗಳೂರಿನ 10 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ: ಕಂಡ ಕಂಡಲ್ಲಿ ನೀರು ಕುಡಿಯದಂತೆ ಬಿಬಿಎಂಪಿ ಮನವಿ.

Bengaluru: ಒಂದೆರಡು ಮಳೆ ಬಿದ್ದರೂ ಬೆಂಗಳೂರಿನ (Bengaluru) ಹಲವೆಡೆಗಳಲ್ಲಿ ನೀರಿನ ಹಾಹಾಕಾರವಿನ್ನು ತಗಿಲ್ಲ. ಅಂತಹದರಲ್ಲಿ ಗಾಯದಮೇಲೆ ಬರೆ ಎಳೆದಂತೆ ರಾಜಧಾನಿ ಬೆಂಗಳೂರಿನ 10 ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿಯಿಂದ ಪೂರೈಕೆ ಆಗುವ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ (Bacteria) ಪತ್ತೆಯಾಗಿರುವ ಆತಂಕಕಾರಿ ವರದಿ ಬಂದಿದೆ. ಜನರ ಆರೋಗ್ಯದ ದೃಷ್ಟಿಯಿಂದ ಆ ಘಟಕಗಳು ಮತ್ತು ಕೊಳವೆ ಬಾವಿಯಿಂದ ನೀರು ಪೂರೈಕೆ ಆಗುವುದನ್ನು ಇದೀಗ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಕಂಡ ಕಂಡಲ್ಲಿ ನೀರು ಸೇವಿದಿರುವಂತೆ ಬಿಬಿಎಂಪಿ ಮನವಿ ಮಾಡಿದೆ.

BBMP

ಬೆಂಗಳೂರಿನ ಬೊಮ್ಮನಹಳ್ಳಿ (Bommanahalli)ಯಲ್ಲಿ 5, ಪೂರ್ವ ಹಾಗೂ ದಕ್ಷಿಣ ವಲಯದ ತಲಾ 2 ಹಾಗೂ ಮಹದೇವಪುರ ವಲಯದ ಒಂದು ಕಡೆ ಹಾನಿಕಾರಕ ಬ್ಯಾಕ್ಟೀರಿಯಾ ಕಂಡು ಬಂದಿದೆ. ಈ ನೀರಿನ ಘಟಕ ಹಾಗೂ ಕೊಳವೆ ಬಾವಿಗಳನ್ನು ಬಿಬಿಎಂಪಿಯಿಂದ ಕ್ಲೋರಿನೇಷನ್‌ ಮಾಡಿ ಅಪಾಯಕಾರಿ ಬ್ಯಾಕ್ಟೀರಿಯಗಳನ್ನು ನಾಶ ಪಡಿಸಲಾಗಿದೆ. ನಗರದಲ್ಲಿ 1,696 ಕೊಳವೆ ಬಾವಿ ಹಾಗೂ 1384 ಶುದ್ಧಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 217 ಕೊಳವೆ ಬಾವಿ ಹಾಗೂ 1218 ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್‌ (Lab)ಗೆ ಕಳುಹಿಸಲಾಗಿದೆ.

ಇದರಲ್ಲಿ 474 ಲ್ಯಾಬ್‌ನ ಪರೀಕ್ಷೆ ವರದಿ ಲಭ್ಯವಾಗಿದ್ದು, ಈ ಪೈಕಿ 10 ಮೂಲಗಳ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಗಳು ಕಂಡುಬಂದಿದೆ ಎಂದು ಮಧ್ಯಂತರ ವರದಿಯಲ್ಲಿ ಹೇಳಲಾಗಿತ್ತು. ಇನ್ನುಳಿದ 805 ಕಡೆಯ ನೀರಿನ ಪರೀಕ್ಷಾ ವರದಿ ಇನ್ನು ಬರಬೇಕಿದೆ.

ಇನ್ನಷ್ಟು ಕೊಳವೆ ಬಾವಿ ಹಾಗೂ ಶುದ್ಧಕುಡಿಯುವ ನೀರಿನ ಘಟಕದ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ವರದಿ ಬರುವ ಆತಂಕ ಕಾಡುತ್ತಿದೆ. ಹಾಗಾಗಿ ತ್ವರಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲು ಬಿಬಿಎಂಪಿ (BBMP) ಆರೋಗ್ಯ ವಿಭಾಗವೂ ‘ಎಚ್‌ 2 ಎಸ್‌ (S2S)’ ಕಿಟ್‌ ಬಳಕೆ ಮಾಡಿ ಮೈಕ್ರೋ ಬಯೋಲಾಜಿಕಲ್‌ ಟೆಸ್ಟ್‌ (Biological Test) ನಡೆಸಲು ಮುಂದಾಗಿದೆ.

ಈ ಪರೀಕ್ಷೆಯಲ್ಲಿ ನೀರಿನ ಗುಣಮಟ್ಟದಲ್ಲಿ ಲೋಪ ಕಂಡು ಬಂದರೆ ನಂತರ ಲ್ಯಾಬ್‌ ಗೆ ನೀರಿನ ಮಾದರಿ ಕಳುಹಿಸುವುದಕ್ಕೆ ತೀರ್ಮಾನಿಸಲಾಗಿದೆ.ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ (Suralkar Vikas Kishore) ಮಾಹಿತಿ ನೀಡಿದ್ದಾರೆ.

Exit mobile version