ಕೊಳವೆ ಬಾವಿ ದುರಂತ: ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್

Vijayapura: ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ 2 ವರ್ಷದ ಮಗು ಬಿದ್ದಿರುವ ಘಟನೆ ನಡೆದಿದ್ದು, ರಾಜ್ಯಾದ್ಯಂತ ಜನರು, ಬದುಕಿ ಬರಲೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸಾತ್ವಿಕ್​ನನ್ನು (Sathvik) ರಕ್ಷಣೆ ಮಾಡಲು ಭಾರೀ ಪ್ರಯತ್ನಗಳು ನಡೆಯುತ್ತಿವೆ.

ಮುಖ್ಯಾಂಶಗಳು
ವಿಜಯಪುರದಲ್ಲಿ ಕೊಳವೆ ಬಾವಿ ದುರಂತ!
ಇಂದಿನ ಪ್ರಕರಣಕ್ಕೂ ಮುಂಚೆ ಇಂತಹ ಎಷ್ಟು ಪ್ರಕರಣ ನಡೆದಿದ್ದವು!
2008ರಲ್ಲಿ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದ್ದ ದೊಡ್ಡ ದುರಂತ!

ವಿಜಯಪುರ ಜಿಲ್ಲೆಯಲ್ಲಿ ಕೊಳವೆ ಬಾವಿಗೆ (Tube Well) ಮಕ್ಕಳು ಬೀಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ 2 ಘಟನೆಗಳು ನಡೆದಿದ್ದು, ಈ ಹಿಂದೆ ಕೂಡಾ ರಕ್ಷಣೆ ಮಾಡಲು ಭಾರೀ ಯಂತ್ರಗಳ ಮೂಲಕ ಭೂಮಿಯನ್ನು ಅಗೆಯಲಾಗಿತ್ತು. ಜೆಸಿಬಿಗಳ (JCB) ಮೂಲಕ ಭೂಮಿಯನ್ನು ತೋಡಿ ಭಾರೀ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ದೊಡ್ಡ ಮಟ್ಟದಲ್ಲಿ ರಕ್ಷಣಾ ಕಾರ್ಯ ನಡೆದರು ಬಾಲಕಿಯನ್ನು ಜೀವಂತವಾಗಿ ಪಡೆಯಲು ಆಗಲಿಲ್ಲ. ಏಕೆಂದರೆ ಭೂಮಿಯನ್ನು ತೋಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಬಾಲಕಿ ಮೃತಪಟ್ಟಿದ್ದಳು. ಇದಕ್ಕೆ ಇಡೀ ರಾಜ್ಯದ ಜನ ಅಯ್ಯೋ.. ಎಂದು ತಲೆ ಮೇಲೆ ಕೈ ಹೊತ್ತುಕೊಂಡಿದ್ದರು.

ಸತೀಶ್ ಹಾಗೂ ಪೂಜಾ (Sathish and Pooja) ದಂಪತಿಯ ಮಗನಾಗಿರುವ ಸಾತ್ವಿಕ್ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದು, ಈ ಮನಮಿಡಿಯುವ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ. 2008ರ ಕೊಳವೆ ಪ್ರಕರಣ ಆದ ಮೇಲೆ 7 ವರ್ಷ ತುಂಬುವಷ್ಟರಲ್ಲಿ ಅಂದರೆ 2014ರಲ್ಲಿ ಮತ್ತೊಂದು 3 ವರ್ಷದ ಮಗು ಅಕ್ಷತಾ ಹನುಮಂತ ಪಾಟೀಲ್ ಕೊಳವೆ ಬಾವಿಗೆ ಬಿದ್ದಿತ್ತು.

ಹೆತ್ತ ತಾಯಿ ಆಕ್ರಂದನ ಮುಗಿಲು ಮುಟ್ಟಿದ್ದು, ಜೊತೆಗೆ ಕೊಳವೆ ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೂಡ ಕೇಳಿ ಬರ್ತಿದೆ. ಈ ಮೂಲಕ ಮಗುವಿನ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ.

Exit mobile version