Bengaluru: ರಾಜ್ಯ ಸರ್ಕಾರವು ಕಳೆದ ಫೆ.16 ರಂದು ರಾಜ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ ಇದೀಗ ಬೃಹತ್ (BBMP Budget 2024) ಬೆಂಗಳೂರು ಮಹಾನಗರ ಪಾಲಿಕೆ
ಮಾರ್ಚ್ (March) ಮೊದಲ ವಾರದಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಲಿದೆ. 6,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದೆ. ಹೆಚ್ಚುವರಿ ಆಸ್ತಿ ತೆರಿಗೆ
ಸಂಗ್ರಹಿಸಲು ಬೆಂಗಳೂರಿನ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಲು ಈ ಬಾರಿಯ ಬಿಬಿಎಂಪಿ ಬಜೆಟ್ನಲ್ಲಿ ಈ ವಿಚಾರ ಪ್ರಸ್ತಾಪವಾಗುವ
ಸಾಧ್ಯತೆ (BBMP Budget 2024) ಇದೆ.
ಚುನಾಯಿತ ಮಂಡಳಿಯ ಅನುಪಸ್ಥಿತಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಂಡಿಸುತ್ತಿರುವ ನಾಲ್ಕನೇ ಬಿಬಿಎಂಪಿ ಬಜೆಟ್ ಇದಾಗಲಿದೆ. ಬಿಬಿಎಂಪಿಯ ಆಡಳಿತ ಮಂಡಳಿ ಅವಧಿಯು
2020 ರ ಸೆಪ್ಟೆಂಬರ್ನಲ್ಲಿ ಕೊನೆಗೊಂಡಿತ್ತು. ನಂತರ ವಿವಿಧ ಕಾರಣಗಳಿಂದ ಚುನಾವಣೆಯನ್ನು ಮುಂದೂಡುತ್ತಾ ಬರಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಒತ್ತು ನಿರೀಕ್ಷೆ
ನಗರದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದ್ದು, ಬ್ರ್ಯಾಂಡ್ ಬೆಂಗಳೂರಿಗೆ (Brand Bengaluru) ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. 70,000 ಕ್ಕೂ
ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ ಮತ್ತು ಅವುಗಳಲ್ಲಿ ಕೆಲವು ಬಜೆಟ್ನಲ್ಲಿ ಉಲ್ಲೇಖವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಹೆಬ್ಬಾಳ ಜಂಕ್ಷನ್ನಲ್ಲಿ ಪ್ರಾಯೋಗಿಕ ಸುರಂಗ ಮಾರ್ಗವನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಬಿಬಿಎಂಪಿ ಅದಕ್ಕೆ
ಅನುದಾನ ನೀಡುವ ನಿರೀಕ್ಷೆಯಿದೆ. ನಗರದ ವಿವಿಧ ರಸ್ತೆಗಳಿಗೆ ವೈಟ್ ಟಾಪಿಂಗ್ (White Topping) ಮಾಡಲು 400 ಕೋಟಿ ರೂ.ಗಳನ್ನು ಮೀಸಲಿಡುವ ಸಾಧ್ಯತೆ ಇದೆ.
ರಸ್ತೆ ಅಭಿವೃದ್ಧಿಯ ಹೊರತಾಗಿ ಪ್ರವಾಹ ತಡೆಗೆ ಕೈಗೊಂಡಿರುವ ಕ್ರಮಗಳನ್ನು ಬಜೆಟ್ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಬಿಬಿಎಂಪಿ (BBMP) ಆದಾಯವು ಈ ವಿತ್ತೀಯ ವರ್ಷದಲ್ಲಿ 4,790 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷಕ್ಕಿಂತ 1,000 ಕೋಟಿ ರೂ. ಹೆಚ್ಚಾಗಿದೆ. ಪರಿಷ್ಕೃತ ಜಾಹೀರಾತು ನೀತಿಯ
ಮೂಲಕ ಹೆಚ್ಚುವರಿಯಾಗಿ 2,000 ಕೋಟಿ ರೂ. ತೆರಿಗೆಯೇತರ ಆದಾಯವನ್ನು ಕ್ರೋಢೀಕರಿಸಲು ರಾಜ್ಯ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿತ್ತು.
ಕಳೆದ ಶುಕ್ರವಾರವಷ್ಟೇ ಸಿಎಂ ಸಿದ್ದರಾಮಯ್ಯ ಕರ್ನಾಟಕ ಬಜೆಟ್ (Karnataka Budget) ಮಂಡನೆ ಮಾಡಿದ್ದು, ಬೆಂಗಳೂರಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದರು.
ಇದೀಗ ಬಿಬಿಎಂಪಿ ಕೂಡ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸುವ, ಅವುಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ.
ಇದನ್ನು ಓದಿ: ಗಮನಿಸಿ: ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರ ಪರದಾಟ