ಬಿಗ್‌ಬಾಸ್‌ ಮನೆಗೂ ನಿವಾರ್ ಚಂಡಮಾರುತದ ಎಫೆಕ್ಟ್

ನಿವಾರ್‌ ಚಂಡಮಾರುತದಿಂದ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆಂದು ಹಾಕಲಾಗಿದ್ದ ಮನೆ ಸೆಟ್‌ ಒಳಗೆ ನೀರು ನುಗ್ಗಿದೆ ಎನ್ನಲಾಗಿದೆ.

ಕೆಲ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಚೇಂಬರಂಬಕ್ಕೆ ಡ್ಯಾಮ್‌ನಿಂದ ನೀರು ಬಿಡಲಾಗಿದ್ದು, ಹತ್ತಿರದ ಪ್ರದೇಶಗಳು ಜಲಾವೃತವಾಗಿದೆ ಎಂದು ತಿಳಿದು ಬಂದಿದೆ.  ಬಿಗ್‌ಬಾಸ್‌ ಮನೆ ಡ್ಯಾಮ್‌ಗೆ ತುಂಬಾನೇ ಹತ್ತಿರವಿದ್ದಿದ್ದರಿಂದ ಮನೆಯೊಳಗೂ ನೀರು ಬಂದಿದೆ. ಸದ್ಯಕ್ಕೆ ಎಲ್ಲಾ ಸ್ಪರ್ಧಿಗಳನ್ನು ಸ್ಥಳೀಯ 5 ಸ್ಟಾರ್‌ ಹೊಟೇಲ್‌ಗಳಿಗೆ ಸ್ಥಳಾಂತಿರಸಲಾಗಿದೆ.

Exit mobile version