ಐಡಬ್ಲ್ಯುಎಫ್‌ ವಿಶ್ವಕಪ್‌ ವೇಟ್‌ಲಿಫ್ಟಿಂಗ್‌ ಮಹಿಳೆಯರ ವಿಭಾಗದಲ್ಲಿ ಕಂಚು ಗೆದ್ದ ಬಿಂದ್ಯಾರಾಣಿ ದೇವಿ.

Phuket(Thailand): ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ (Bindyarani Devi)  ಐಡಬ್ಲ್ಯುಎಫ್ ವಿಶ್ವಕಪ್‌ನ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.25 ವರ್ಷದ ವಯಸ್ಸಿನ ಬಿಂದ್ಯಾರಾಣಿ ಒಟ್ಟು 196 ಕೆಜಿ (83 ಕೆಜಿ + 113 ಕೆಜಿ) ಭಾರ ಎತ್ತುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ತೂಕ ಒಲಂಪಿಕ್ಸ್ (Olympic)ನಲ್ಲಿ ಇರುವುದಿಲ್ಲ. ಈ ಮೊದಲು ಬಿಂದ್ಯಾ ರಾಣಿ 2022ರಲ್ಲಿ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 203 ಕೆ. ಜಿ ಭಾರವನ್ನು ಎತ್ತಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

ಬಿಂದ್ಯಾ ರಾಣಿ ಈ ಹಿಂದೆ 203 ಕೆ.ಜಿ ಲಿಫ್ಟ್ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಅದಕ್ಕೆ ಹೋಲಿಸಿದರೆ ಇದು ಕೊಂಚ ಕಡಿಮೆ. ಇನ್ನು ಪ್ರಥಮ ಸ್ಥಾನ ಪಡೆಯಲು 38 ಕೆ.ಜಿ ಕಡಿಮೆಯಾಗಿದೆ. ಪ್ರಥಮ ಸ್ಥಾನದಲ್ಲಿ ಚಿನ್ನದ ಪದಕವನ್ನು ಗೆದ್ದು ಗೆಲುವಿನ ನಗೆ ಬೀರಿದ ಉತ್ತರ ಕೊರಿಯಾದ (North Koria) ಕ್ಯಾಂಗ್ ಹ್ಯೋನ್ ಗ್ಯೊಂಗ್ 234 ಕೆಜಿ (103 ಕೆಜಿ + 131 ಕೆಜಿ) ವೇಟ್ ಲಿಫ್ಟಿಂಗ್ ಮಾಡಿ ಪ್ಯಾರಿಸ್ ಅಲ್ಲಿ ನಡೆಯುವ ಒಲಂಪಿಕ್ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ರೊಮೇನಿಯಾದ ಕ್ಯಾಂಬೆ ಮಿಹೇಲಾ-ವ್ಯಾಲೆಂಟಿನಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 201 ಕೆಜಿ (91 ಕೆಜಿ + 110 ಕೆಜಿ) ಬೆಳ್ಳಿ ಪಡೆದರು. ಇನ್ನು ಅಂತಿಮ ಒಲಂಪಿಕ್ ಅರ್ಹತಾ ಸ್ಪರ್ಧೆಯಲ್ಲಿ ಪದಕ ವಿಜೇತ ಪ್ರದರ್ಶನದ ಹೊರತಾಗಿಯೂ, ಬಿಂದ್ಯಾರಾಣಿ ಪ್ಯಾರಿಸ್ ಕ್ರೀಡಾಕೂಟಕ್ಕೆ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಈ ವಿಭಾಗದಲ್ಲಿ 2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Championship) ಸ್ಪರ್ಧಿಸಿ 25 ನೇ ಸ್ಥಾನ ಪಡೆದಿದ್ದರು ಆದರೆ ಪ್ರಸ್ತುತ 59 ಕೆಜಿ ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ (OQR) 29 ನೇ ಸ್ಥಾನದಲ್ಲಿದ್ದಾರೆ ಮತ್ತು ಪ್ಯಾರಿಸ್ ಅಲ್ಲಿ ನಡೆಯುವ ಒಲಂಪಿಕ್ ಪಂದ್ಯದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

Exit mobile version