ಬಂದೇ ಬಿಟ್ಟಿತು ‘ಭಜರಂಗಿ 2’

ಈ ವಾರ ತೆರೆಕಾಣುತ್ತಿರುವ ‘ಭಜರಂಗಿ 2’ ಚಿತ್ರದ ಬಗ್ಗೆ ಬಿಡುಗಡೆಪೂರ್ವ ಕಾರ್ಯಕ್ರಮದಲ್ಲಿ ಅದ್ಭುತ ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ

ಚಿನ್ಮಿಣಕಿ ಎನ್ನುವ ವಿಭಿನ್ನ ಪಾತ್ರ ಮಾಡಿರುವ ಭಾವನಾ ‘ಟಗರು’ ಬಳಿಕ ಮತ್ತೊಮ್ಮೆ ಶಿವಣ್ಣನ ಜೊತೆಗೆ ನಟಿಸುತ್ತಿರುವ ಖುಷಿ ಹಂಚಿಕೊಂಡಿದ್ದಾರೆ. ಉಳಿದಂತೆ ಸೂಪರ್ ಸ್ಟಾರ್ ಆಗಿದ್ದುಕೊಂಡು ಕೂಡ ಡೌನ್ ಟು ಅರ್ತ್ ಆಗಿರುವ ಶಿವರಾಜ್ ಕುಮಾರ್ ಅವರ ವ್ಯಕ್ತಿತ್ವಕ್ಕೆ ವೇದಿಕೆಯಿಂದಲೇ ಕೈ ಮುಗಿದರು ಭಾವನಾ.

ಕೊರೊನಾ, ಲಾಕ್ಡೌನ್ ಮಾತ್ರವಲ್ಲ ಶೂಟಿಂಗ್ ವೇಳೆ ಸೆಟ್ ಹಾಳಾಗಿದ್ದು ಹೀಗೆ ಎಷ್ಟೋ ಕಷ್ಟಗಳು ಬಂದರೂ ನಿರ್ದೇಶಕ ಹರ್ಷ ಮತ್ತು ನಿರ್ಮಾಪಕರಾದ ಜಯಣ್ಣ ಭೋಗಣ್ಣ ಸೇರಿಕೊಂಡು ಅದೇ ಉತ್ಸಾಹದಿಂದ ಚಿತ್ರ ಪೂರ್ತಿ ಮಾಡಲು ತಯಾರಾದರು. ಇನ್ನು ಎಲ್ಲರ ಪಾತ್ರಗಳು ಕೂಡ ವಿಭಿನ್ನವಾಗಿವೆ. ಅದರಲ್ಲೂ ಆರಂಭದಲ್ಲಿ ನನ್ನ ತಂಗಿಯಾಗಿ ನಟಿಸಿದ್ದ ಶ್ರುತಿಯವರು ಇದರಲ್ಲಿ ಪಡೆದಿರುವ ಲುಕ್ ಗಮನಿಸಿದರೆ ಅದ್ಭುತವಾಗಿದೆ ಎಂದರು ಶಿವಣ್ಣ. ಚಿತ್ರದಲ್ಲಿ ಒಳ್ಳೆಯ ಖಳನಟರನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ಒಳ್ಳೆಯ ಸ್ಕೋಪ್ ನೀಡಿದ್ದಾರೆ ಹರ್ಷ ಎಂದ ಶಿವಣ್ಣ, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದ ಯಶ್ ಅವರಿಗೂ ವಂದನೆ ಹೇಳಿದರು. ಯಶ್ ಗೆ ಒಂದು ಆಟಿಟ್ಯೂಡ್ ಇದೆ. ಅದು ಸಂಪೂರ್ಣವಾಗಿ ಪಾಸಿಟಿವ್ ಆಗಿದೆ. ಆ ಆಟಿಟ್ಯೂಡ್ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಪುನೀತ್ ರಾಜ್ ಕುಮಾರ್ ಅವರು ನಾನು ಮೊದಲೇ ಹೇಳಿದಂತೆ ಶಿವಣ್ಣನ ಫ್ಯಾನ್ ಎಂದರು. ನಾನು ಶಿವಣ್ಣ ಚಿತ್ರರಂಗಕ್ಕೆ ಬಂದ ವರ್ಷವೇ ಹುಟ್ಟಿರುವವನು. ಆಗಿನಿಂದಲೂ ಅವರಿಗೆ ಫ್ಯಾನ್ ನಾನು ಎಂದು ಯಶ್ ಹೇಳಿದಾಗ ಸಭೆಯಲ್ಲಿ ಸಿಳ್ಳೆ ಚಪ್ಪಾಳೆಗಳ ಸುರಿಮಳೆಯಾಯಿತು. ಒಟ್ಟಿನಲ್ಲಿ ‘ಭಜರಂಗಿ 2’ ಈ ವರ್ಷದ ಭಾರೀ ನಿರೀಕ್ಷೆಯ ಚಿತ್ರ ಎಂದೇ ಹೇಳಬಹುದು.

Exit mobile version