ಬಿಲ್ಕಿಸ್ ಬಾನೋ ಪ್ರಕರಣ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಅಪರಾಧಿಗಳ ಮನೆಗಳಿಗೆ ಬೀಗ

ಬಿಲ್ಕಿಸ್ ಬಾನೋ ಪ್ರಕರಣಕ್ಕೆ #BilkisBanoCase ಸಂಬಂಧಪಟ್ಟಂತೆ ನಿನ್ನೆ(ಜ.08) (Bilkis Bano case Update) ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರದ ವಿರುದ್ಧ ಮಹತ್ವದ ಆದೇಶವನ್ನು

ಹೊರಡಿಸಿದ್ದು,ಇದರ ಬೆನ್ನಲ್ಲೇ 11 ಅಪರಾಧಿಗಳಲ್ಲಿ ಒಂಭತ್ತು ಜನರು ವಾಸಿಸುತ್ತಿದ್ದ ಗುಜರಾತ್‌ನ (Gujarat) ದೋಹದ್ ಜಿಲ್ಲೆಯ ರಣಧಿಕ್‌ಪುರ್ ಮತ್ತು ಸಿಂಗ್‌ವಾಡ್ ಅವಳಿ ಗ್ರಾಮಗಳಲ್ಲಿ ಮನೆಗಳಿಗೆ ಬೀಗ

ಹಾಕಲಾಗಿದೆ. ಈ ಕುರಿತು ವರದಿ ಮಾಡಿರುವ ದಿ ಇಂಡಿಯನ್ ಎಕ್ಸ್‌ಪ್ರೆಸ್ (The Indian Express), ಸೋಮವಾರ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಆದೇಶವನ್ನು

ಸುಪ್ರೀಂ ಕೋರ್ಟ್‌ (Supreme Court) ರದ್ದುಪಡಿಸಿರುವ ಬೆನ್ನಲ್ಲೇ ನಾವು ಅಪರಾಧಿಗಳು ವಾಸಿಸುತ್ತಿದ್ದ ಗ್ರಾಮಕ್ಕೆ ತೆರಳಿದ್ದೆವು. ಆದರೆ, ಅಲ್ಲಿದ್ದ ಅವರ ಸಂಬಂಧಿಕರು 9 ಅಪರಾಧಿಗಳು ಎಲ್ಲಿದ್ದಾರೆ ಎಂಬ

ಮಾಹಿತಿ ಬಿಟ್ಟುಕೊಡಲು ನಿರಾಕರಿಸಿದ್ದಾರೆ (Bilkis Bano case Update) ಎಂದು ತಿಳಿಸಿದೆ.

ನಮ್ಮದು ಹಿಂದೂ ಧರ್ಮದಲ್ಲಿ ಅತ್ಯಂತ ಶ್ರದ್ಧೆ, ಭಕ್ತಿ ಇರುವ ಕುಟುಂಬ, ನಮ್ಮ ಮಕ್ಕಳು ಆ ರೀತಿಯ ಅಪರಾಧವೆಸಗಲು ಸಾಧ್ಯವಿಲ್ಲ ಎಂದು ಗೋವಿಂದ್ ನಾಯ್‌ (Govind Nai)ನ ವಯಸ್ಸಾದ ಪೋಷಕರು

ಹೇಳಿದ್ದಾರೆ. ಗೋವಿಂದ್ ನಾಯ್‌ನ ಸಹೋದರ ಜಶ್ವಂತ್ ನಾಯ್ ಕೂಡ 11 ಅತ್ಯಾಚಾರಿಗಳಲ್ಲಿ ಒಬ್ಬ. “ನನ್ನ ಮಗ ನಿರಪರಾಧಿ. ಆತ ಕಾಂಗ್ರೆಸ್‌ನ ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾನೆ” ಎಂದು ಅಪರಾಧಿಗಳಲ್ಲಿ

ಒಬ್ಬನಾದ ಗೋವಿಂದ್(55) ನ ತಂದೆ ಅಖಂಭಾಯ್ ಚತುರ್ಭಾಯಿ ರಾವಲ್ (87) ಹೇಳಿದ್ದಾರೆ.

