ಬೆಂಗಳೂರು, ನ. 5: ಬಿಗ್ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ, ಉತ್ತಮವಾಗಿ ಆಡುವುದರ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಮೂಲಕ ಬಿಗ್ ಬಾಸ್ ಟ್ರೋಫಿ ಹಾಗೂ 50 ಲಕ್ಷವನ್ನು ಬಹುಮಾನವಾಘಿ ಪಡೆದುಕೊಂಡಿದ್ದರು. ಇದರ ಜತೆಯಲ್ಲಿ ಕಾರ್ ಒಂದು ಉಡುಗೊರೆಯಾಗಿ ಲಭಿಸಿತ್ತು. ಆದರೆ ಒಂದು ವರ್ಷವಾದರೂ ಆ ಕಾರು ಮಾತ್ರ ಶೈನ್ ಶೆಟ್ಟಿಯ ಕೈಗೆ ಲಭಿಸಿರಲಿಲ್ಲ. ಇದೀಗ ಶೈನ್ ಶೆಟ್ಟಿ ಮನೆಗೆ ಕಾರು ತಲುಪಿದೆ.
ಟಾಟಾ ಆಲ್ಟ್ರೋಜ್ ಕಾರನ್ನು ಶೈನ್ ಶೆಟ್ಟಿ ಬಹುಮಾನವಾಗಿ ಪಡೆದಿದ್ದು ,ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಶೈನ್ ಶೆಟ್ಟಿ ಅಪ್ ಲೋಡ್ ಮಾಡಿದ್ದಾರೆ . ಜೊತೆಗೆ ನಿಮ್ಮೆಲ್ಲರ ಆಶಿರ್ವಾದ ದಿಂದ ಕಾರು ನನಗೆ ಸಿಕ್ಕಿರೋದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ.