ಲಿಕ್ವಿಡ್ ನೈಟ್ರೋಜನ್ ಪಾನ್ ಬ್ಯಾನ್ ಮಾಡಲು ಸರ್ಕಾರಕ್ಕೆ‌ ಪತ್ರ ಬರೆದ ಹೋಟೆಲ್ ಮಾಲಿಕರು.

Bengaluru: ಬಾಯಲ್ಲಿ ಪಾನ್ ಹಾಕಿಕೊಂಡ ಕೂಡಲೇ ಹೊಗೆ ಬರುವ ಲಿಕ್ವಿಡ್ ನೈಟ್ರೋಜನ್ ಪಾನ್ (Liquid Nitrogen Pan) ಇತ್ತೀಚೆಗೆ ಟ್ರೆಂಡ್ ಆಗಿದೆ. ಕೆಲ ದಿನಗಳ ಹಿಂದಷ್ಟೇ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷರ ಬಾಲಕಿಯ ಹೊಟ್ಟೆಯಲ್ಲಿ ರಂದ್ರವಾಗಿತ್ತು ಅದು ಜನರಲ್ಲಿ ಆತಂಕ ಸೃಷ್ಟಿಸಿದ್ದು ಇದರ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಕ್ಕೆ ಹೋಟೆಲ್ ಅಸೋಸಿಯೇಷನ್ (Hotel Association) ಮುಂದಾಗಿದೆ. ಹೋಟೆಲ್ ಅಸೋಸಿಯೇಷನ್ ನಗರದ ಎಲ್ಲಾ ಹೋಟೆಲ್​ಗಳ‌ ಮಾಲೀಕರೊಂದಿಗೆ ಸಭೆ ನಡಸಿದ್ದು, ಸಭೆ‌ಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.

Hotel

ದ್ರವ ಸಾರಜನಕ ಎಂದು ಕರೆಸಿಕೊಳ್ಳುವ ಲಿಕ್ವಿಡ್ ನೈಟ್ರೋಜನ್ ಗಮನಾರ್ಹವಾಗಿ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ. ಅದು ಸೀಮಿತ ಜಾಗದಲ್ಲಿ ಆವಿಯಾದಾಗ, ಅಪಾರ ಪ್ರಮಾಣದ ಶಕ್ತಿಯನ್ನು ಹೊರಹಾಕುತ್ತದೆ. ಈ ಸಂದರ್ಭದಲ್ಲಿ ಚರ್ಮವನ್ನು (Skin) ಹಾನಿಗೊಳಿಸುತ್ತದೆ ಮತ್ತು ತೀವ್ರ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ. ಈ ಆವಿಯನ್ನು ಉಸಿರಾಡುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಅಂಗಾಂಶ ಹಾನಿಯ ವರದಿಯಾಗಿರುವ ಹಿನ್ನಲೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಿಸುವಂತೆ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ (FKCCI) ಅಸೋಸಿಯೇಷನ್ ಪತ್ರ ಬರೆದಿದೆ.ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದೆ.

ಆಹಾರವನ್ನು ತಕ್ಷಣ ತಣ್ಣಗೆ ಮಾಡುವುದಕ್ಕೆ ಜೀವಕ್ಕೂ ಅಪಾಯವಿರುವ ಈ ಲಿಕ್ವಿಡ್ ನೈಟ್ರೋಜನ್ ನ್ನು ಬಳಕೆ ಮಾಡಲಾಗುತ್ತಿದೆ. ಸ್ಮೋಕ್‌ ಬಿಸ್ಕತ್‌, ಬಿಯರ್‌, ಐಸ್‌ ಕ್ರೀಂ (Smoke Biscuits, Beer, Ice Cream)ಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಈಗಾಗಲೇ ತಮಿಳುನಾಡು (Tamilnadu) ಇದರ ನೇರ ಬಳಕೆಯನ್ನು ನಿಷೇಧಿಸಿದ್ದು, ಕರ್ನಾಟಕದಲ್ಲೂ (Karnataka) ಬ್ಯಾನ್ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಈ ಆದೇಶ ಮೀರಿಯೂ ಒಂದು ವೇಳೆ ಲಿಕ್ವಿಡ್ ನೈಟ್ರೋಜನ್ ಪಾನ್ ಮಾರಿದ್ದೇ ಆದರೆ ಅಂತಹ ಹೋಟೆಲ್​ ಅಥವಾ ಪಾನ್ ಬೀಡಾ ದಂಡ ಆಥವಾ ಪರವಾನಿಗೆ ರದ್ದು ಮಾಡಲು ನಿರ್ಧಾರಿಸಲಾಗಿದೆ.ಜೊತೆಗೆ ಎಲ್ಲಾ ಹೋಟೆಲ್ ಹಾಗೂ ಪಾನ್ ಬೀಡಾ ಅಂಗಡಿಗಳಿಗೂ ಸಾಧ್ಯವಾದಲ್ಲಿ ಇದರ ಬಳಕೆ ನಿಲ್ಲಿಸುವಂತೆ ಹೋಟೆಲ್ ಅಸೋಸಿಯೇಷನ್ ಆದೇಶ ನೀಡಿದೆ.

Exit mobile version