ಕೇರಳ, ಮಾ. 31: ಕೇರಳ ಗಡಿಯಲ್ಲಿ ಎನ್ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬರೋಬ್ಬರಿ 3 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಜೊತೆಗೆ 1 ಎಕೆ 47 ರೈಫಲ್, 1000 ಬುಲೆಟ್ಗಳು ಜಪ್ತಿಯಾಗಿವೆ. ಈ ಸಂಬಂಧ ಎನ್ಸಿಬಿ ಅಧಿಕಾರಿಗಳು ಶ್ರೀಲಂಕಾದ 6 ಪ್ರಜೆಗಳನ್ನು ಬಂಧಿಸಿದ್ದಾರೆ.
ಇದೇ ಮಾರ್ಚ್ 25ರಂದು ಕೇರಳ ಗಡಿಯಲ್ಲಿ ಶ್ರೀಲಂಕಾ ಮೀನುಗಾರಿಕಾ ಬೋಟ್ ಮೇಲೆ NCB ಅಧಿಕಾರಿಗಳಿಂದ ಮಹತ್ವದ ಕಾರ್ಯಾಚರಣೆ ನಡೆದಿದೆ. ಕೇರಳ ಸಮೀಪದ Vizhinam ಎಂಬಲ್ಲಿ ಸಮುದ್ರದ ಮಾರ್ಗವಾಗಿ ರವಿಹನ್ಸಿ ಅನ್ನೋ ಬೋಟ್ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಎಲ್ಲಾ ಹೆರಾಯಿನ್ ಪ್ಯಾಕೆಟ್ಗಳ ಮೇಲೆ ಹಾರುವ ಕುದುರೆಯ ಚಿತ್ರ ಕಂಡುಬಂದಿದೆ, ಇದು ಮಾದಕವಸ್ತು, ಕಳ್ಳಸಾಗಣೆ ಸಿಂಡಿಕೇಟ್ಗಳು ತಮ್ಮ ಔಷಧಿಗಳನ್ನು ಬ್ರಾಂಡ್ ಮಾಡಲು ಮಾಡಿಕೊಂಡಿರುವ ಸಾಮಾನ್ಯ ಅಭ್ಯಾಸವಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬೋಟ್ನ ನೀರಿನ ಟ್ಯಾಂಕ್ ಒಳಗೆ ಹೆರಾಯಿನ್ ಇಡಲಾಗಿತ್ತು. ಇನ್ನು ಈ ಪ್ರಕರಣ ಸಂಬಂಧ ಶ್ರೀಲಂಕಾದ 6 ಪ್ರಜೆಗಳನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ.