‘ಎಡಿಟಿಂಗ್ ಮಾಸ್ಟರ್’ ಎಂದು ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡಿದ ಬಿಜೆಪಿ

Bengaluru : ಮುಖ್ಯಮಂತ್ರಿ ಸಿದ್ದರಾಮಯ್ಯ #Siddaramaiah ಅವರಿಗೆ ಬಿಜೆಪಿ ವ್ಯಂಗ್ಯವಾಡಿದ್ದು, ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು, ಇದೆಲ್ಲವೂ ಚೆನ್ನಾಗಿಯೇ ಸಿದ್ದಿಸಿದೆ ಎಂದು ವಾಗ್ದಾಳಿ ನಡೆಸಿದೆ.

ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸಂದೇಶ ಪ್ರಕಟಿಸಿರುವ ರಾಜ್ಯ ಬಿಜೆಪಿ (BJP), ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಸಿಎಂ ಯೋಚಿಸಿದ್ದರೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ, ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿರಲಿಲ್ಲ ಎಂದು ಉಲ್ಲೇಖಿಸಿದೆ. ಜತೆಗೆ ಎಡಿಟಿಂಗ್ ಮಾಸ್ಟರ್ (Editing Master) ಎಂದು ಸಿದ್ದರಾಮಯ್ಯ ಅವರನ್ನು ಕುಹಕವಾಡಿದೆ.

ಎಲ್ಲೆಂದರಲ್ಲಿ ನಿದ್ದೆಗೆ ಜಾರುವುದು ನೀವೇ (ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ) ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಯವರನ್ನು ಅವಹೇಳನ ಮಾಡಿದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ. ಸರ್ಕಾರವನ್ನು ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆ ಬಗೆಹರಿಸಿ‌ ಎಂದು ಬಿಜೆಪಿ ಹೇಳಿದೆ.

ಮುಂದುವರಿದು, ಮಜವಾದಿ ಸಿದ್ದರಾಮಯ್ಯ ಅವರು ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಒಂದಿಷ್ಟು ವಿಚಾರಗಳನ್ನು ಪಟ್ಟಿ ಮಾಡಿದೆ. ರೈತರಿಗೆ ಕೊಡುವ ಪರಿಹಾರ, ಕರ್ನಾಟಕಕ್ಕೆ ಕಾವೇರಿ ನೀರು (Kaveri Water), ಮಹಿಳೆಯರಿಗೆ ಕೊಡಬೇಕಾದ ರಕ್ಷಣೆ, ಹಿಂದೂ ದೇವಾಲಯಗಳಿಗೆ ಅನುದಾನ, ಈಡೇರಿಸಲಾಗದ ಗ್ಯಾರಂಟಿಗಳು ಇವು ಸಿದ್ದರಾಮಯ್ಯ ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಟೀಕಿಸಿದೆ.

ಮೌಲ್ವಿಗಳಿಗೆ 10 ಸಾವಿರ ಕೋಟಿ ರೂಪಾಯಿ ಕೊಡಬೇಕು, ಮತಾಂಧ ಜಿಹಾದಿಗಳನ್ನು ರಕ್ಷಣೆ ಮಾಡಬೇಕು, ಪಿಎಫ್ಐ (PFI) ಗೂಂಡಾಗಳನ್ನು ಅಮಾಯಕರೆಂದು ಬಿಡಬೇಕು, ಶಾಲೆಗಳಲ್ಲಿ ಹಿಜಾಬ್ ಹಾಕಿಕೊಂಡು ಹೋಗಬಹುದು, ಗ್ಯಾಂಗ್ ರೇಪ್ (Gang Rape) ಮಾಡಿದವರನ್ನು ಹೊರ ಬಿಡಬೇಕು ಎಂಬುದು ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಲೇವಡಿ ಮಾಡಿದೆ. ಜತೆಗೆ, ಇದೇ ಮಜವಾದಿಯ ತುಘಲಕ್ ದರ್ಬಾರ್ ಎಂದು ಬಿಜೆಪಿ ಟೀಕಿಸಿದೆ.

Exit mobile version