ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್

ನವದೆಹಲಿ,ಜೂ.22: ಕೊರೊನಾ ವಿರುದ್ಧ ಹೈದರಾಬಾದ್ ಮೂಲದ ಔಷಧ ತಯಾರಕ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ 3 ನೇ ಹಂತದ ಪ್ರಯೋಗಗಳ ಡೇಟಾವನ್ನು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ (DCGI) ಸಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗಗಳ ಮಾಹಿತಿಯ ವಿವಾದದ ಮಧ್ಯೆಯೇ ಜೂನ್‌ನಲ್ಲಿ ಇದನ್ನು ಸಾರ್ವಜನಿಕಗೊಳಿಸುವುದಾಗಿ ಭಾರತ್ ಬಯೋಟೆಕ್ ಹೇಳಿತ್ತು. ಆದರೆ ಈಗ ಜುಲೈನಲ್ಲಿ ಡೇಟಾವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಕೊವಿಡ್ -19 ವಿರುದ್ಧ ರಾಷ್ಟ್ರವ್ಯಾಪಿ ಚಾಲನೆಯಲ್ಲಿ ಬಳಸಲಾಗುವ ಮೂರು ಲಸಿಕೆಗಳಲ್ಲಿ ಕೊವ್ಯಾಕ್ಸಿನ್ ಕೂಡ ಸೇರಿದೆ. ಇದನ್ನು ಜನವರಿಯಲ್ಲಿ ಡಿಸಿಜಿಐ ಅನುಮೋದನೆ ನೀಡಿತು. ಆದಾಗ್ಯೂ, ಆರಂಭದಿಂದಲೂ, ಕೊವಾಕ್ಸಿನ್‌ನ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳು ಮೂಡಿಬಂದವು, ಏಕೆಂದರೆ ಲಸಿಕೆಯನ್ನು ಅದರ ಮೂರನೇ ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸದೆ ತುರ್ತು ಬಳಕೆಯ ಅಧಿಕಾರ ನೀಡಲಾಯಿತು. ಏಪ್ರಿಲ್​ನಲ್ಲಿ ಭಾರತ್ ಬಯೋಟೆಕ್ ಬಿಡುಗಡೆ ಮಾಡಿದ ಮಧ್ಯಂತರ ದತ್ತಾಂಶವು ರೋಗಲಕ್ಷಣದ ಕಾಯಿಲೆಯ ವಿರುದ್ಧ ಲಸಿಕೆ ಶೇ 7 ಮತ್ತು ಗಂಭೀರ ಅನಾರೋಗ್ಯದ ವಿರುದ್ಧ ಶೇ 100 ಪರಿಣಾಮಕಾರಿಯಾಗಿದೆ ಎಂದು ತೋರಿಸಿದೆ.

Exit mobile version