ಮಾಲ್ ಮತ್ತು ಗೇಮಿಂಗ್ ಝೋನ್​​ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ‌ಸೂಚನೆ 

Bengaluru: ಕೆಲ ದಿನಗಳ ಹಿಂದಷ್ಟೇ ಗುಜರಾತ್​ನ ಗೇಮ್ ಝೋನ್ (Gujarat Game Zone) ಒಂದರಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಮೃತ ಪಟ್ಟವರ ಸಂಖ್ಯೆ 35ಕ್ಕೆ ಏರಿದ್ದು ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೂಡಾ ಬೆಂಗಳೂರಿನ ಮಾಲ್ (Bengaluru) ಮತ್ತು ಗೇಮಿಂಗ್ ಝೋನ್​​ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ‌ಸೂಚನೆ ನೀಡಿದೆ.

Fire Accident

ಈ ಕುರಿತಾಗಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar)​ ಅವರು, ಬೆಂಗಳೂರಿನಾದ್ಯಂತ ಶಾಪಿಂಗ್ ಮಾಲ್‌ಗಳು, ಗೇಮಿಂಗ್ ಮತ್ತು ಸಾಹಸ ವಲಯಗಳಂತಹ ಹೆಚ್ಚಾಗಿ ಜನದಟ್ಟಣೆ ಇರುವ ಮನರಂಜನಾ ಸ್ಥಳಗಳಲ್ಲಿ ಅಹಿತಕರ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಸೂಕ್ತವಾದ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.

ಅಗ್ನಿ ಅವಘಡಗಳನ್ನು ತಪ್ಪಿಸುವುದಕ್ಕಾಗಿ ನಿಯಮಿತ ತಪಾಸಣೆಗಳನ್ನು ಕಡ್ಡಾಯವಾಗಿ ಮಾಡುವುದರೊಂದಿಗೆ, ನಗರದಾದ್ಯಂತ ಮನರಂಜನಾ ಸ್ಥಳಗಳಲ್ಲಿ ಸುರಕ್ಷಿತ ಕ್ರಮಗಳನ್ನು ತ್ವರಿತವಾಗಿ ಅಳವಡಿಸುವಂತೆ ಹೇಳಲಾಗಿದೆ. ಗುಜರಾತ್‌ನ ರಾಜ್ ಕೋಟ್‌ನ (Rajkot) ಅಗ್ನಿ ದುರಂತವು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದ್ದು, ಬೆಂಗಳೂರಿನ ಹಲವು ಪ್ರತಿಷ್ಠಿತ ಮಾಲ್‌ಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಗೇಮ್ ಝನ್ ಹಾಗೂ ಸಾಹಸ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಇಂತಹ ಮನರಂಜನಾ ಕೇಂದ್ರಗಳು / ಗೇಮ್ ಜೋನ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ (BBMP) ಹೇಳಿದೆ.

ಅತಿ ಹೆಚ್ಚಾಗಿ ಜನ ಅದರಲ್ಲೂ ಮಕ್ಕಳು ಒಟ್ಟಾಗಿ ಸೇರುವ ಪ್ರದೇಶಗಳಲ್ಲಿ ಕಾಳಜಿ ಅಗತ್ಯ ಮನರಂಜನಾ ಕೇಂದ್ರಗಳಲ್ಲಿ ಗೇಮಿಂಗ್ ರೋಝನ್​​ಗಳಿರುವ ಪ್ರದೇಶದಲ್ಲಿ ಅಗ್ನಿದುರಂತ (Fire Accident) ಸೇರಿದಂತೆ ಯಾವುದೇ ಅನಾಹುತ ಸಂಭವಿಸದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲು ಮತ್ತು

ಈಗಾಗಲೇ ವಿಧಿಸಲಾಗಿರುವ ರಕ್ಷಣಾ ನಿಯಮ ಮತ್ತು ನಿರ್ಭಂದಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಲು ಅಧಿಕಾರಿಗಳ ನೇಮಿಸಲಾಗಿದೆ. ಯಾವುದೇ ದುರ್ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವುದು ಮಾಲ್ (Mall) ಮತ್ತು ಗೇಮ್ ಝೋನ್ ನಡೆಸುವವರ ಜವಾಬ್ಧಾರಿಯಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.

Exit mobile version