ಶೇ. 30% ಕಮಿಷನ್ : ಸರ್ಕಾರದ ಪರ ನಿಂತ ದಲಿತ ಪಠಾಧೀಶರು!

bjp

ದಲಿತ ಸಮುದಾಯ ಮತ್ತು ಹಿಂದುಳಿದ ಸಮುದಾಯಗಳ ಶೈಕ್ಷಣಿಕ ಅಭಿವೃದ್ದಿಗೆ ಬಿಜೆಪಿ ಸರ್ಕಾರ(BJP Government) ಸಾಕಷ್ಟು ಅನುದಾನ ನೀಡಿದೆ.

ಸರ್ಕಾರದ ಈ ಕ್ರಮವನ್ನು ಸಹಿಸದ ಕೆಲವು ಮನಸ್ಸುಗಳು ಸರ್ಕಾರದ ವಿರುದ್ದ ಕಮಿಷನ್(Commission) ಆರೋಪ ಮಾಡುವ ಮೂಲಕ ಸರ್ಕಾರದ ವರ್ಚಸ್ಸನ್ನು ಹಾಳು ಮಾಡುವ ಹುನ್ನಾರ ಮಾಡಿವೆ ಎಂದು ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟ ಹೇಳಿದೆ. ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಸಭೆ ನಡೆಸಿ ಮಾತನಾಡಿದ ಒಕ್ಕೂಟದ ಸ್ವಾಮಿಜಿಗಳು, ಕಮಿಷನ್ ಕೊಟ್ಟು ಅನುದಾನ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಅಂತ ಪರಿಸ್ಥಿತಿ ಬಂದರೆ ಸರ್ಕಾರದ ಅನುದಾನ ಪಡೆಯದೆ, ಭಿಕ್ಷೆ ಬೇಡಿ ಮಠಗಳನ್ನು ಕಟ್ಟುತ್ತೇವೆ.

ಬಿ.ಎಸ್ ಯಡಿಯೂರಪ್ಪನವರ(BS Yedurappa) ಅವಧಿಯಿಂದ ಇಲ್ಲಿಯವರೆಗೂ ಮಠಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ಈವರೆಗೂ ಯಾವುದೇ ರಾಜಕಾರಣಿ ಅಥವಾ ಅಧಿಕಾರಿ ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಕಮಿಷನ್ ಅಥವಾ ಲಂಚ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ದಿಂಗಾಲೇಶ್ವರ ಸಾಮೀಜಿಗಳು ಸರ್ಕಾರದ ವಿರುದ್ದ ಮಾಡಿರುವ ಶೇ 30 ಕಮಿಷನ್ ಆರೋಪ ಸತ್ಯಕ್ಕೆ ದೂರವಾದದು. ಹೀಗಾಗಿ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕಮಿಷನ್ ಆರೋಪಕ್ಕೆ ತಾತ್ವಿಕ ಅಂತ್ಯಹಾಡಲು ಒಕ್ಕೂಟ ನಿರ್ಧರಿಸಿ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ದ ಕೇಳಿ ಬರುತ್ತಿರುವ ಕಮಿಷನ್ ಆರೋಪ ಸತ್ಯಕ್ಕೆ ದೂರವಾದದು ಎಂದರು. ಸಭೆಯಲ್ಲಿ ಭೋಮಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,

ತೀರ್ಥಹಳ್ಳಿ ನಾರಾಯಣ ಮಠದ ಆರ್ಯರೇಣುಕಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ , ಬಸವ ಗುಂಡಯ್ಯ ಸ್ವಾಮೀಜಿ ಸೇರಿದಂತೆ ರಾಜ್ಯದ ಅನೇಕ ದಲಿತ ಮತ್ತು ಹಿಂದುಳಿದ ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Exit mobile version