ಜೈಲಿಗೆ (Jail) ಹಿಂತಿರುಗುವುದು ದೊಡ್ಡ ವಿಷಯವಲ್ಲ. ಅವರು ಕಾನೂನು ಬಾಹಿರವಾಗಿ ಜೈಲಿನಿಂದ ಹೊರಬಂದಿಲ್ಲ. ಕಾನೂನು ಪ್ರಕ್ರಿಯೆಗಳೊಂದಿಗೆ ಬಿಡುಗಡೆ ಮಾಡಲಾಗಿತ್ತ. ಆದರೆ ಈಗ ಕಾನೂನು ಹಿಂತಿರುಗಿ

ಹೋಗುವಂತೆ ಹೇಳಿದೆ. ಆದ್ದರಿಂದ ವಾಪಾಸ್ ಆಗುತ್ತಾರೆ. ಅವರು 20 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಇದು ಹೊಸದೇನಲ್ಲ” ಎಂದಿದ್ದಾರೆ.

ನಮ್ಮ ಮಕ್ಕಳು ಅಯೋಧ್ಯೆಯ #Ayodhya ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡಬೇಕೆಂದು ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಏನನ್ನೂ ಮಾಡದೆ ದಿನವೂ ತಿರುಗಾಡುವುದಕ್ಕಿಂತ

ಸೇವೆ ಮಾಡುವುದು ಉತ್ತಮ. ಅವರು ಜೈಲಿನಿಂದ ಬಿಡುಗಡೆಯಾದಾಗಿನಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಆತನ ತಂದೆ ಅಖಂಭಾಯ್ ಹೇಳಿದ್ದಾರೆ.

ಏನಿದು ಪ್ರಕರಣ:
ಗೋಧ್ರಾದಲ್ಲಿ (Godhra) ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ನಂತರ ಬಿಲ್ಕಿಸ್ ಬಾನೊ ಮತ್ತು ಆಕೆಯ ಕುಟುಂಬ ಫೆಬ್ರವರಿ 28, 2002 ರಂದು ರಣಧಿಕ್‌ಪುರದಲ್ಲಿದ್ದ ತಮ್ಮ ಮನೆಯನ್ನು ತೊರೆದಿದ್ದರು.

ಮಾರ್ಚ್ (March) 3,2002 ರಂದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ 14 ಸದಸ್ಯರನ್ನು ದಾಹೋಡ್‌ನ

ಲಿಮ್ಖೇಡಾ ತಾಲೂಕಿನ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಮೃತ 14 ಮಂದಿಯ ಪೈಕಿ ಆರು ಮಂದಿಯ ಮೃತದೇಹಗಳು ಇದುವರೆಗೆ ಪತ್ತೆಯಾಗಿಲ್ಲ.

ಈ ಪ್ರಕರಣದ ಮತ್ತೋರ್ವ ಅಪರಾಧಿ, ರಾಧೇಶ್ಯಾಮ್ ಶಾ ಕಳೆದ 15 ತಿಂಗಳಿಂದ ಮನೆಗೆ ಬಂದಿಲ್ಲ ಎಂದು ಆತನ ತಂದೆ ಭಗವಾನ್‌ದಾಸ್ ಶಾ (Bhagwandas Shah) ಹೇಳಿದ್ದಾರೆ. ಆದರೆ, ರಾಧೇಶ್ಯಾಮ್

ಸೇರಿದಂತೆ ಬಹುತೇಕ ಎಲ್ಲಾ ಅಪರಾಧಿಗಳು ಭಾನುವಾರದವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ರಾಧೇಶ್ಯಾಮ್ ಎಲ್ಲಿದ್ದಾನೆಂದು ನಮಗೆ ಗೊತ್ತಿಲ್ಲ. ಆತ ತನ್ನ ಹೆಂಡತಿ

ಮತ್ತು ಮಗನ ಜೊತೆ ಮನೆ ಬಿಟ್ಟು ಹೋಗಿದ್ದಾನೆ” ಎಂದು ಭಗವಾನ್‌ದಾಸ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಪರಾಧಿಗಳ ಮನೆಗಳ ಮುಂದೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು” ಎಂದು ರಣಧಿಕ್‌ಪುರ್‌ ಪೊಲೀಸ್

ಠಾಣೆಯ ಪ್ರಭಾರಿ ಸಬ್ ಇನ್ಸ್‌ಪೆಕ್ಟರ್ (Sub Inspector) ಜಿ ಬಿ ರಥ್ವಾ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಕೆಆರ್​ಎಸ್​ನ 30ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವಂತಿಲ್ಲ: ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್​

Exit mobile version