ಬಲವಂತದ “ಸಾಲ ವಸೂಲಿ ಕಾಯ್ದೆ” ತಿದ್ದುಪಡಿ: ರಾಜ್ಯ ಸಂಪುಟ ಹಸಿರು ನಿಶಾನೆ

ಬೆಂಗಳೂರು,ಫೆ.19: ಮೀಟರ್​ ಬಡ್ಡಿ ವ್ಯವಹಾರವನ್ನು  ನಿರ್ಮೂಲನೆಗೊಳಿಸಲು ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆ ಇಡುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.

ಸಚಿವ ಸಂಪುಟ ಸಭೆ  ನಡೆದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ, ಗೃಹ ಹಾಗೂ ಕಾನೂನು ಸಚಿವ, ಬಸವರಾಜ ಬೊಮ್ಮಾಯಿಯವರು ಕರ್ನಾಟಕ ಮನಿ ಲಾಂಡರಿಂಗ್ ಆಕ್ಟ್​ನ ಕಲಂ 38 ಮತ್ತು 39ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ .  ಈ ಹಿಂದೆ ಒತ್ತಾಯಪೂರ್ವಕ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ನೀಡಲಾಗುತಿತ್ತು, ಆದರೆ ಈಗ 6 ತಿಂಗಳ ಬದಲಾಗಿದೆ ಅದನ್ನು 1 ವರ್ಷಕ್ಕೆ ಹೆಚ್ಚಿಸಲಾಗಿದೆ.. ಅದೇ ರೀತಿ 2ನೇ 2 ವರ್ಷ ಶಿಕ್ಷೆ ಹಾಗೂ 5 ಸಾವಿರದಿಂಧ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಕೈಸಾಲ, ಮೀಟರ್ ಬಡ್ಡಿಗೆ ಹಣ ಕೊಟ್ಟು ಹಣ ಪಡೆದವರನ್ನು ಸುಲಿಗೆ ಮಾಡಿಕೊಂಡೇ  ಬದುಕುತ್ತಿದ್ದವರಿಗೆ ಕಾನೂನಿನಲ್ಲಿ ಪಾಠ ಕಲಿಸಲಾಗುತ್ತೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿವಾದ ನಿರ್ಣಯ ನೀತಿ 2021ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ರಾಜ್ಯ ಸರ್ಕಾರದ ಪರವಾಗಿ ದಾವೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಲು ಅನುಕೂಲವಾಗುವುದರಿಂದ ಈ ನೀತಿ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.

Exit mobile version