ಮತಾಂತರ ನಿಷೇಧ ಕಾಯ್ದೆಗೆ ಸಂಪುಟ ಅಸ್ತು

 ಬೆಂಗಳೂರು ಡಿ 20 : ಬಹು ನಿರೀಕ್ಷಿತ ಮತಾಂತರ ನಿಷೇಧ ಕಾಯ್ದೆಗೆ ಸದನದಲ್ಲಿ ಕೊನೆಗೂ ಅಂಕಿತ ಬಿದ್ದಿದೆ. ಸಾಕಷ್ಟು ಹಿಂದೂಗಳು ನಿರೀಕ್ಷಿಸಿದ್ದ ಕಾಯಿದೆಗೆ ಕೊನೆಗೂ ಅಂಕಿತ ದೊರೆತಿದೆ.  ವಿವಾದಿತ ಮತಾಂತರ ನಿಷೇಧ ಕಾಯ್ದೆಯ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನಾಳೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ. ವಿಧೇಯಕಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಬದಲಾವಣೆಗಳೊಂದಿಗೆ ನಾಳೆ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಇತ್ತೀಚೆಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಂತೆ ಕ್ರೈಸ್ತ ಧರ್ಮಗುರುಗಳ ಒಕ್ಕೂಟವೊಂದು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು.

Exit mobile version