Bangalore : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Assembly election) ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ (Congress) -ಬಿಜೆಪಿ (BJP) ನಡುವೆ ತೀವ್ರ ಹೋರಾಟ ಏರ್ಪಟ್ಟಿದ್ದರೆ, ಹಳೇ ಮೈಸೂರು (BJP strategy in Mysore) ಭಾಗದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ ನಡೆಸುತ್ತಿದೆ.
ಈ ಮಧ್ಯೆ ಹಳೇ ಮೈಸೂರು ಕ್ಷೇತ್ರಗಳ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಈ ಬಾರಿ ಹೊಸ ರಣತಂತ್ರಗಳೊಂದಿಗೆ ಈ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವುದು ಕಾಂಗ್ರೆಸ್-ಜೆಡಿಎಸ್‌ಪಕ್ಷಗಳಿಗೆ ಆತಂಕ ಉಂಟು ಮಾಡಿದೆ.
ಮೂಲಗಳ ಪ್ರಕಾರ, ಹಳೇ ಮೈಸೂರು (Mysore) ಭಾಗದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸಕ್ರಿಯವಾಗಿದೆ.
ಒಕ್ಕಲಿಗ ಮತಗಳನ್ನು ಸೆಳೆಯಲು ಬಿಜೆಪಿ ಅನೇಕ ರಣತಂತ್ರಗಳನ್ನು ರೂಪಿಸುತ್ತಿದೆ. ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಪ್ರಯೋಗಿಸುತ್ತಿರುವ ತಂತ್ರಗಳೆಂದರೆ,
ಇದನ್ನೂ ಓದಿ : https://vijayatimes.com/manifesto-released-app/
- ಒಕ್ಕಲಿಗ ಸಮುದಾಯವನ್ನೇ (Okkaliga community) ಕೇಂದ್ರೀಕರಿಸಿಕೊಂಡು ಬಿಜೆಪಿ ನಾಯಕರು ಸಭೆಗಳನ್ನು ನಡೆಸುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಬೆಂಬಲ ಪಡೆಯಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಇನ್ನೊಂದೆಡೆ ಸುಮಲತಾ ಅಂಬರೀಶ್ ಮೂಲಕ ಮಂಡ್ಯದಲ್ಲಿ ಹೊಸ ಕಾರ್ಯಕರ್ತರ ಪಡೆ ಕಟ್ಟಲು ಸಿದ್ದತೆ ನಡೆಸಿದೆ.
- ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಮಂಡ್ಯ (Mandya) ಸೇರಿದಂತೆ ಹಳೇ ಮೈಸೂರು ಭಾಗದ ಅನೇಕ ಕ್ಷೇತ್ರಗಳಲ್ಲಿ ಒಕ್ಕಲಿಗ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ಯುವಕರಿಗೆ ಉನ್ನತ ಸ್ಥಾನಗಳನ್ನು, ಜವಾಬ್ದಾರಿಗಳನ್ನು ನೀಡಲಾಗುತ್ತಿದೆ.
- ಜೆಡಿಎಸ್ ಮತ್ತು ಕಾಂಗ್ರೆಸ್‌ಪಕ್ಷದಿಂದ ದೂರವಾಗಿರುವ ಮತ್ತು ಅಸಮಾಧಾನಗೊಂಡಿರುವ ಮುಖಂಡರನ್ನು ಬಿಜೆಪಿಗೆ ಕರೆತಂದು ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಭೆಗಳನ್ನು ನಡೆಸಿ, ಪ್ರತಿ ಗ್ರಾಮದಲ್ಲಿಯೂ ಬಿಜೆಪಿಯನ್ನು ಕಟ್ಟಲು ಸಿದ್ದತೆ ನಡೆಸಲಾಗುತ್ತಿದೆ.
- ಸುಮಲತಾ ಅಂಬರೀಶ್‌ಗೆ (Sumalta Ambarish) ಮಂಡ್ಯ ಜಿಲ್ಲೆಯ ಹೊಣೆಗಾರಿಕೆ ನೀಡುವ ಮೂಲಕ ಮಂಡ್ಯದಲ್ಲಿ ಪ್ರಬಲ ನಾಯಕತ್ವ ರೂಪಿಸಿ, ಮುಂದಿನ ದಿನಗಳಲ್ಲಿ ಸುಮಲತಾ ಮೂಲಕವೇ ಚುನಾವಣೆ ಎದುರಿಸಲು ತಂತ್ರ ರೂಪಿಸಲಾಗಿದೆ.
- ಮಂಡ್ಯ ಜಿಲ್ಲೆಯೊಂದಿಗೆ ಸುಮಲತಾ ಅಂಬರೀಶ್ ಉತ್ತಮ ಒಡನಾಟದೊಂದಿದ್ದು, ಅದನ್ನೇ ಬಳಸಿಕೊಂಡು ಕಾರ್ಯತಂತ್ರ ರೂಪಿಸಲಾಗುತ್ತಿದೆ.
- ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಕಟ್ಟಬೇಕಾದರೆ, ಪ್ರಬಲ ಯುವಕರ ಪಡೆಯನ್ನು ಕಟ್ಟಬೇಕೆಂದು ನಿರ್ಧರಿಸಿರುವ ಬಿಜೆಪಿ, ಪ್ರತಿ ಗ್ರಾಮದಲ್ಲಿಯೂ ಯುವಕರನ್ನು ಸೆಳೆಯಲು ರಣತಂತ್ರ ರೂಪಿಸಲಾಗುತ್ತಿದೆ. ಪ್ರಧಾನಿ ಮೋದಿ (Prime Minister Modi) ಸಮಾವೇಶದ ನಂತರ ಮಂಡ್ಯದ ಅನೇಕ ಕ್ಷೇತ್ರಗಳಲ್ಲಿ ಯುವಕರು ಬಿಜೆಪಿಯತ್ತ ಹೆಚ್ಚಿನ ಒಲವು ತೋರುತ್ತಿರುವುದು ಕಂಡು ಬಂದಿದೆ.