2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

Kannada

1934 ರಲ್ಲಿ ಶುರು ಆದ ಕನ್ನಡ ಚಿತ್ರರಂಗದ(Kannada Industry) ಪಯಣ ಸದ್ಯ ಇಂದಿನ ಯುಗದವರೆಗೂ ಯಶಸ್ವಿಯಾಗಿ ಮುಂದುವರೆದು ಬಂದಿದೆ. 88 ವರ್ಷಗಳಲ್ಲಿ ಎಷ್ಟೋ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು ಈ ಸಿನಿಮಾಗಳ ಮೂಲಕ ಹುಟ್ಟಿಕೊಂಡಿದ್ದಾರೆ. ಇಷ್ಟು ವರ್ಷದ ಪಯಣದಲ್ಲಿ ಎಷ್ಟೋ ಮರೆಯಲಾಗದ ಘಟನೆಗಳು ನಡೆದಿದೆ.

ಇಂದು ಕನ್ನಡ ಚಿತ್ರರಂಗ ಭಾರತದ ನಾಲ್ಕನೇ ಅತಿ ದೊಡ್ಡ ಚಿತ್ರರಂಗವಾಗಿದೆ. ಕನ್ನಡ ಚಿತ್ರರಂಗದ ಇತಿಹಾಸ(History) ಪುಟವನ್ನೊಮ್ಮೆ ತಿರುವುದಾದರೆ ಅದೆಷ್ಟೋ ಮೈಲಿಗಲ್ಲುಗಳು ಕಾಣಸಿಗುತ್ತವೆ. ಹೌದು, ಚಿತ್ರರಂಗದ ಸಮಗ್ರ ಬೆಳವಣಿಗೆಯನ್ನು ಒಮ್ಮೆಲೇ ನೋಡುವುದಕ್ಕಿಂತ, ಹತ್ತು ವರ್ಷಗಳ ವಿಭಾಗವನ್ನಾಗಿ ಮಾಡಿಕೊಂಡು, ಕನ್ನಡ ಸಿನಿಮಾಗಳನ್ನು ಪ್ರತ್ಯೇಕವಾಗಿ ಗಮನಿಸಿದರೆ ಒಟ್ಟು ಬೆಳವಣಿಗೆ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ.

ನಾವೀಗ 2000- 2010 ರೊಳಗಿನ ಸಿನಿಮಾಗಳ ಬಗ್ಗೆ ನೋಡುವುದಾದರೆ, ಮೊದಲ ಐದು ವರ್ಷಗಳಲ್ಲಿ ರಿಮೇಕ್ ಸಿನಿಮಾಗಳ ಆರ್ಭಟ. 2006 ರಲ್ಲಿ ಮುಂಗಾರು ಮಳೆಯ(Mungaru Male) ಯಶಸ್ಸು ಕನ್ನಡದ್ದೇ ಆದ ಸಿನಿಮಾಗಳೂ ಗೆಲ್ಲುತ್ತವೆ ಎನ್ನುವ ಆತ್ಮವಿಶ್ವಾಸವನ್ನು ತುಂಬಿತು. ರಿಮೇಕ್‌ಗಳ ಆರ್ಭಟ ಹಾಗೇ ಇದ್ದರೂ, ಇದರ ನಡುವೆಯೇ ದುನಿಯಾ(Duniya), ಮಿಲನ(Milana), ಆ ದಿನಗಳು, ಸಿಕ್ಸರ್ ಸಿನಿಮಾಗಳು ಯಶಸ್ವಿ ಆದವು.

ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾ ಹೊಸ ಪ್ರಯತ್ನವಾಗಿ ಚರ್ಚೆಯಾಯಿತು. ಇದರ ಜತೆಗೆ ಚೆಲುವಿನ ಚಿತ್ತಾರ(Cheluvina Chittara) ದಂತಹ ರಿಮೇಕ್ ಕೂಡ ಭರ್ಜರಿ ಹಿಟ್ ಆಯಿತು. ವಿಶೇಷ ಎಂದರೆ ‘ಸತ್ಯ ಹರಿಶ್ಚಂದ್ರ’, ‘ಕಸ್ತೂರಿ ನಿವಾಸ’ ಸಿನಿಮಾಗಳು ಎರಡನೇ ಬಾರಿ ತೆರೆಕಂಡು ಮೊದಲ ಬಾರಿಗಿಂತ 4 ಪಟ್ಟು ಹೆಚ್ಚಿನ ಹಣ ಗಳಿಸಿದ್ದು ಗಮನಿಸಬೇಕಾದ ಪ್ರಮುಖ ಅಂಶ. 2010 ರಲ್ಲಿ ನಾಯನ ನಟನಾಗಿ ಯಶ್(Yash) ಪರಿಚಯ ಕೂಡ ಒಂದು ವಿಶೇಷವಾದ ಬೆಳವಣಿಗೆಯಾಗಿತ್ತು.

