ನಮ್ಮ ದೇಹ ಸದೃಡವಾಗಿರಬೇಕಾದರೆ, ಮೂಳೆಗಳ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಆದರೆ ಅನೇಕ (Bone health care) ಪೋಷಕಾಂಶಗಳ ಕೊರತೆಯಿಂದಾಗಿ ಇದೀಗ ಸಾಕಷ್ಟು ಜನರು ಮೂಳೆ

ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಗಂಭೀರ ಮೂಳೆ ರೋಗವಾದ, ಆಸ್ಟಿಯೊಪೊರೋಸಿಸ್ ತಡೆಗಟ್ಟುವಲ್ಲಿ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅತ್ಯಂತ ಪ್ರಮುಖ
ಪೋಷಕಾಂಶಗಳಾಗಿವೆ. ಅವುಗಳ ಜೊತೆಗೆ ಇನ್ನು ಅನೇಕ ಪೋಷಕಾಂಶಗಳು ಮೂಳೆಗಳಿಗೆ ಅಗತ್ಯವಾಗಿವೆ. ಹೀಗಾಗಿ ಮೂಳೆ ಸಂಬಂಧಿತ ಸಮಸ್ಯೆಗಳಿರುವವರು ಈ ಕೆಳಗಿನ ಪೋಷಕಾಂಶಗಳಿರುವ
ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರ ಮೂಲಕ, ಮೂಳೆಗಳನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು. ಮೂಳೆಗಳಿಗೆ (Bone health care) ಅಗತ್ಯವಾಗಿರುವ
ಪೋಷಕಾಂಶಗಳಾವವು ಅಂದರೆ,
- ಮೆಗ್ನೀಸಿಯಮ್: ಶಕ್ತಿಯುತವಾದ ಮೂಳೆಗಳಿಗೆ ಮೆಗ್ನೀಸಿಯಮ್ ಅಗತ್ಯವಾಗಿದೆ. ಇದು ಮೂಳೆಯ ಮ್ಯಾಟ್ರಿಕ್ಸ್ನಲ್ಲಿ ಸಂಯೋಜಿಸಲ್ಪಟ್ಟಿದ್ದು, ಮೂಳೆಗಳಿಗೆ ಬಲ ಒದಗಿಸುತ್ತದೆ.
- ಪೊಟ್ಯಾಸಿಯಮ್: ಮೂತ್ರಪಿಂಡದ ಕ್ಯಾಲ್ಸಿಯಂ ಧಾರಣವನ್ನು ಉತ್ತೇಜಿಸುತ್ತದೆ ಮತ್ತು ಆಸಿಡ್-ಬೇಸ್ ಸಮತೋಲನವನ್ನು ನಿರ್ವಹಿಸುವ ಮೂಲಕ ಮೂಳೆಯನ್ನು ರಕ್ಷಿಸುತ್ತದೆ.
- ವಿಟಮಿನ್ ಸಿ: ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಶಕ್ತಿಯುತವಾದ ಉತ್ಕರ್ಷಣ ನಿರೋಧಕವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಮೂಳೆಗಳಿಗೆ ಶಕ್ತಿ ನೀಡುತ್ತದೆ.
- ರಂಜಕ: ರಂಜಕದ ಸಾಕಷ್ಟು ಸೇವನೆಯು ಬೆಳವಣಿಗೆಯ ವಯಸ್ಸಿನಲ್ಲಿ ಮೂಳೆಗಳ ರಚನೆಗೆ ಅವಶ್ಯಕವಾಗಿದೆ. ಮಕ್ಕಳು ಮತ್ತು ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಂಜಕಯುಕ್ತ ಆಹಾರಗಳನ್ನು ಸೇವಿಸಬೇಕು.
- ವಿಟಮಿನ್ ಕೆ: ಹಸಿರು ಎಲೆಗಳ ತರಕಾರಿಗಳಲ್ಲಿ ಇರುವ ವಿಟಮಿನ್ ಕೆ, ಇದು ಪ್ರಮುಖ ಮೂಳೆ ಪ್ರೋಟೀನ್ಗಳ ಕಾರ್ಬಾಕ್ಸಿಲೇಷನ್ ಪಾತ್ರದ ಮೂಲಕ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು
ಸಿಕ್ತು ಜಯ: ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಲಿವೆ ಎಲ್‌ಕೆಜಿ ಹಾಗೂ ಯುಕೆಜಿ
ಸಹಾಯ ಮಾಡುತ್ತದೆ.
- ಸತು: ಸತು 200 ಕ್ಕಿಂತ ಹೆಚ್ಚು ಕಿಣ್ವಗಳ ರಚನೆಯ ಭಾಗವಾಗಿದೆ. ಕಾಲಜನ್ ಮತ್ತು ಮೂಳೆ ಖನಿಜೀಕರಣದ ಸಾಮಾನ್ಯ ಸಂಶ್ಲೇಷಣೆಗೆ ಸತು ಅವಶ್ಯಕವಾಗಿದೆ.
- ವಿಟಮಿನ್ ಬಿ 12: ವಿಟಮಿನ್ ಬಿ 12 ಆಸ್ಟಿಯೋಬ್ಲಾಸ್ಟ್ ಚಟುವಟಿಕೆ ಮತ್ತು ಮೂಳೆ ರಚನೆಯನ್ನು ಉತ್ತೇಜಿಸಬಹುದು. ಇದರಿಂದ ಶಕ್ತಿಯುತವಾದ ಮೂಳೆಗಳು ರೂಪಗೊಳ್ಳುತ್ತವೆ.

- ಪ್ರೋಟೀನ್: ಪ್ರೋಟೀನ್ ಸೇವನೆಯು ಕ್ಯಾಲ್ಸಿಯಂ ಹೀರಿಕೊಳ್ಳುವ ಮೂಲಕ ಮೂಳೆಯ ಆರೋಗ್ಯವನ್ನು ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ನಿಯಮಿತವಾಗಿ ನಮ್ಮ ಆಹಾರದಲ್ಲಿ
ಪ್ರೋಟೀನ್ ಇರುವುದು ಅಗತ್ಯವಾಗಿದೆ. ಆದರೆ ಪ್ರೋಟಿನ್ ಅಗತ್ಯ ಪ್ರಮಾಣಕ್ಕಿಂತ ಮಿತಿಮೀರಬಾರದು.
ಒಟ್ಟಾರೆಯಾಗಿ ಮೇಲೆ ತಿಳಿಸಿರುವ ಎಲ್ಲ ಪೋಷಕಾಂಶಗಳು ನಿರ್ಧಿಷ್ಟ ಪ್ರಮಾಣದಲ್ಲಿ ನಿಯಮಿತವಾಗಿ ಆಹಾರದ ಮೂಲಕವೇ ತೆಗೆದುಕೊಳ್ಳುವುದು ಉತ್ತಮ. ನಮ್ಮ ಆಹಾರದಲ್ಲಿ ಇರುವ
ಈ ಪೋಷಕಾಂಶಗಳನ್ನೇ ಸೇವಿಸುವ ಮೂಲಕ ನಾವು ಶಕ್ತಿಯುತವಾದ ಮೂಳೆಗಳನ್ನು ಹೊಂದಬಹುದು.