ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಭಾರತೀಯ ಮೂಲದ ಲೇಖಕನ ಕಾದಂಬರಿ

ಲಂಡನ್‌, ಜು. 28: 2021ನೇ ಸಾಲಿನ ಪ್ರತಿಷ್ಠಿತ ‘ಬೂಕರ್‌ ಪ್ರಶಸ್ತಿ‘ಗೆ ಗುರುತಿಸಿರುವ ಕಾದಂಬರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಬ್ರಿಟಿಷ್‌ ಲೇಖಕ ಸಂಜೀವ್ ಸಹೋತಾ ಅವರ ‘ಚೀನಾ ರೂಂ’ ಕಾದಂಬರಿಯೂ ಒಂದಾಗಿದೆ.

2021ರ ಪ್ರಶಸ್ತಿಗೆ 13 ಕಾದಂಬರಿಗಳ ದೀರ್ಘವಾದ ಪಟ್ಟಿಯೊಂದನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯನ್ನು ‘ದಿ ಬೂಕರ್ ಡಜನ್‌’ ಎಂದೂ ಕರೆಯಲಾಗುತ್ತದೆ. ಬ್ರಿಟನ್‌ ಅಥವಾ ಐರ್ಲ್ಯಾಂಡ್‌ನಲ್ಲಿ ಪ್ರಕಟವಾದ 158 ಕಾದಂಬರಿಗಳ ಪೈಕಿ ತೀರ್ಪುಗಾರರು ಈ 13 ಕಾದಂಬರಿಗಳನ್ನು ಆರಿಸಿದ್ದಾರೆ.

ಈ ಪಟ್ಟಿಯಲ್ಲಿ ನೊಬೆಲ್‌ ಪ್ರಶಸ್ತಿ ವಿಜೇತ ಕಜುಯೋ ಇಶಿಗರೊ ಮತ್ತು ಪುಲಿಟ್ಜರ್‌ ಪ್ರಶಸ್ತಿ ವಿಜೇತ ರಿಚರ್ಡ್ ಪವರ್ಸ್ ಅವರ ಕಾದಂಬರಿಗಳು ಕೂಡ ಸ್ಥಾನ ಪಡೆದಿವೆ.

Exit mobile version