ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಮುದ್ರೆ ಒತ್ತಲಾಗಿದೆ : ಸಿದ್ದರಾಮಯ್ಯ!

BJP

ಪ್ರಧಾನಿ(PrimeMinister) ನರೇಂದ್ರ ಮೋದಿಯ(Narendra Modi) ಕೇಂದ್ರ ಸರ್ಕಾರ(Central Government) ರಾಜ್ಯ ಸರ್ಕಾರಕ್ಕೆ 40% ಕಮಿಷನ್(Commission) ಮುದ್ರೆ ಒತ್ತಿದ್ದಾರೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddaramaiah) ಸುದ್ದಿಗಾರರೊಂದಿಗೆ ಮಾತನಾಡಿದಾಗ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Government) ಆಡಳಿತಕ್ಕೆ ಬಂದ ಬಳಿಕ ಈ ಕಮಿಷನ್ ವ್ಯವಹಾರ ಬಲು ಜೋರಾಗಿ ನಡೆಯುತ್ತಲೇ ಇವೆ. ನನ್ನನ್ನು ಹಲವು ಬಾರಿ ಭ್ರಷ್ಟ, ಲಂಚ ಹಗರಣಗಳಲ್ಲಿ ಸಿಲುಕಿಸಲು ಪ್ರಯತ್ನ ಮಾಡಿದೆ ಬಿಜೆಪಿ ಸರ್ಕಾರ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ 10% ಕಮಿಷನ್ ಎಂದು ಆರೋಪಿಸಿದರು. ಆದ್ರೆ, ಇವಾಗ ಇವರೇನು ಮಾಡ್ತಿದ್ದಾರೆ? ನಮ್ಮದು ಹತ್ತು ಎಂದು ಹೇಳಿದ್ರು, ಆದ್ರೆ ಇವರು ನಲವತ್ತು ಪರ್ಸಂಟೆಜ್ ಕಮಿಷನ್ ಸರ್ಕಾರ ನಡೆಸುತ್ತಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಮೂಲಕ ಇವರ 40% ಕಮಿಷನ್ ಸರ್ಕಾರ ಹೊರಬಂದ ಬಳಿಕ ಅದರ ಬೆನ್ನಲ್ಲೇ ಈಗ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮವೂ ಹೊರಬಿದ್ದಿದೆ.

ಈ ಮೂಲಕ ಬಿಜೆಪಿ ಸರ್ಕಾರದ ಸಚಿವರು ಇಂಥ ಹಗರಣಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ 40% ಕಮಿಷನ್ ಪರವಾನಗಿ ಕೊಟ್ಟಿದ್ದಾರಾ? ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಮುದ್ರೆ ಒತ್ತಲಾಗಿದೆ ಎಂದು ಬಿಜೆಪಿ ಸರ್ಕಾರ ಮತ್ತು ಮೋದಿಯವರ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Exit mobile version