ಬ್ಯಾಂಕ್ ಮ್ಯಾನೇಜರ್‌ ಎಂದು ನಂಬಿಸಿ ವಂಚನೆ

ಮೈಸೂರು ಸೆ 21 : ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಎಟಿಎಂ ಮಾಹಿತಿ ಪಡೆದ ಚಾಲಾಕಿಗಳು ಕ್ಷಣಾರ್ಧದಲ್ಲಿ 99,999 ರೂ. ಲಪಟಾಯಿಸಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ನಗರದಲ್ಲಿ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಬಷೀರ್ ಅಹಮದ್  ವಂಚನೆಗೊಳಗಾದ ವ್ಯೆಕ್ತಿಯಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ, ವಂಚಕರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 99,999 ರೂಪಾಯಿಗಳನ್ನು ಲಪಟಾಯಿಸಿ ಆರೋಪಿಗಳು ಪರಾರಿಯಾಗಿದ್ದಾರೆ.

ಗುಜರಿ ವ್ಯಾಪಾರಿ ಆ ಬಷೀರ್ ಅಹಮದ್ ನಂಜನಗೂಡಿನ ನೀಲಕಂಠನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದರು. ಅಹಮದ್ ಪತ್ನಿ ಷಹಜಹಾನ್ ಎಂಬುವರನ್ನು ವಂಚಕರು ಮೊಬೈಲ್ ಮೂಲಕ ಸಂರ್ಪಕಸಿದ್ದಾರೆ. ನಂತರ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ. ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ದಿನದಿಂದ ದಿನಕ್ಕೆ ವಂಚಕರ ಜಾಲ ಹೆಚ್ಚಾಗಿದ್ದು ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.

Exit mobile version