ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಸ್ವಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ NIA

Bengaluru: ಕಳೆದ ಶುಕ್ರವಾರ ಬೆಂಗಳೂರಿನ (Bengaluru) ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (NIA) ವರ್ಗಾಯಿಸಲಾಗಿದೆ. ಬಾಂಬ್ ಸ್ಫೋಟ ಘಟನೆ ಸಂಬಂಧ ಎನ್ ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ‌ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು UAPA ಅಡಿ ಬೆಂಗಳೂರಿನ ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆಯನ್ನು ಬೆಂಗಳೂರು ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದರು.ಇದೀಗ ಪ್ರಕರಣದ ಗಂಭೀರತೆಯನ್ನು ಅರಿತು ಎನ್ ಐಎ ಸ್ವಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯ (Rameshwaram Cafe) ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆಗಾಗಿ ಪೊಲೀಸರು ಹರಸಾಹಸ ಪಡ್ತಿದ್ದಾರೆ. ಟೈಮ್ ಟ್ರಾವೆಲ್ ರೀತಿ ಎರಡೂ ಕಡೆ ಹುಡುಕಾಟ ನಡೆಸ್ತಿದ್ರೂ, ಆರೋಪಿಯ ಜಾಡು ಮಾತ್ರ ಸಿಗ್ತಿಲ್ಲ. ಆರೋಪಿ‌ ಪತ್ತೆ ಆಗದಿದ್ರೆ ಪೊಲೀಸರು ರೇಖಾಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ.

ರಾಮೇಶ್ವರ ಕೆಫೆಗೆ ಒಂದು ಕಿಮೀ ಇರುವ ಒಂದು ಸ್ಥಳದಲ್ಲಿ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದಾನೆ. ಆದ್ರೆ, ಗ್ರಾಫೈಟ್ ಇಂಡಿಯಾ ಸರ್ಕಲ್​ನಲ್ಲಿ ರೋಡ್ ಕ್ರಾಸ್ ಮಾಡಿ ಬಂದು ಬಸ್ ಏರಿದ್ದಾನೆ. ಆದ್ರೆ ಅದಕ್ಕಿಂತ ಹಿಂದೆ ಯಾವ ಕಡೆಯಿಂದ ಬಂದ? ಯಾವ ವಾಹನದಲ್ಲಿ ಬಂದ? ಯಾರಾದ್ರು ಡ್ರಾಪ್ ಮಾಡಿದ್ರಾ? ಅನ್ನೊದನ್ನು ಪತ್ತೆ ಮಾಡಲು ಯತ್ನಿಸಲಾಗಿದೆ. ಆದ್ರೆ, ಬಾಂಬ್ (Bomb) ಇಡಲು ಯಾವ ದಾರಿಯಲ್ಲಿ ಬಂದಿದ್ದನೋ ಅದೇ ದಾರಿಯಲ್ಲಿ ವಾಪಾಸ್ ಹೋಗಿಲ್ಲ. ಮುಂದೆ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೊದು ಮಾಹಿತಿ ಲಭ್ಯವಾಗಿಲ್ಲ.

ಎರಡು ಬಾಂಬ್‌ಗಳನ್ನು ಏಕ ಕಾಲಕ್ಕೆ ಒಂದೇ ಸಲ ಸ್ಫೋಟಿಸಲು ಆರೋಪಿಯಿಂದ ಸಂಚು ನಡೆದಿತ್ತು ಎಂಬ ಸಂಗತಿ ಪರಿಶೀಲನೆಯಲ್ಲಿ ಬಯಲಾಗಿದೆ. ಆರೋಪಿ, ಬಾಂಬ್‌ಗೆ ಟೈಮರ್‌ ಜೋಡಣೆ ಮಾಡುವಾಗ 5 ಸೆಕೆಂಡ್‌ ಅಂತರದ ಬಗ್ಗೆ ಗೊತ್ತಿಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. 5 ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾಂಬ್‌ ಸ್ಫೋಟವಾಗಿದ್ದರಿಂದ ತೀವ್ರತೆ ತಗ್ಗಿದೆ. ಒಂದೇ ವೇಳೆ ಎರಡು ಬಾಂಬ್‌ಗಳು ಏಕ ಕಾಲಕ್ಕೆ ಸ್ಫೋಟಗೊಂಡಿದ್ದರೆ ಇಡೀ ಹೋಟೆಲ್‌ ಕಟ್ಟಡ ಕುಸಿದು ಬೀಳುತ್ತಿತ್ತು. ಜತೆಗೆ, ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿತ್ತು ಎಂದು ಎಫ್‌ಎಸ್‌ಎಲ್‌ (FSL) ತಜ್ಞರು ಹೇಳಿದ್ದಾರೆ.

Exit mobile version