ಬಹುನಿರೀಕ್ಷಿತ ಬಿಗ್‌ಬಾಸ್‌ ಸೀಸನ್‌ – 8 ಆರಂಭವಾಗಲಿದೆ!

ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದು ಕರೆಯಲ್ಪಡುವ ಬಿಗ್‌ಬಾಸ್‌ ಸೀಸನ್‌ ೮ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ನಿರೀಕ್ಷಿತ ಸೀಸನ್‌ ಇನ್ನೇನು ಆರಂಭವಾಗಲಿದೆ ಎಂದು ಎನ್ನಲಾಗುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ಆಗಿದ್ದರೆ ಈಗಾಗಲೇ ಶೋ ಆರಂಭವಾಗಬೇಕಾಗಿತ್ತು. ಆದರೆ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಮುಂದೂಡಲಾದ ಬಿಗ್‌ಬಾಸ್‌ ಸೀಸನ್‌ ೮ ಆರಂಭವಾಗಲು ಈಗ ಮುಹೂರ್ತ ಸನ್ನಿಹಿತವಾಗಿದೆ. ಈ ಸೀಸನ್‌ನಲ್ಲಿ ಒಟ್ಟಾರೆಯಾಗಿ ೧೫ ಸ್ಪರ್ಧಿಗಳು ಇರಲಿದ್ದು, ಎಲ್ಲರೂ ಸೆಲೆಬರಿಟಿಗಳೇ ಆಗಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲರ್ಸ್‌ ಕನ್ನಡದಲ್ಲಿ ಆರಂಭವಾಗಲಿರುವ ಬಿಗ್‌ಬಾಸ್‌ ಸೀಸನ್‌  8ರ ಕುರಿತು ಚರ್ಚಿಸಲು ಕಲರ್ಸ್‌ ಕನ್ನಡದ ಬಿಜಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ನಿರೂಪಕ ಕಿಚ್ಚ ಸುದೀಪ್‌ ಅವರನ್ನು ಭೇಟಿಯಾಗಿದ್ದಾರೆ ಎಂಬುದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಕೊರೋನಾ ಮಾರ್ಗಸೂಚಿಗಳಿಗನ್ವಯ ಕಾರ್ಯಕ್ರಮ ರೂಪುಗೊಳ್ಳಲಿದೆ ಎಂದು ತಿಳಿದು ಬಂದಿದೆ.

Exit mobile version