ಬಹುಭಾಷೆಗಳಲ್ಲಿ ರಾರಾಜಿಸಲಿದೆ ಪ್ಯಾಂಟಮ್ ಪವರ್

ಪ್ಯಾಂಟಮ್ .ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸಪೆಕ್ಟೆಡ್ ಚಿತ್ರ . ಕೋಟಿಗೊಬ್ಬ ಪಾರ್ಟ್ ೩ ಬಳಿಕ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡಲು ಕಿಚ್ಚ ಹೊರಟಿದ್ದಾರೆ . ಮಾಣಿಕ್ಯನಿಗೆ ಜೊತೆಯಾಗಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ .ಇದೆಲ್ಲ ಹಳೇ ನ್ಯೂಸ್ .. ಲೇಟೆಸ್ಟ್ ನ್ಯೂಸ್ ಏನಪ್ಪಾ ಅಂದ್ರೆ ಈಗಾಗಲೇ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರೋ ಚಿತ್ರತಂಡದಿಂದ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ..ಇದರ ಬಗ್ಗೆ ಕಿಚ್ಚ ಸುದೀಪ್ ಬಾಯಿಬಿಟ್ಟಿದ್ದು ಚಿತ್ರದ ಕೊನೆಯ ಹಂತದ ಶೂಟಿಂಗ್ ಕೇರಳದ ಸುಂದರ ಪ್ರದೇಶದಲ್ಲಿ ನಡೆಯುತ್ತಿದೆ.ಈ ಕೇರಳದ ಪ್ರದೇಶ ಕಿಚ್ಚನಿಗೆ ಇಷ್ಟವಾಗಿದ್ಯಂತೆ .. ಇನ್ನು ಕೇವಲ ೩೦ ದಿನ ಮಾತ್ರ ಚಿತ್ರದ ಶೂಟಿಂಗ್ ನಡೆಯಲಿದ್ದು ಆಮೇಲೆ ಪ್ಯಾಂಟಮ್ ನ ಇಂಚಿಂಚು ಅಪ್ ಡೇಟ್ ಲಭ್ಯವಾಗಲಿದೆ .

ಪ್ಯಾಂಟಮ್ . ಕನ್ನಡ , ಯುರೋಪಿಯನ್ , ಚೈನೀಸ್ ಭಾಷೆ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ .. ಆಕ್ಷನ್ ಡ್ರಾಮ ಸಿನಿಮಾ ಇದಾಗಿದ್ದು ; ರಂಗೀತರಂಗ ಖ್ಯಾತಿಯ ಅನೂಪ್ ಭಂಡಾರಿ ಪ್ಯಾಂಟಮ್ ಚಿತ್ರಕ್ಕೆ ಆಕ್ಚನ್ ಕಟ್ ಹೇಳಿದ್ದಾರೆ .ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಪ್ಯಾಂಟಮ್ ಗೆ ಶಾಲಿನಿ ಮಂಜುನಾಥ್ ಹಾಗೂ ಜ್ಯಾಕ್ ಮಂಜು ಬಂಡವಾಳ ಹೂಡಿದ್ದು ಈಗಾಗಲೇ ಚಿತ್ರದ ಟೀಸರ್ ಸಿನಿ ಪ್ರೇಕ್ಷಕರ ಕಣ್ಣುಕುಕ್ಕುವಂತೆ ಮಾಡಿದೆ .ಉಳಿದಂತೆ ಚಿತ್ರ ದಲ್ಲಿ ಹಲವು ತಾರಾಬಳಗವಿದ್ದು ನಾಯಕಿ ಯಾರು ಅನ್ನು ಕುತೂಹಲವನ್ನು ಚಿತ್ರ ಜನರ ಮುಂದೆ ತಂದಿಟ್ಟಿದೆ. ಸಮಂತ ಬಳಿಕ ಇದೀಗ ಕತ್ರೀನಾ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾಹಿತಿ ಚಿತ್ರತಂಡದಿಂದ ಹೊರ ಬಿದ್ದಿದೆ . ಇದರ ಬಗ್ಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದು: ಈಗಾಗಲೇ ಕತ್ರೀನಾ ಜೊತೆ ಮಾತುಕತೆ ನಡೆದಿದ್ದು ಚಿತ್ರದ ಕಥೆ ಕೇಳಿ ಕತ್ರೀನಾ ಒಪ್ಪಿಕೊಂಡಿದ್ದಾರೆ . ಡೇಡ್ಸ್ ಸಮಸ್ಯೆಯಾಗದಿದ್ದರೆ . ಸಿನಿಮಾದಲ್ಲಿ ಕತ್ರೀನಾ ಮಿಂಚಲಿದ್ದಾರೆ .ಇನ್ನುಳಿದಂತೆ ಪ್ಯಾಂಟಮ್ ಟೀಸರ್ ಸೂಪರ್ ಆಗಿ ಮೂಡಿಬಂದಿದ್ದು ಗುಮ್ಮ ಬಂದ ಗುಮ್ಮ ಬಂದ ಅನ್ನೋ ಮಾತು ಟೀಸರ್ ನಲ್ಲಿ ಸಖತಾಗಿ ಹೈಲೇಟ್ ಆಗಿದೆ .ಇದರ ಜೊತೆ ದ ವಲ್ಡ್ ಆಫ್ ಪ್ಯಾಂತಮ್ ವೀಡಿಯೋ ಸುದೀಪ್ ಅವರನ್ನು ಬಣ್ಣಿಸಿದಂತಿದೆ .ಸುದೀಪ್ ಹಾಗೂ ನಿರೂಪ್ ಭಂಡಾರಿ ಕಾಂಬಿನೇಷನ್ ಸಕ್ಕರೀನ್ ಮೇಲೆ ಸಖತ್ ಆಗೆ ಕಾಣಿಸಿಕೊಳ್ಳಲಿದ್ದು ವಿಕ್ರಾಂತ್ ರೋನಾ , ಸಂಜೀವ್ ಗಂಭೀರ ಪಾತ್ರ ಯಾವ ರೀತಿ ಜನರ ಮನಸೆಳೆಯುತ್ತೆ ಅನ್ನೋದಕ್ಕೆ ಚಿತ್ರ ತೆರೆಮೇಲೆ ಬರೋವರೆಗು ಕಾಯಲೇಬೇಕು ..

Exit mobile version