ಹಾಗಾದರೆ ಚಿತ್ರರಂಗದ ಪಾಲಿಗೆ ಸುವರ್ಣ ಯುಗವೆನಿಸಿದ್ದ 2000-2010ರ ಸಾಲಿನ ಟಾಪ್ 12 ಚಿತ್ರಗಳು ಯಾವುವು ಎನ್ನುವುದನ್ನು ನೋಡೋಣ.


ಯಜಮಾನ : 2000ರ ಡಿಸೆಂಬರ್ 1ರಂದು ‘ಯಜಮಾನ’(Yajamana) ಸಿನಿಮಾ(Cinema) ರಾಜ್ಯಾದ್ಯಂತ ತೆರೆಕಂಡಿತ್ತು. ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು. ಸಿನಿಮಾಕ್ಕೆ 22 ವರ್ಷ ತುಂಬಿದ್ದರೂ, ಆ ಸಿನಿಮಾದ ಹಾಡುಗಳು, ದೃಶ್ಯಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.


ಶಬ್ದವೇದಿ : 2000ನೇ ಇಸವಿಯಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ, ಇದು ರಾಜ್ ಕುಮಾರ್ ರವರ ಕೊನೆಯ ಚಲನಚಿತ್ರವಾಗಿತ್ತು. ಇದರ ನಿರ್ದೇಶಕ ಎಸ್. ನಾರಾಯಣ್(S Narayan) ಮತ್ತು ತಾರಾಗಣದಲ್ಲಿ ಜಯಪ್ರದಾ, ಅಶ್ವಥ್, ಸಾಹುಕಾರ್ ಜಾನಕಿ ಮತ್ತು ಉಮಾಶ್ರೀ ಇದ್ದಾರೆ. ಈ ಚಲನಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಹಂಸಲೇಖ ನೀಡಿದ್ದಾರೆ. ಚಲನಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ರಜತಮಹೋತ್ಸವವನ್ನು ಆಚರಿಸಿತು.


ಆಪ್ತಮಿತ್ರ : 2004ರಲ್ಲಿ ತೆರೆಕಂಡ ‘ಆಪ್ತಮಿತ್ರ’(Apthamitra) ಸಿನಿಮಾ ನಟಿ ಸೌಂದರ್ಯ ಪಾಲಿಗೆ ವಿಶೇಷ ಸಿನಿಮಾ. ದುರಾದೃಷ್ಟವಶಾತ್ ಇದೇ ಅವರ ಕೊನೆಯ ಸಿನಿಮಾ ಕೂಡ. 1992 ರಲ್ಲಿ ಕನ್ನಡ ಚಿತ್ರರಂಗದಿಂದಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಸೌಂದರ್ಯ, ಆನಂತರ 2004ರಲ್ಲಿ ತೆರೆಕಂಡ ‘ಆಪ್ತಮಿತ್ರ’ ಮೂಲಕ ಚಿತ್ರ ಬದುಕಿನ ಪಯಣ ಮುಗಿಸಿದರು. ಅಂದಹಾಗೆ, ಡಾ.ವಿಷ್ಣುವರ್ಧನ್ ನಟನೆಯ ‘ಆಪ್ತಮಿತ್ರ’ ಸಿನಿಮಾ ಆ ಕಾಲಕ್ಕೆ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಗಂಗಾ ಮತ್ತು ನಾಗವಲ್ಲಿಯಾಗಿ ಸೌಂದರ್ಯ ನಟನೆ ಎಲ್ಲರ ಗಮನಸೆಳೆದಿತ್ತು.


