ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿಎಂ ಇಬ್ರಾಹಿಂ

Bengaluru : ರಾಜ್ಯ ವಿಧಾನಸಭಾ ಚುನಾವಣೆಯ (State Assembly Elections) ನಂತರ ಕೇವಲ 19 ಸ್ಥಾನಗಳನ್ನು ಪಡೆದುಕೊಂಡಿದ್ದು, ಜೆಡಿಎಸ್ (JDS) ಪಕ್ಷದ ಸಿಎಂ ಇಬ್ರಾಹಿಂ (Ibrahim) ಅವರು ಹೀನಾಯ ಸೋಲಿನ ಹೊಣೆ ಹೊತ್ತುಕೊಂಡು (brahim quits as JDS stateChief) ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ರಾಜೀನಾಮೆ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಸಿಎಂ ಇಬ್ರಾಹಿಂ ಹೊಸ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿ ಶುಭ ಹಾರೈಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ (BJP) ಆಡಳಿತ ವಿರೋಧಿ ಇತ್ತು. ಆರ್ಥಿಕ ಸಂಪನ್ಮೂಲ ಹಾಗೂ ಮಗದೊಂದ ವಿಚಾರದಲ್ಲಿ ಕಾಂಗ್ರೆಸ್ (Congress) ಗೆದ್ದಿದೆ.

ಪ್ರಾದೇಶಿಕ ಪಕ್ಷವಾಗಿ, ಜೆಡಿಎಸ್‌ಗೆ ಅದೇ ಮಟ್ಟದಲ್ಲಿ ಸ್ಪರ್ಧಿಸಲು ಹಣ ಮತ್ತು ಬೆಂಬಲದ ಕೊರತೆಯಿದೆ, ಆದರೂ ಕೂಡ 60 ಲಕ್ಷ ಮತಗಳನ್ನು ಪಡೆಯಲು ಸಾಧ್ಯವಾಯಿತು.

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗೆ (Lok Sabha Elections) ಪಕ್ಷವು ಶ್ರಮಿಸುವತ್ತ ಗಮನ ಹರಿಸಿದೆ.

ಇದನ್ನೂ ಓದಿ : https://vijayatimes.com/kota-srinivas-poojary-outraged/

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸಿರುವ ಸಿಎಂ ಇಬ್ರಾಹಿಂ , ಹಿಂದಿನ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿ ಎಂದು ಹಾರೈಸಿದರು.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರಕ್ಕೆ (Congress Govt) ಮೂರು ತಿಂಗಳ “ಹನಿಮೂನ್” ಅವಧಿಯನ್ನು ನೀಡಿದರು.

ಜೆಡಿಎಸ್‌ನಲ್ಲಿ ನಿಮ್ಮ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ (brahim quits as JDS stateChief) ಮಾಡುತ್ತೇನೆ ಮತ್ತು ಜನರ ನಡುವೆ ಉಳಿಯುತ್ತೇನೆ ಎಂದು ಉತ್ತರಿಸಿದರು.

ಕಾಂಗ್ರೆಸ್‌ನಲ್ಲಿದ್ದರೆ ನಿಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಗೌರವ ಇಲ್ಲದ ಕಡೆ ನಾನು ಇರುವುದಿಲ್ಲ ಮತ್ತು ನಾನು ಅಂತಹ ಸ್ಥಾನದಲ್ಲಿ ಇರಲು ಇಷ್ಟ ಪಡುವುದಿಲ್ಲ.

ಇದನ್ನೂ ಓದಿ : https://vijayatimes.com/chennai-super-kings-2023/

ಮಾನಕ್ಕಾಗಿ ಹಾಗೂ ಮರ್ಯಾದೆಗಾಗಿಯೇ ನಾನು ಪಕ್ಷವನ್ನು ಬಿಟ್ಟು ಬಂದೆ. ನನಗೆ ಅಧಿಕಾರದ ಆಸೆ ಇಲ್ಲ ಎಂದರು.

ಖಾದರ್ (UT Khader) ಅವರಿಗೆ ಸ್ಪೀಕರ್ ಸ್ಥಾನ ನೀಡಿದ ವಿಚಾರದಲ್ಲಿ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಖಾದರ್ ಅವರಿಗೆ ಉಪಮುಖ್ಯಮಂತ್ರಿಯಾಗಬಹುದಿತ್ತು. ಈಗ ಸ್ಪೀಕರ್ ಮಾಡಿದ್ದು, ಸ್ಪೀಕರ್ ಮಾತನಾಡಲು ಸಾಧ್ಯವಾಗುವುದಿಲ್ಲ. ಎದ್ದು ಕುಳಿತರೆ ಸಾಕು ಅಷ್ಟೆ. ಆದರೂ ಖಾದರ್ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಮತ್ತು ನೈತಿಕ ಹೊಣೆಹೊತ್ತು ಇವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ಜೆಡಿಎಸ್ ಪರಿಶೀಲನಾ ಸಭೆ ನಡೆಯಲಿದೆ.

ಈ ಪರಿಶೀಲನಾ ಸಭೆಯಲ್ಲಿ ರಾಜ್ಯಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈಗಾಗಲೇ ದೇವೇಗೌಡರಿಗೆ (Devegowda) ರಾಜಿ ಪತ್ರವನ್ನು ರವಾನಿಸಲಾಗಿದೆ.

Exit mobile version