Bengaluru : ಬಾಯ್‌ಕಾಟ್ (Boycott Banaras cinema trends in socialmedia) ಬಿಸಿ ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ಗೂ ಪ್ರವೇಶ ಮಾಡಿದೆ.
ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ಪುತ್ರನಿಗಾಗಿ ನಿರ್ಮಾಣ ಮಾಡಿರುವ ʼಬನಾರಸ್ʼ(Boycott Banaras cinema trends in socialmedia) ಚಿತ್ರವನ್ನು ಬಾಯ್‌ಕಾಟ್ ಮಾಡುವಂತೆ ಅಭಿಯಾನ ಪ್ರಾರಂಭವಾಗಿದೆ.
https://vijayatimes.com/healthtips-of-dill-leaves/
ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧಿಸಿರುವ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ “ಬನಾರಸ್” ಚಿತ್ರವನ್ನು ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು.
ಚಿತ್ರವನ್ನು ಬಹಿಷ್ಕರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನ ಪ್ರಾರಂಭವಾಗಿದೆ.
ಹಿಂದೂಪರ ಸಂಘಟನೆಗಳು ಇದೀಗ #boycottBanaras ಟ್ರೆಂಡ್ ಆರಂಭಿಸಿದ್ದು, ಚಿತ್ರ ಹಿಂದೂ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಅನೇಕ ಪೋಸ್ಟ್‌ಗಳನ್ನು ಹಾಕಿ ಅಭಿಯಾನ ಆರಂಭಿಸಿದ್ದಾರೆ.
ಮೇಲ್ನೋಟಕ್ಕೆ ಗಣೇಶ ಚತುರ್ಥಿಗೆ ಶುಭ ಕೋರುವ ಜಮೀರ್ ಅಹ್ಮದ್‌ಖಾನ್, ಅತ್ತ ದೆಹಲಿಯಲ್ಲಿ ವಕೀಲ್ ಕಪಿಲ್ ಸಿಬಲ್ ರನ್ನು ಭೇಟಿ ಮಾಡಿ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ನಡೆಸದಂತೆ ಸುಪ್ರೀಂಕೋರ್ಟ್ನಲ್ಲಿ ವಾದ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತಾರೆ.
ಹಿಂದೂ ವಿರೋಧಿ ಶಾಸಕನಿಗೆ ಚಿತ್ರವನ್ನು ಬಹಿಷ್ಕರಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಹಿಂದೂ ಸಂಘಟನೆಗಳು ಕರೆ ನೀಡಿವೆ. ಇನ್ನು ಬನಾರಸ್ ಚಿತ್ರ ಇದೇ ಸೆಪ್ಟೆಂಬರ್ 4 ರಂದು ಕನ್ನಡ, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.