ರಾಮ ಶ್ಯಾಮ ಭಾಮಾ : 2005 ರಲ್ಲಿ ಬಿಡುಗಡೆಯಾದ ರಾಮ ಶ್ಯಾಮ ಭಾಮಾ ಚಿತ್ರ, ನಟ ರಮೇಶ್ ಅರವಿಂದ್(Ramesh Aravind) ಅವರು ಅನೇಕ ಕನ್ನಡ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ತಮಿಳು ಹಿಟ್ ‘ಸತಿ ಲೀಲಾವತಿ’ ಚಿತ್ರದ ರಿಮೇಕ್ ‘ರಾಮ ಶ್ಯಾಮಾ ಭಾಮಾ’(Rama Shama Bhama) ಚಿತ್ರದಲ್ಲಿ ಈ ನಟ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈಗ ಈ ಚಿತ್ರ ತೆರೆಗೆ ಬಂದು 17 ವರ್ಷಗಳಾಗಿವೆ.


ಮುಂಗಾರು ಮಳೆ : ಒಂದೂವರೆ ದಶಕದ ಹಿಂದೆ ತೆರೆಕಂಡ ‘ಮುಂಗಾರು ಮಳೆ’ ಸಿನಿಮಾ ಮಾಡಿದ ಮ್ಯಾಜಿಕ್‌ ಸಾಮಾನ್ಯದ್ದಲ್ಲ. ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದು ಈ ಚಿತ್ರ. ಹತ್ತಾರು ವಿಶೇಷತೆಗಳನ್ನು ಹೊಂದಿದ್ದ ಈ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು. 2006ರ ಡಿ.29. ಗಣೇಶ್‌ ಅಭಿನಯದ ‘ಮುಂಗಾರು ಮಳೆ’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತು. ಆ ದಿನ ಇಂಥದ್ದೊಂದು ದೊಡ್ಡ ಜಾದೂ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಯೋಗರಾಜ್‌ ಭಟ್‌(Yograj Bhat) ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಆ ಚಿತ್ರ ಸಂಪೂರ್ಣ ಹೊಸತನದಿಂದ ಕೂಡಿತ್ತು. ಹಾಗಾಗಿ ಪ್ರೇಕ್ಷಕರ ಮನಸೋತರು. ನೋಡನೋಡುತ್ತಿದ್ದಂತೆಯೇ ಎಲ್ಲೆಡೆ ಹೌಸ್‌ ಫುಲ್‌ ಬೋರ್ಡ್‌ ಕಾಣಿಸಲು ಆರಂಭವಾಯಿತು. ಸತತ ಒಂದು ವರ್ಷ ಓಡಿ ದಾಖಲೆ ನಿರ್ಮಿಸಿದ್ದ ಸಿನಿಮಾವಿದು.


ಚೆಲುವಿನ ಚಿತ್ತಾರ : ಇಬ್ಬರು ಮುಗ್ಧ ಪ್ರೇಮಿಗಳ ಕಥೆಯನ್ನು ಹೊಂದಿದ್ದ ಆ ಸಿನಿಮಾ ಜನರಿಗೆ ಸಖತ್ ಇಷ್ಟವಾಯಿತು. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಅಮೂಲ್ಯ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಆ ಬಳಿಕ ಅವರು ಹಿಂದೆ ತಿರುಗಿ ನೋಡಲಿಲ್ಲ. ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ, ಯಶಸ್ವಿ ನಟಿಯಾಗಿ ಬೆಳೆದರು. ಅದೇ ರೀತಿ 2007 ರಲ್ಲಿ ಬಿಡುಗಡೆಯಾದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರಗಳಾದ ಅರಸು, ಮಿಲನ, ದುನಿಯಾ ಚಿತ್ರಗಳು ಕೂಡ ಯಶಸ್ಸು ಕಂಡಿದ್ದವು.


2008 ರಲ್ಲಿ ಗಾಳಿಪಟ ಹಾಗೂ ಅರಮನೆ ಮೂಲಕ ಗೋಲ್ಡನ್ ಸ್ಟಾರ್(Golden Star) ಕಮಾಲ್ ಮಾಡಿದರೆ, ವಂಶಿ ಸಿನಿಮಾದಲ್ಲಿನ ಸೆಂಟಿಮೆಂಟ್ ಮೂಲಕ ಪುನೀತ್ ರಾಜಕುಮಾರ್(Puneeth Rajkumar) ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು.

Exit mobile version