ಸದ್ಯ ಲೋಕಸಭಾ ಚುನಾವಣೆ ನಡೆದರೆ NDAಗೆ 362 ಸ್ಥಾನ ಖಚಿತ!

BJP

ನವದೆಹಲಿ : ಸದ್ಯ ಲೋಕಸಭಾ ಚುನಾವಣೆ(BJP All set for loksabha election ) ನಡೆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ.

362 ಸ್ಥಾನಗಳು ಲಭಿಸುವ ಸಾಧ್ಯತೆ ಇದ್ದು, ಮೋದಿ(Narendra Modi) ನೇತೃತ್ವದಲ್ಲಿ ಬಿಜೆಪಿ ದೇಶದ ಬಹುತೇಕ ರಾಜ್ಯಗಳಲ್ಲಿ ಬಲಿಷ್ಠ ಸಂಘಟನೆಯನ್ನು ಹೊಂದಿದೆ ಎಂದು ಸಮೀಕ್ಷಾ(Survey) ವರದಿಯೊಂದು ತಿಳಿಸಿದೆ.

ಮೋದಿ ನೇತೃತ್ವದಲ್ಲಿ ಬಿಜೆಪಿ (BJP All set for loksabha election)ಬಲಿಷ್ಠ ಸಂಘಟನೆ ಜೊತೆಗೆ ಚುನಾವಣೆ ಎದುರಿಸಲು ಬೇಕಾದ ಅಗತ್ಯ ಸಂಪನ್ಮೂಲ ಮತ್ತು ರಾಜಕೀಯ ತಂತ್ರಗಾರಿಕೆಗಳನ್ನು ಈಗಿನಿಂದಲೇ ಸಿದ್ದಪಡಿಸಿಕೊಳ್ಳುತ್ತಿದೆ.

ಹೀಗಾಗಿ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಬಿಜೆಪಿ ಅದರ ಲಾಭ ಪಡೆದುಕೊಳ್ಳಲಿದೆ. ತಕ್ಷಣ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 362 ಸ್ಥಾನ, ಕಾಂಗ್ರೆಸ್‌ ನೇತೃತ್ವದ ಯುಪಿಎ(UPA) ಮೈತ್ರಿಕೂಟ 97, ಇತರೆ ಪ್ರಾದೇಶಿಕ ಪಕ್ಷಗಳು 84 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. https://vijayatimes.com/cinema-fans-cheer-for-internet-star/

ಇನ್ನು ಕರ್ನಾಟಕದ ಒಟ್ಟು ೨೮ ಲೋಕಸಭಾ ಕ್ಷೇತ್ರಗಳಲ್ಲಿ(Loksabha Constituency) ಬಿಜೆಪಿ 23, ಕಾಂಗ್ರೆಸ್(Congress) 4 ಹಾಗೂ ಜೆಡಿಎಸ್(JDS) 1 ಸ್ಥಾನ ಗೆಲ್ಲಲಿದೆ ಎಂದು ಇಂಡಿಯಾ ಟಿವಿ ನಡೆಸಿರುವ ವರದಿಯಲ್ಲಿ ಬಹಿರಂಗವಾಗಿದೆ.

ಕಳೆದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರರು 1 ಸ್ಥಾನ ಗೆದ್ದುಕೊಂಡಿದ್ದರು. ಇನ್ನು ಜು.11 ರಿಂದ 24ರ ನಡುವೆ ದೇಶದ 543 ಲೋಕಾಸಭಾ ಸ್ಥಾನಗಳ ಪೈಕಿ 113 ರಲ್ಲಿ 35,000 ಜನರನ್ನು ಸಂದರ್ಶಿಸಿ ಇಂಡಿಯಾ ಟಿವಿ ನಡೆಸಿದ ‘ವಾಯ್ಸ್ ಆಫ್ ದ ನೇಷನ್’ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ.

ಇನ್ನು ಉತ್ತರ ಪ್ರದೇಶ(Uttarpradesh) ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ ಎನ್ಡಿಎ 76, ಯುಪಿಎ 4, ಪಶ್ಚಿಮ ಬಂಗಾಳ ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ, ಟಿಎಂಸಿ 26, ಎನ್ಡಿಎ 14, ಯುಪಿಎ 2.

ತಮಿಳುನಾಡು ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ, ಡಿಎಂಕೆ ಮೈತ್ರಿಕೂಟ 38, ಎನ್ಡಿಎ 1. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳ ಪೈಕಿ, ಎನ್ಡಿಎ 37, ವಿಪಕ್ಷಗಳು 11. ಗುಜರಾತ್ ಒಟ್ಟು 26 ಲೋಕಸಭಾ ಕ್ಷೇತ್ರಗಳ ಪೈಕಿ, ಎನ್ಡಿಎ 26, ಯುಪಿಎ 0 ಗೆಲ್ಲಲಿದೆ ಎಂದು ವರದಿ ತಿಳಿಸಿದೆ.
Exit mobile version