ಭ್ರಷ್ಟಾಚಾರದ ಬಗ್ಗೆ ಬೊಗಳೆ ಭಾಷಣ ಬಿಡುತ್ತಿರುವ ರಾಹುಲ್‌ ಗಾಂಧಿ ಅವರೇ, 1985ರಲ್ಲಿ ನಿಮ್ಮ ಪಿತಾಶ್ರಿ ರಾಜೀವ್ ಗಾಂಧಿ ಹೇಳಿದ್ದು ನೆನಪಿಲ್ಲವೇ? : ಬಿಜೆಪಿ

Rajeev Gandhi

Bengaluru : ಭ್ರಷ್ಟಾಚಾರದ(Corruption) ಬಗ್ಗೆ ಬೊಗಳೆ ಭಾಷಣ ಬಿಡುತ್ತಿರುವ ರಾಹುಲ್‌ ಗಾಂಧಿ (Rahul Gandhi) ಅವರೇ, 1985 ರಲ್ಲಿ ನಿಮ್ಮ ಪಿತಾಶ್ರಿ ರಾಜೀವ್ ಗಾಂಧಿ (Rajeev Gandhi) ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ (Congress Government) 1 ರೂಪಾಯಿಯಲ್ಲಿ 15 ಪೈಸೆ ಮಾತ್ರ ವೆಲ್ಫೇರ್ ಸ್ಕೀಮ್ಗೆ(Welfare Scheme) ಹೋಗುತ್ತದೆ ಎಂದು ಹೇಳಿದ್ದು ನೆನಪಿಲ್ಲವೇ?

ಉಳಿದದ್ದು ನಕಲಿ ಗಾಂಧಿ ಕುಟುಂಬದ ಜೋಳಿಗೆ ತುಂಬುತ್ತಿತ್ತೇ? ಪ್ರಧಾನಿ ಮೋದಿ ಸರ್ಕಾರ ರೈತರಿಗೆ ನೀಡುತ್ತಿರುವ ಹಣ ನೇರವಾಗಿ ರೈತರ(Farmer) ಖಾತೆಯನ್ನು ತಲುಪುತ್ತಿದೆ.

ಆದರೆ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ರೈತರಿಗೆ ಸಿಗಬೇಕಾದ ಹಣ ಕೈ ನಾಯಕರ ಖಾತೆಗೆ(BJP Reminds Rajeev Gandhi statement) ಬೀಳುತ್ತಿತ್ತು ಎಂಬುದನ್ನು ಸ್ವತಃ ರಾಜೀವ್ ಅವರೇ ಬಹಿರಂಗಪಡಿಸಿದ್ದರು ಎಂದು ಬಿಜೆಪಿ(BJP) ಟೀಕಿಸಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ, ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಅಭಿವೃದ್ದಿ ವೇಗವನ್ನು ತಡೆಯಲಾಗದೆ

ಪಕ್ಷದ ಜೀವ ಉಳಿಸಲು ನಕಲಿ ಗಾಂಧಿ ಕುಟುಂಬವೇ ಕರ್ನಾಟಕಕ್ಕೆ ವಲಸೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿಯೇ ಕೊನೆಯ ಮೊಳೆ ಬೀಳಲಿದೆ.

https://youtu.be/LUwd2_Vt7Ks ನಿಮ್ಮ ಪ್ರಕಾರ ನಮ್ಮ ರಾಜ್ಯದ `ಉತ್ತಮ ರಾಜಕಾರಣಿ’ ಯಾರು?

ಅಸ್ತಿತ್ವಕ್ಕಾಗಿ ಪರದಾಡುತ್ತಿರುವವರ ನಾಟಕ ತಿಳಿದುಕೊಳ್ಳದಷ್ಟು ಜನರು ದಡ್ಡರಲ್ಲ. ರಾಹುಲ್ ಗಾಂಧಿ (BJP Reminds Rajeev Gandhi statement) ಅವರೇ, ರಾಜೀವ್ ಗಾಂಧಿ ಅವರೇ 85% ಲಂಚ ಪಡೆದಿದ್ದನ್ನು ಒಪ್ಪಿಕೊಂಡಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಕುಟುಂಬ,

ನಿಮ್ಮ ಮನೆ ಕಾಯುವ ಜಿ ಹುಜೂರು ಗಿರಾಕಿಗಳು 3 ತಲೆಮಾರಿಗಾಗುವಷ್ಟು ಮಾಡಿಟ್ಟುಕೊಂಡಿದ್ದನ್ನು ನಿಮ್ಮ ಪಕ್ಷದ ರಮೇಶ್ ಕುಮಾರ್ ಹೇಳಿದ್ದರು, ಕೇಳಿಸಿಕೊಂಡಿಲ್ಲವೇ? ಎಂದು ಪ್ರಶ್ನಿಸಿದೆ.

`ಕೈ ಕೆಸರಾದರೆ ಬಾಯಿ ಮೊಸರು’ ಎನ್ನುವ ಗಾದೆಯನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿದ್ದು ಕಾಂಗ್ರೆಸ್ ನಾಯಕರು ಮಾತ್ರ. ಭ್ರಷ್ಟಾಚಾರ ಎನ್ನುವ ಕೆಸರಿನಲ್ಲೇ ಕಾಂಗ್ರೆಸ್ ನಾಯಕರು(Congress Leaders) ಬೆಳೆದಿದ್ದಾರೆ. ಕಾಂಗ್ರೆಸ್ ನಾಯಕರು ಕೈ ಎತ್ತಿದರೆ ಕಾಣುವುದು ಭ್ರಷ್ಟಾಚಾರದಿಂದ ಕೊಳೆಯಾಗಿರುವ ಕೈಗಳು ಮಾತ್ರ.

ಇದನ್ನೂ ಓದಿ : https://vijayatimes.com/rss-general-secretary-statement/

ಮೊಸಳೆ ಹಾಕುವ ಕಣ್ಣೀರನ್ನಾದರೂ ಒಮ್ಮೆ ನಂಬಬಹುದು ಆದರೆ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ ಎಂದರೆ ನಂಬಲು ಹೇಗೆ ಸಾಧ್ಯ? ತನ್ನ ಮೇಲೆ ಇರುವ ಭ್ರಷ್ಟಾಚಾರದ ಮೂಟೆಯ ಭಾರವನ್ನು ಇನ್ಯಾರದ್ದೊ ಹೆಗಲಿಗೆ ಹೊರಿಸಲು ಕಾಂಗ್ರೆಸ್ ಹೊಂಚುಹಾಕುತ್ತಿದೆ.

ಮುಳುಗುವ ಹಡಗಿಗೆ ಯಾರು ನಾಯಕ ಆದರೇನು ರಾಹುಲ್‌ ಗಾಂಧಿ ಅವರೇ? ಅಮ್ಮ ಬಂದರೂ ಅಷ್ಟೇ, ತಂಗಿ ಬಂದರೂ ಅಷ್ಟೆ. ಮಾನ್ಯ ರಾಹುಲ್‌ ಗಾಂಧಿ ಅವರೇ,

ಕಾಂಗ್ರೆಸ್ ಸರ್ಕಾರ 1 ರೂಪಾಯಿ ಜನರಿಗೆ ಕೊಟ್ಟರೆ, ಅದರಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ನಿಮ್ಮ ತಂದೆ ರಾಜೀವ್ ಗಾಂಧಿ ಹೇಳಿದ್ದು ಮರೆತು ಹೋಯಿತೇ? ಎಂದು ಪ್ರಶ್ನಿಸಿದೆ.

Exit mobile version