ಭಾನುವಾರದಿಂದ ‘ಬಿಗ್ ಬಾಸ್’

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರ ಅಂದರೆ ಫೆಬ್ರವರಿ 28ರ ಸಂಜೆ 6 ಗಂಟೆಯಿಂದ ‘ಬಿಗ್ ಬಾಸ್’ ಎಂಟನೇ ಸೀಸನ್ ಪ್ರಸಾರಗೊಳ್ಳಲಿದೆ.

ಕಿಚ್ಚ ಸುದೀಪ್ ಅವರ ಸಮರ್ಥ ಸಾರಥ್ಯದಲ್ಲಿ ಬಿಗ್ ಬಾಸ್ ಈಗಾಗಲೇ ಏಳು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಎಂಟನೇ ಸೀಸನ್‌ಗಾಗಿ ವೀಕ್ಷಕರು ಕಾತರರಾಗಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ತಯಾರಿ ನಡೆಸಿರುವುದಾಗಿ ವಾಹಿನಿಯ ಮುಖ್ಯಸ್ಥ ಹಾಗೂ ‘ಬಿಗ್ ಬಾಸ್’ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ. ಅವರು ಕಾರ್ಯಕ್ರಮದ ನಿರೂಪಕ ಸುದೀಪ್ ಅವರೊಡನೆ ಸೇರಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

“ಪ್ರತಿ ಬಾರಿಯಂತೆ ಈ ಸಲವೂ ಹಲವು ಹೊಸತುಗಳು ಇರಲಿವೆ” ಎಂದರು, ‘ಒಂದು ಮನೆ, ಪರಸ್ಪರ ಸಂಬಂಧವಿಲ್ಲದ 17 ಮಂದಿ, ನಿದ್ದೆಗೆಡಿಸುವ ಒಂದು ದೊಡ್ಡ ಮನೆ, ಬಣ್ಣ ಬಣ್ಣದ ಈ ಮನೆ ನಮ್ಮ ವ್ಯಕ್ತಿತ್ವದ ಬಣ್ಣಗಳನ್ನು ಬಯಲು ಮಾಡುವ ಆಲಯ ‘ಎನ್ನುವುದು ತಮ್ಮ ಅನಿಸಿಕೆ ಎಂದು ಅವರು ಹೇಳಿದರು. ಇವೆಲ್ಲದರ ಜೊತೆಗೆ ಎಂದಿನಂತೆ ನಿರೂಪಕರಾಗಿ ಸುದೀಪ್ ಕೂಡ ಇರುವ ಕಾರಣ ಮನರಂಜನೆ ದುಪ್ಪಟ್ಟಾಗುತ್ತದೆ ಎಂದು ಗುಂಡ್ಕಲ್ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಬಿಗ್ ಬಾಸ್ ಶೋನ ರೂವಾರಿ ನಟ ಸುದೀಪ್, “ಪ್ರತಿ ಸೀಸನ್ ನೋಡೋರಿಗೆ ಮಾತ್ರ ಅಲ್ಲ, ನನಗೂ ಅಚ್ಚರಿಗಳನ್ನು ಹೊತ್ತು ತರುತ್ತದೆ ಎಂದರು. ಲಾಕ್ ಡೌನ್ ನಿಂದ ಹೊರಬರುತ್ತಿರುವ ಈ ಸನ್ನಿವೇಶದಲ್ಲಿ ಹೊಸ ಹುರುಪಿನಿಂದ ಈ ಶೋವನ್ನು ಎದುರುನೋಡುತ್ತಿರುವುದಾಗಿ ಸುದೀಪ್ ತಿಳಿಸಿದರು.

ಟಿವಿಯಲ್ಲಿ ಮಾತ್ರವಲ್ಲ, ಡಿಜಿಟಲ್ ಮಾಧ್ಯಮದಲ್ಲೂ ಈ ಸಲದ ಬಿಗ್ ಬಾಸ್ ವೀಕ್ಷಕರಿಗೆ ರಸದೌತಣ ನೀಡಲಿದೆ. ವೋಟ್ ಮತ್ತು ವೋಟ್ ಸೆಲೆಕ್ಷನ್ ವಿಚಾರದಲ್ಲಿ ಬಿಗ್ ಬಾಸ್ ಮತ್ತಷ್ಟು ಬಿಗ್ ಅಗಲಿದೆ. ವೂಟ್ನಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ನೀವು ಬಿಗ್ ಬಾಸ್ ಅನ್ನು ಲೈವ್ ಆಗಿ ನೋಡಬಹುದು. ಟಿ.ವಿ.ಯಲ್ಲಿ ಕಾಣದಿರುವುದನ್ನೂ ವೂಟ್‌ನಲ್ಲಿ ನೀವು ನೋಡಬಹುದು. ಫೇಸ್ ಬುಕ್‌ನಲ್ಲೂ ಬಿಗ್ ಬಾಸ್ ನಿಮ್ಮನ್ನು ರಂಜಿಸಲಿದೆ. ಅಲ್ಲಿಗೆ ಬಿಗ್ ಬಾಸ್ ಸೀಸನ್ ಎಂಟರ ಸಕಲ ಮಾಹಿತಿಯನ್ನೂ ನೀವು ತಿಳಿದುಕೊಂಡಂತಾಯಿತು- ಒಂದನ್ನು ಬಿಟ್ಟು, ಗೃಹಪ್ರವೇಶದ ಸಮಯವೇನೋ ಸಂಜೆ ಆದು. ಆದರೆ ಮನೆಯೊಳಕ್ಕೆ ಹೋಗ್ತಾ ಇರೋರು ಯಾರು ಯಾರು? ಅದು ಮಾತ್ರ ಇನ್ನೂ ಕೋಟಿ ರುಪಾಯಿ ಪ್ರಶ್ನೆ. ನೂರು ದಿನ ಈ ಸುಂದರ ಬಂಧೀಖಾನೆಯೊಳಗೆ ಸೆರೆಯಾಗಲಿರುವವರು ಯಾರು? ದಿನೇದಿನೇ ನಿಮ್ಮ ಮನೆಯವರೇ ಆಗಲಿರುವ ಆ 17 ಜನ ಬಂಧುಗಳು ಯಾರು? ಉತ್ತರಕ್ಕಾಗಿ ಭಾನುವಾರ ಸಂಜೆ ಉತ್ತರ ಸಿಗಲಿದೆ.

Exit mobile version