ಸುಂದರ ತ್ವಚೆ, ಮತ್ತು ತಲೆಕೂದಲೀನ ಆರೋಗ್ಯಕ್ಕೆ ಬಳಸಿ ಬೀಟ್ರೂಟ್.

ಬೀಟ್ರೂಟ್ (Beetroot) ನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅದೇ ರೀತಿ ನಮ್ಮ ತಲೆಕೂದಲು, ನಮ್ಮ ತ್ವಚೆ ಮತ್ತು ನಮ್ಮ ತುಟಿಗಳ ಆರೋಗ್ಯವನ್ನು ಸಹ ಬೀಟ್ರೂಟ್ ಕಾಪಾಡುತ್ತದೆ. ಬೇರೆ ಬೇರೆ ತರಕಾರಿಗಳ ಮಧ್ಯೆ ಇದನ್ನು ಸುಲಭವಾಗಿ ಗುರುತಿಸಬಹುದಾಗಿದೆ ಬೀಟ್ರೂಟ್ ಒಂದು ಕೆಂಪು ಬಣ್ಣದ ತರಕಾರಿ ಮತ್ತು ಇದರಲ್ಲಿ ಆರೋಗ್ಯಕ್ಕೆ ಪ್ರಯೋಜನವಾಗುವ ಗುಣಗಳು ಬೀಟ್ರೂಟ್ನಲ್ಲಿ ಇವೆ. ಮೊದಲನೆಯದಾಗಿ ಇದು ಕಣ್ಣಿನ ಕಾಂತಿ, ತಲೆ ಕೂದಲಿನ ಸೊಂಪಾದ ಬೆಳವಣಿಗೆ, ಚರ್ಮದ ಸೌಂದರ್ಯ ಹೀಗೆ ಹಲವು ರೀತಿಯಲ್ಲಿ ನೈಸರ್ಗಿಕವಾಗಿ ಬೀಟ್ರೂಟ್ ನಮಗೆ ಸಹಾಯವಾಗುತ್ತದೆ.

Beetroot

ಕಾಯಿಲೆಗಳಿಂದ ಮುಕ್ತಿ ಪಡೆಯಲು ಬಳಸಿ ಬೀಟ್ರೂಟ್
ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಆಗಾಗ ಬೀಟ್ರೂಟ್ ಸೇವನೆ ಮಾಡುವುದರಿಂದ ಹಲವಾರು ಬಗೆಯ ಕಾಯಿಲೆಗಳಿಂದ ನಾವು ದೂರವಿರವಹುದು,ಮತ್ತು ಇದು ಸೌಂದರ್ಯ ವರ್ಧಕವಾಗಿಯೂ ಕೆಲಸ ನಿರ್ವಹಿಸುತ್ತೆ ಹಾಗಾಗಿ ದೇಹದ ಹೊರಭಾಗ ಕೂಡ ಬೀಟ್ರೂಟ್ ಅನ್ನು ಈ ಕೆಳಗಿನಂತೆ ಬಳಸಿ.

ನಾವು ಯಾವಾಗಲು ಲಿಪ್ಸ್ಟಿಕ್ (Lipstick) ಬಳಸುವುದು ಸಾಮಾನ್ಯವಾಗಿಬಿಟ್ಟಿದೆ ಅದರ ಬದಲಾಗಿ ಮತ್ತು ಅಷ್ಟೇ ಅದರಿಂದ ತೊಂದರೆಯು ಆಗುತ್ತದೆ ಅಂತ ಗೊತ್ತಿದ್ದರೂ ನಾವು ಬಳಸುತ್ತೇವೆ ಅದರ ಬದಲಾಗಿ ಬೀಟ್ರೂಟ್ ಬಳಸಿದರೆ ನೈಸರ್ಗಿಕವಾಗಿ ತುಟಿ ಬಣ್ಣವನ್ನು ನೇರಳೆ ಬಣ್ಣಕ್ಕೆ ಬದಲಿಸುವಲ್ಲಿ ಬೀಟ್ರೂಟ್ ಯಶಸ್ವಿಯಾಗುತ್ತದೆ ಆದರೆ ಹೇಗೆ ಬಳಸುವುದು ಅಂತ ತಿಳಿಯೋಣ.

ಬೀಟ್ರೂಟ್ ಲಿಪ್ಸ್ಟಿಕ್ ಮಾಡುವ ವಿಧಾನ.
ಚಿಕ್ಕಾದಾಗಿರುವ ಬಿಟ್ ರೂಟ್ ಸಣ್ಣಗೆ ತುರಿದುಕೊಂಡು ,ಅದಕ್ಕೆ ಹಾಲಿನ ಕೆನೆಯನ್ನು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ತುಟಿಗಳ ಮೇಲೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಡಬೇಕು. ಆನಂತರ ನೀರಿನಲ್ಲಿ ತೊಳೆದು ತುಟಿಗಳ ಬಣ್ಣವನ್ನು ನೇರಳೆ ಬಣ್ಣವಾಗಿ ಪಡೆಯಬಹುದು. ಇದಕ್ಕೆ ಕಾರಣವೆಂದರೆ ಬೀಟ್ರೂಟ್ ನಲ್ಲಿ ಇರುವಂತಹ ನೈಸರ್ಗಿಕ ಬಣ್ಣದ ಪಿಗ್ಮೆಂಟ್.​

ನಮ್ಮ ಚರ್ಮ ಯಾವಾಗಲು ಹೊಳಪಿನಿಂದ ಕೂಡಿರಲು ಈ ರೀತಿ ಮಾಡಬಹುದು. ಒಂದು ಮೀಡಿಯಂ ಗಾತ್ರದ ಬೀಟ್ರೂಟ್ ತೆಗೆದುಕೊಂಡು ಅದನ್ನು ಸಣ್ಣ ಸಣ್ಣ ಪೀಸ್ ಗಳಾಗಿ ಕತ್ತರಿಸಿ ಅದಕ್ಕೆ ಅರ್ಧ ನಿಂಬೆ ರಸ ಮಿಕ್ಸ್ ಮಾಡಿ ನಿಯಮಿತವಾಗಿ ಆಗಾಗ ಸೇವಿಸುವುದರಿಂದ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ (Anti-Oxidant) ಮತ್ತು ಪ್ರೋಟೀನ್ ಪ್ರಮಾಣ ಹೆಚ್ಚಾಗಿರುವುದರಿಂದ ಬೀಟ್ರೂಟ್ ನಮ್ಮ ಚರ್ಮದಲ್ಲಿನ ಹಾನಿಕಾರಕ ಅಂಶಗಳನ್ನು ದೂರ ಮಾಡಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

ಏಕೆಂದರೆ ಬೀಟ್ರೂಟ್ ನೈಸರ್ಗಿಕವಾಗಿ ನಿಮ್ಮ ತ್ವಚೆಯ ಮೇಲೆ ಪಿಂಕ್ ಶೇಡ್ ನೀಡುತ್ತದೆ. ಹಾಗಾಗಿ ದುಬಾರಿ ಹಣ ಕೊಟ್ಟು ಖರೀದಿಸಿದ ಹಲವಾರು ಕಾಸ್ಮೆಟಿಕ್ ಬ್ಲಶರ್ (Cosmetic Blusher) ಗಳು ಬಳಸುವ ಬದಲಾಗು ಇದನ್ನು ಬಳಸಬಹುದು.ಮತ್ತು ಇದು ನಮ್ಮ ಚರ್ಮದ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ದೂರ ಮಾಡುವಲ್ಲಿ ನೆರವಾಗುತ್ತದೆ. ತ್ವಚೆಗೆ ಇದನ್ನು ಬಸುವ ವಿಧಾನ: ಎರಡು ಮೀಡಿಯಂ ಗಾತ್ರದ ಬೀಟ್ರೂಟ್ ಗಳನ್ನು ಚೆನ್ನಾಗಿ ಬೇಯಿಸಿ ಮ್ಯಾಶ್ ಮಾಡಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ 2 ರಿಂದ 3 ಟೀ ಚಮಚ ಕಾಯೋಲಿನ್ ಪೌಡರ್ (Kaolin Powder) ಸೇರಿಸಿ ಮಿಕ್ಸ್ ಮಾಡಿ ಅದನ್ನು ಕುತ್ತಿಗೆ ಹಾಗೂ ಮುಖದ ಮೇಲೆ ಅಪ್ಲಯ್ ಮಾಡಿ. 20 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ಮುಖ ತೊಳೆದುಕೊಳ್ಳಿ.​

ತಲೆ ಕೂದಲಿನ ಆರೋಗ್ಯಕ್ಕಾಗಿ ಬೀಟ್ರೂಟ್.
ಇದರಲ್ಲಿ ವಿಟಮಿನ್ ಸಮಮೃದ್ಧ ವಾಗಿರಿವುದರಿಂದ ವಿಟಮಿನ್ ಅಂಶಗಳು, ಪ್ರೋಟೀನ್, ಪೋಟಾಸಿಯಂ (Protien, Potassium) ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳ ವಾಗಿವೆ. ನೀವು ತಲೆ ಕೂದಲಿನ ಕಿರು ಚೀಲಗಳನ್ನು ಉತ್ತೇಜಿಸಿ ತಲೆ ಕೂದಲಿನ ಬೆಳವಣಿಗೆ ಹೆಚ್ಚಾಗುವಂತೆ ಮಾಡುತ್ತವೆ.

ಇದಕ್ಕಾಗಿ ನೀವು ಅರ್ಧ ಕಪ್ ಬಿಟ್ರೋಟ್ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಅರ್ಧಕ್ಕೆ ಬರುವಂತೆ ಕುದಿಸಿ ಆನಂತರ ಇದನ್ನು ಶೋಧಿಸಿಕೊಳ್ಳಿ. ಈಗ ಬೀಟ್ರೂಟ್ ಎಲೆಗಳನ್ನು ಪೇಸ್ಟ್ ತರಹ ಮಾಡಿಕೊಂಡು ಅದಕ್ಕೆ ಒಂದು ಟೀ ಚಮಚ ಮೆಹಂದಿ ಎಲೆಗಳನ್ನು (Mehndi Leaves) ಸೇರಿಸಿ ಮಿಕ್ಸ್ ಮಾಡಿ ತಲೆಗೆ ಮಸಾಜ್ ಮಾಡಿ. ನಂತರ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಶಾಂಪೂ ಹಾಕಿ ತೊಳೆದುಕೊಳ್ಳಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ತಲೆ ಕೂದಲು ಉದುರುವಿಕೆ ಸಮಸ್ಯೆ ದೂರವಾಗುತ್ತದೆ.

ಮೇಘಾ ಮನೋಹರ್ ಕಂಪು.

Exit mobile version