Bengaluru: ಕರ್ನಾಟಕದಲ್ಲಿ (Karnataka) ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿದ್ದು, ಲೋಕಸಭಾ (Bommai against on Congress) ಚುನಾವಣೆಗೆ ಕೆಲವೇ ತಿಂಗಳುಗಳು ಮಾತ್ರ
ಬಾಕಿ ಇರುವ ಬೆನ್ನಲ್ಲೇ ಇದರ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಡುವುದು ಅವಶ್ಯಕತೆ ಇದೆ
ಆದ್ದರಿಂದ ಜೆಡಿಎಸ್ (Bommai against on Congress) ಜೊತೆ ಮೈತ್ರಿ ಅನಿವಾರ್ಯ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ (Bengaluru) ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಎರಡೂ ವಿರೋಧ ಪಕ್ಷಗಳು ಒಂದಾಗಬೇಕು ಎಂಬ ನಿರೀಕ್ಷೆ ಇದ್ದು, ಮುಂದಿನ ಸಾಧಕ
ಬಾಧಕಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ಈ ಬಗ್ಗೆ ಎರಡೂ ಪಕ್ಷದ ವರಿಷ್ಠರು ಸೇರಿ ತೀರ್ಮಾನ ಮಾಡಲಿದ್ದಾರೆ. ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟದ ಅವಶ್ಯಕತೆ ಇದೆ ಹಾಗಾಗಿ ಜೆಡಿಎಸ್
ಜೊತೆ ಮೈತ್ರಿ ಅನಿವಾರ್ಯ ಎಂದು ಬಸವರಾಜ ಬೊಮ್ಮಾಯಿ #BasavarajBommai ಹೇಳಿದ್ದಾರೆ.
ಎರಡೂ ಪಕ್ಷಗಳು ಅಸಹಾಯಕವಾಗಿದ್ದು, ಮೈತ್ರಿ ಮಾಡಿಕೊಳ್ಳುತ್ತಿವೆ ಎಂಬ ಕಾಂಗ್ರೆಸ್ (Congress) ಟೀಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಈಗ ಐಎನ್‌ಡಿಐಎ @INDIA ಮೈತ್ರಿಕೂಟದಲ್ಲಿ ಯಾರೆಲ್ಲಾ
ಒಗ್ಗಟ್ಟಾಗಿದ್ದಾರೆ. ಒಬ್ಬರಿಗೊಬ್ಬರು ಆಗದೆ ಇರುವ ಮಮತಾ ಬ್ಯಾನರ್ಜಿ (Mamatha Banerjee), ಸಿಪಿಐ, ಸಿಪಿಎಂ, ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಎಲ್ಲರೂ ಜೊತೆಯಾಗಿದ್ದು, ಎಲ್ಲ ವಿರೋಧ ಪಕ್ಷಗಳು
ಒಟ್ಟಾಗಿವೆ, ಹಾಗಾದರೆ ಅವು ಅಸಹಾಯಕರಾ? ರಾಜಕಾರಣದ ಇತಿಹಾಸದಲ್ಲಿ ಅನೇಕ ಬದಲಾವಣೆ ಆಗಿದೆ ಎಂದು ಹೇಳಿದರು.

ಎಲ್‌ಕೆ ಅಡ್ವಾಣಿ (L K Advani) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಆಗಿದ್ದರು ಎಂಬ ಚರ್ಚೆ ವಿಚಾರಕ್ಕೆ ಉತ್ತರಿಸಿರುವ ಅವರು ಇದಕ್ಕೆ ಈಗಾಗಲೇ ಸಿದ್ದರಾಮಯ್ಯನವರೇ
(Siddaramaiah) ಉತ್ತರ ನೀಡಿದ್ದು, ನಾಯಕರ ಭೇಟಿ ಮಾಡಿದರೆ ಸಿದ್ಧಾಂತ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಅದರ ಅರ್ಥ ಏನು ಎಂದು ಪ್ರಶ್ನಿಸಿದರು.
ಇದೆ ಸಮಯದಲ್ಲಿ ಇಂದಿನಿಂದ ತಮಿಳುನಾಡಿಗೆ (Tamilnadu) ಕಾವೇರಿ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ (Supreme Court) ಅಫಿಡವಿಟ್ ಸಲ್ಲಿಸಿದ್ದು, ಸರ್ಕಾರ ತನ್ನ
ಮಾತಿಗೆ ಎಷ್ಟು ಗಟ್ಟಿಯಾಗಿ ನಿಲ್ಲುತ್ತದೆ ಎಂದು ನೋಡೊಣ ಎಂದ ಅವರು ಇನ್ನು ಸಚಿವ ಡಿ ಸುಧಾಕರ್ (D Sudhakar) ವಿರುದ್ಧ ಎಫ್‌ಐಆರ್ ಆಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೂಡ ಆಗ್ರಹಿಸಿದರು.
ಇದನ್ನು ಓದಿ : IND Vs PAK: ಕೊಹ್ಲಿ ಹಾಗೂ ರಾಹುಲ್ ಜೊತೆಯಾಟ, 233 ರನ್‌ಗಳಿಸಿ ವಿಶೇಷ ದಾಖಲೆ ಬರೆದ ಜೋಡಿ
- ಭವ್ಯಶ್ರೀ ಆರ್.ಜೆ