ಬಾಯಿ ಚಪ್ಪರಿಸಿ ಕುಡಿಯುವ ಬೌರ್ನ್‌ವಿಟಾ ಆರೋಗ್ಯಕರ ಪಾನೀಯವಲ್ಲ: ಕೇಂದ್ರ ಸರ್ಕಾರ!

ಪ್ರತಿದಿನ ಮಕ್ಕಳಿಗೆ ಹಾಲಿನೊಂದಿಗೆ ಬೆರೆಸಿ ನೀಡುವ ಬೌರ್ನ್‌ವಿಟಾದಲ್ಲಿ (Bournvita) ಮಕ್ಕಳ ಆರೋಗ್ಯ ಕ್ಕೆ ಉತ್ತಮವಾಗುವ ಅಂಶಗಳಿಗಿಂತ ಪರಿಣಾಮ ಉಂಟುಮಾಡುವ ಅಂಶಗಳೇ ಹೆಚ್ಚಿವೆ ಎನ್ನುವ ವಿಡಿಯೋ ವೈರಲ್ ಆಗಿದ್ದ ಹಿನ್ನಲೆಯಲ್ಲಿ ಸಾಕಷ್ಟು ವಿವಾದ ಕೇಳಿ ಬಂದಿತ್ತು.ಈ ಬಳಿಕ ಕೇಂದ್ರ ಸರ್ಕಾರ ಇದೀಗ ಹೆಲ್ತ್ ಡ್ರಿಂಕ್ (Health Drink) ಬೌರ್ನ್ವಿಟಾ ಕುರಿತಾಗಿ ಮಹತ್ವದ ಆದೇಶ ನೀಡಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿ (E-Commerce Company) ಗಳಿಗೆ ಸಲಹೆ ನೀಡಿದ್ದು, ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೌರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ಆರೋಗ್ಯಕರ ಪಾನೀಯ ವರ್ಗದಿಂದ ತೆಗೆದುಹಾಕುವಂತೆ ಇನ್ಯಾವತ್ತೂ ಅವು ಆರೋಗ್ಯದಾಯಕ ಪೇಯಗಳು ಎಂದು ನಮೂದಿಸಬಾರದು ಎಂದು ನಿರ್ದೇಶನ ನೀಡಿದೆ.

ಇನ್ನು ಮಕ್ಕಳಿಗೆ ಬೆಸ್ಟ್ ಎಂದೇ ಕರೆಸಿಕೊಳ್ಳುವ ಬೌರ್ನ್ವಿಟಾ ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗವು (NCPCR) ಸುರಕ್ಷತಾ ಮಾನದಂಡಗಳ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಕಾರಣ ಈ ರೀತಿಯ ಪವರ್ ಸಪ್ಲಿಮೆಂಟ್‌ಗಳನ್ನು ‘ಆರೋಗ್ಯ ಪಾನೀಯಗಳು’ ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆದೇಶ ನೀಡಿದೆ.
ದೇಶದ ಆಹಾರ ಕಾನೂನುಗಳಲ್ಲಿ ‘ಆರೋಗ್ಯ ಪಾನೀಯಗಳ’ ಬಗ್ಗೆ ವ್ಯಾಖ್ಯಾನ ನೀಡಿಲ್ಲ. ಆರೋಗ್ಯ ಪಾನೀಯಗಳೆಂದು ಏನನ್ನಾದರೂ ಮಾರಾಟ ಮಾಡುವುದು ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಅದು ಉಲ್ಲೇಖಿಸಿದೆ.

ಈ ಹಿಂದೆ ಯೂಟ್ಯೂಬರ್ (Youtuber) ಒಬ್ಬರು ತನ್ನ ವಿಡಿಯೋದಲ್ಲಿ ಬೌರ್ನ್‌ವಿಟಾದ ಅನಾರೋಗ್ಯಕರ ಸ್ವಭಾವದ ಬಗ್ಗೆ ವಿಡಿಯೋ ಮಾಡಿದ ಮೇಲೆ ಈ ಕುರಿತಾಗಿ ವಿವಾದ ಶುರುವಾಗಿತ್ತು. ಅವರು ತನ್ನ ವಿಡಿಯೋದಲ್ಲಿ ಬೌರ್ನ್‌ವಿಟಾದಲ್ಲಿ ಅತಿಯಾದ ಸಕ್ಕರೆ, ಕೋಕೋ ಘನವಸ್ತುಗಳು ಮತ್ತು ಹಾನಿಕಾರಕ ಬಣ್ಣಗಳು ಕ್ಯಾನ್ಸರ್ (Cancer) ಸೇರಿದಂತೆ ಮಕ್ಕಳಲ್ಲಿ ಗಂಭೀರವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದರು.

ಹಾಗಾಗಿ ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (CPCR) ಕಾಯಿದೆಯ ಸೆಕ್ಷನ್ (3) ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಯಾದ ಸಿಆರ್ ಪಿಸಿ (CRPC) ಕಾಯಿದೆ 2005ರ ಸೆಕ್ಷನ್ 14ರ ಅಡಿಯಲ್ಲಿ ವಿಚಾರಣೆಯ ನಂತರ, ಎಫ್‌ಎಸ್‌ಎಸ್ ಕಾಯಿದೆ 2006ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಎಫ್‌ಎಸ್‌ಎಸ್‌ಎಐ (FSSAI) ಮತ್ತು ಮೊಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಬೌರ್ನ್‌ವಿಟಾ ಆರೋಗ್ಯ ಪಾನೀಯವಲ್ಲ ಹೆಚ್ಚು ಸಕ್ಕರೆ ಪ್ರಮಾಣವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ (Central Govt) ಎಚ್ಚರಿಕೆ ನೀಡಿದೆ.

Exit mobile version